ನಟಿ ರಾಶಿ ಅವರು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಇವರಂಥ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಮೂಲಕ, ಕನ್ನಡ ಸಿನಿಪ್ರಿಯರಿಗೆ ಪರಿಚಯ ಇರುವ ನಟಿ. ರಾಶಿ ಅವರು ಮೂಲತಃ ಚೆನ್ನೈನವರು. ಆದರೆ ಕನ್ನಡ, ತೆಲುಗು, ತಮಿಳು ಈ ಮೂರು ಭಾಷೆಗಳಲ್ಲಿ ನಟಿಸಿ ಮನೆಮಾತಾಗಿರುವವರು. ಮದುವೆಯಾದ ನಂತರ ಬಿಗ್ ಬ್ರೇಕ್ ಪಡೆದುಕೊಂಡಿದ್ದ ರಾಶಿ ಅವರು ಇತ್ತೀಚೆಗೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟರು.
ನಟಿ ರಾಶಿ ಅವರು ನಟನೆ ಶುರು ಮಾಡಿದ್ದು, ಬಾಲನಟಿಯಾಗಿ. ಚೆನ್ನೈನ ಸ್ಟುಡಿಯೋ ಒಂದರ ಹತ್ತಿರ ನಟಿ ರಾಶಿ ಅವರ ತಂದೆ ತಾಯಿ ಟೀ ಅಂಗಡಿ ಇಟ್ಟಿದ್ದರಂತೆ. ಈ ಕಾರಣಕ್ಕೆ ಅವರಿಗೆ ಸ್ಟುಡಿಯೋಗೆ ಶೂಟಿಂಗ್ ಗಾಗಿ ಬರುವ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಎಲ್ಲರ ಪರಿಚಯ ಇತ್ತಂತೆ. ಈ ರೀತಿಯಾಗಿ ನಟಿ ರಾಶಿ ಅವರಿಗೆ ಬಾಲಕಲಾವಿದೆಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತು. ಮೊದಲು ಬಾಲನಟಿಯಾಗಿ ನಂತರ ಹೀರೋಯಿನ್ ಆಗಿ, ಬಳಿಕ ಸ್ಟಾರ್ ನಟಿಯಾಗಿ ಹೆಸರು ಮಾಡಿದರು.

ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಡನೆ ಕೂಡ ನಟಿಸಿದ್ದಾರೆ ರಾಶಿ. ಆದರೆ ಇವರಿಗೆ ತಾನೊಬ್ಬ ಒಳ್ಳೆಯ ಹೆಂಡತಿ ಆಗಬೇಕು ಎನ್ನುವ ಕನಸು ಇತ್ತಂತೆ, ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದುಕೊಳ್ಳುವ ಹಾಗೆ ಒಳ್ಳೆಯ ಹೆಂಡತಿ ಆಗಬೇಕು, ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗಬೇಕು ಎನ್ನುವ ಕನಸು ರಾಶಿ ಅವರಿಗೆ ಇತ್ತು. ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕರ ಜೊತೆ ಕೂಡ ಈ ವಿಚಾರವನ್ನ ಹೇಳಿಕೊಳ್ಳುತ್ತಿದ್ದರಂತೆ.
ಆದರೆ ನಟಿ ರಾಶಿ ಅವರಿಗೆ ಒಬ್ಬ ಸ್ಟಾರ್ ಹೀರೋ ಮೇಲೆ ಕ್ರಶ್ ಇತ್ತು, ಅದು ಎಷ್ಟರ ಮಟ್ಟಿಗೆ ಎಂದರೆ ಮದುವೆ ಅಂತ ಆದ್ರೆ ಅವರನ್ನೇ ಎಂದು ಪಟ್ಟು ಹಿಡಿದು ಕೂತಿದ್ದರಂತೆ. ಆ ನಟ ಮತ್ಯಾರು ಅಲ್ಲ, ತೆಲುಗು ಸ್ಟಾರ್ ನಟ ವೆಂಕಟೇಶ್ ಅವರು. ಹೌದು, ನಟ ವೆಂಕಟೇಶ್ ಅವರನ್ನು ಮದುವೆಯಾಗಬೇಕು ಎಂದು ರಾಶಿ ಅವರಿಗೆ ತುಂಬಾ ಆಸೆ ಇತ್ತಂತೆ. ಆದರೆ ಅವರಿಗೆ ಅದಾಗಲೇ ಮದುವೆಯಾಗಿ ಮಗು ಇದ್ದ ಕಾರಣ, ರಾಶಿ ಅವರು ಸುಮ್ಮನಾದರು.

ಬಳಿಕ ರಾಜೀವ್ ಗಾಂಧಿ ಅವರನ್ನು ಮದುವೆಯಾಗಬೇಕು ಎಂದುಕೊಂಡಿದ್ದರಂತೆ. ಆಗಲು ಹಠ ಮಾಡಿದ್ದಾರಂತೆ. ಕೊನೆಗೆ ನಿಜಾಮ್ ಎನ್ನುವ ಸಿನಿಮಾ ಚಿತ್ರೀಕರಣದ ವೇಳೆ ಸಹನಿರ್ದೇಶಕರಾದ ಶ್ರೀಮುನಿ ಅವರನ್ನು ಪ್ರೀತಿಸಿ ಮದುವೆಯಾದರು. ಬಳಿಕ ಬಿಗ್ ಬ್ರೇಕ್ ಪಡೆದು. ಇತ್ತೀಚಿಗೆ ಮತ್ತೆ ನಟನೆ ಶುರು ಮಾಡಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದವರು ಈಗ ಧಾರಾವಾಹಿ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ.