ಜಗತ್ತು ನಂಬಿಕೆ ಹಾಗೂ ಮೂಢನಂಬಿಕೆಗಳೆಂಬ ತೂಗುಗತ್ತಿಯ ಅಡಿಯಲ್ಲಿ ಜೀವಿಸುತ್ತಿದೆ. ಕೆಲವೊಬ್ಬರು ಮಂತ್ರ-ತಂತ್ರಗಳನ್ನು ನಂಬುತ್ತಾರೆ ಮತ್ತು ಇನ್ನೂ ಕೆಲವೊಬ್ಬರು ಅವುಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ ಕೆಲವೊಂದು ಸಂಧರ್ಭದಲ್ಲಿ ಕೆಲವು ಘಟನೆಗಳು ನಂಬಿಕೆಗೂ ಮೀರಿದ್ದಾಗಿರುತ್ತದೆ. ಸದ್ಯ, ಅಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಪಕ್ಕದಲ್ಲಿ ಕೂರಿಸಿ ಯಾವುದೋ ಮಂತ್ರ ಹೇಳುತ್ತಾನೆ. ಆಕೆಯ ಕೆನ್ನೆ ಹಾಗೂ ಕಣ್ಣುಗಳನ್ನು ಸ್ಪರ್ಶಿಸಿ ಮಂತ್ರ ಪಠಿಸುತ್ತಾನೆ. ಅಲ್ಲಿಯ ವರೆಗೂ ಮೌನವಾಗಿದ್ದ ಯುವತಿ ಮಂತ್ರ ಮುಗಿಯುವ ವೇಳೆ ಜೋರಾಗಿ ಅಳಲು ಆರಂಭಿಸುತ್ತಾಳೆ. ವಿಡಿಯೋ ನೋಡಿದವರೆಲ್ಲ ಆಶ್ಚರ್ಯ ಚಕಿತರಾಗಿದ್ದಾರೆ. ಮಂತ್ರದಿಂದ ಈ ರೀತಿ ಮನದ ದುಃಖವನ್ನು ಹೊರ ಹಾಕಲಿ ಸಾಧ್ಯವೇ ಎಂದು ಹುಬ್ಬೇರಿಸುತ್ತಿದ್ದಾರೆ.
ವಿಡಿಯೋ ವೈರಲ್ ಆಗಿ ಸಾಕಷ್ಟು ವೀಕ್ಷಣೆ ಕಂಡಿದೆ. ಇದನ್ನು ನೋಡಿ ಕೆಲವೊಬ್ಬರು ವಿಸ್ಮಯಕ್ಕೊಳಗಾದರೆ, ಮತ್ತೆ ಕೆಲವರು ಇದು ‘ಅಭಿನಯ ತರಭೇತಿ ಸುಳ್ಳು ಸುದ್ದಿ ಹಬ್ಬಿಸಬೇಡಿ, ಈಗಿನ ಕಾಲದಲ್ಲಿ ಮಂತ್ರಗಳೆಲ್ಲ ಫಲಿಸುವುದಿಲ್ಲ ಎಂದೆಲ್ಲ ಕಮೆಂಟ್ ಹಾಕಿದ್ದಾರೆ. ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ ಆದರೆ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.



