ಬಿಗ್ಬಾಸ್ ಮನೆಯಲ್ಲಿ ದೆವ್ವ ಭೂತ ಇದ್ಯಾ ? ಸ್ಪರ್ಧಿಗಳೆಲ್ಲ ಲೆ ಮಲಗಿದ್ದಾಗ ದಿಢೀರನೆ ಗೆಜ್ಜೆ ಶಬ್ಧ ಬಂದಿದ್ದು ಕೆಲವರು ಗಾಬರಿ ಆಗಿದ್ದರು. ನಮಗೆ ಭಯವಾಗುತ್ತಿದೆ ಬಾಗಿಲು ಮುಚ್ಚಿ ಎಂದು ಜಾಹ್ನವಿ ಕೇಳಿದ್ದರು. ಶೌಚಾಲಯದಲ್ಲಿ ರಕ್ಷಿತಾ ರಾರಾ ಸಾಂಗ್ ಹಾಡ್ತಾ ಡ್ಯಾನ್ಸ್ ಮಾಡುತ್ತಿದ್ದಳು ಅಂತ ಇಬ್ಬರೂ ಸುಳ್ಳು ಸುದ್ದಿ ಹರಡಿದ್ದರು. ಅಶ್ವಿನಿ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದು ಗೊತ್ತಾಗಿತ್ತು. ಇದೆಲ್ಲದರ ಬಗ್ಗೆ ವಾರಂತ್ಯದ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಲು ಬರ್ತಿದ್ದಾರೆ. ದೆವ್ವ ಬಿಡಿಸಲು ಬರ್ತಿದ್ದಾರೆ ಕಿಚ್ಚ ಸುದೀಪ ಎಂದು ಪ್ರೋಮೊ ರಿಲೀಸ್ ಮಾಡಿದ್ದಾರೆ

ಜಾಹ್ನವಿ ಹಾಗೂ ಅಶ್ವಿನಿ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕೋಣ ಎಂದು ಗುಸುಗುಸು ಮಾತನಾಡಿದನ್ನು ತೋರಿಸಲಾಗಿದೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ರಕ್ಷಿತಾಳನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಸುದೀಪ ಏನು ಮಾತನಾಡ್ತಾರೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ರಕ್ಷಿತಾ ಮೇಲೆ ಜಾಹ್ನವಿ ಹಾಗೂ ಅಶ್ವಿನಿ ಯಾಕೆ ಮುಗಿಬೀಳ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಗಿಲ್ಲಿ ನಟ ನೇರವಾಗಿಯೇ ಇಬ್ಬರಿಗೂ ತಿರುಗೇಟು ಕೊಡುತ್ತಿದ್ದಾರೆ. ರಕ್ಷಿತಾ ಕೂಡ ಯಾವುದಕ್ಕೂ ಹೆದರ ದೇ ಆಡುತ್ತಿದ್ದಾರೆ.
ನಿರೂಪಕಿ ವಿದ್ಯಾ ಮಲ್ನಾಡ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ವರ್ತನೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಆ ವೀಡಿಯೋ ಕೂಡ ವೈರಲ್ ಆಗ್ತಿದೆ. ಇನ್ನು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದೇ ವಿಚಾರ ಚರ್ಚೆ ಆಗುತ್ತಿದೆ.
ರಕ್ಷಿತಾಳನ್ನು ಇಬ್ಬರು ಇಮಿಟೇಟ್ ಮಾಡುವುದು, ಸ್ಲಮ್ ಎಂದು ಕರೆದಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ರಿಲೀಸ್ ಆಗಿರುವ ಹೊಸ ಪ್ರೋಮೊ ಕಾಮೆಂಟ್ ಬಾಕ್ಸ್ನಲ್ಲಿ ಅಶ್ವಿನಿ, ಜಾಹ್ನವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ



