ಸಂಗೀತಾ ಭಟ್ ಒಬ್ಬ ಕನ್ನಡದ ನಾಯಕ ನಟಿ ಜೊತೆಗೆ ಈಕೆ ಕನ್ನಡ ಕಿರತೆರೆಯ ನಾಯಕ ನಟ ಸುದರ್ಶನ್ ರಂಗಪ್ರಸಾದ್ ರವರ ಹೆಂಡತಿ. ಇತ್ತೀಚೆಗಷ್ಟೇ ಇವರು ನಟಿಸಿದ ಕಮಲ್ ಶ್ರೀದೇವಿ ಎಂಬ ಸಿನಿಮಾ ರಿಲೀಸ್ ಆಗಿತ್ತು. ಮದುವೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಕೂಡ ಇತ್ತೀಚೆಗೆ ತಮಗೆ ಮಕ್ಕಳು ಬೇಡ ಎಂಬುದಾಗಿ ನಿರ್ಧರಿಸಿದ್ದೇವೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಆದರೆ ಸಡನ್ ಆಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವಂತ ಫೋಟೋವನ್ನು ತಮ್ಮ instagram ನಲ್ಲಿ ಹಾಕಿ ಈ ತಪ್ಪನ್ನು ಯಾರು ಮಾಡಬೇಡಿ ಎಂಬುದಾಗಿ ಬರೆದುಕೊಂಡಿದ್ದಾರೆ.

ಈ ಪೋಸ್ಟನ್ನ ಯಾರೂ ಕೂಡ ನಿರ್ಲಕ್ಷಿಸಬೇಡಿ ಮಹಿಳೆಯರು ಮತ್ತು ಮಹಿಳೆಯರ ಕಾಳಜಿಯನ್ನು ವಹಿಸುವ ಪ್ರತಿಯೊಬ್ಬ ಪುರುಷರು ಕೂಡ ಈ ಪೋಸ್ಟನ್ನ ನಿರ್ಲಕ್ಷಿಸಬೇಡಿ. ಇದು ಯಾವುದೇ ಕಾರಣಕ್ಕೂ ಸಿಂಪತಿ ಅಥವಾ ಗಮನ ಸೆಳೆಯುವ ಕಾರಣಕ್ಕಾಗಿ ಹಾಕಿರುವ ಪೋಸ್ಟ್ ಅಲ್ಲ. ಅಂತಹ ಸಂದರ್ಭದಲ್ಲಿ ಮಹಿಳೆಯರಿಗೆ ನೀನು ಒಬ್ಬಂಟಿಯಲ್ಲ ಎಂದು ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಪುರುಷರು ಮಾಡಬೇಕು.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ನನ್ನ ಪಾಲಿಗೆ ತುಂಬಾ ಅತ್ಯಂತ ಕಠಿಣವಾದ ನೋವಿನ ದಿನಗಳಾಗಿದ್ದವು. ಸಂಗೀತ ಭಟ್ ರವರಿಗೆ ಕೆಲವು ತಿಂಗಳುಗಳಿಂದ ಋತು ಚಕ್ರದ ಸಮಸ್ಯೆ ಉಂಟಾಗಿತ್ತು. ಅವರನ್ನು ಪರೀಕ್ಷಿಸಿದ ಡಾಕ್ಟರ್ ಅವರ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ ಅಷ್ಟು ಗೆಡ್ಡೆ ಇದೆ ಎಂಬುದಾಗಿ ತಿಳಿಸಿದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಡಾಕ್ಟರ್ ಸಲಹೆ ನೀಡಿದರು ಆದರೆ ಸ್ವಸ್ತ್ರ ಚಿಕಿತ್ಸೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು ಒಂದು ತಿಂಗಳ ಸಮಯ ತೆಗೆದುಕೊಂಡೆ. ಕೆಲಸದ ಕಮೆಂಟ್ ಮೆಂಟ್ ನಿಂದ ನಾನು ಶಸ್ತ್ರಚಿಕಿಸೆ ಮಾಡಿಸಿಕೊಳ್ಳಲು ವಿಳಂಬ ಮಾಡುತ್ತಲೇ ಬಂದೆ ಆದರೆ ಆರೋಗ್ಯ ಯಾರನ್ನು ಕರೆಯುವುದಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆಯ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಿ ಅದರ ಬಗ್ಗೆ ವಿವರಿಸಿದ್ದರು . ಹೀಗಾಗಿ ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡೆ ಎಂದು ತಮ್ಮ ಆಪರೇಷನ್ ಬಗೆಗಿನ ವಿಷಯವನ್ನು ಹಂಚಿಕೊಂಡಿದ್ದರು.
ನನ್ನ ಪತಿ ಸುದರ್ಶನ್ ಪ್ರತಿ ಕ್ಷಣದಲ್ಲಿ ಪ್ರತಿ ಪರೀಕ್ಷೆಯಲ್ಲೂ ಕೂಡ ನನ್ನ ಜೊತೆಗಿದ್ದು ಅಚಲ ಶಕ್ತಿ ಮತ್ತು ಪ್ರೀತಿಯಿಂದ ನನ್ನೊಂದಿಗೆ ನಿಂತರು. ನಮ್ಮ ನಮ್ಮನ್ನು ಪ್ರೀತಿಸುವವರು ನಮ್ಮ ಜೊತೆಯಲ್ಲಿದ್ದಾಗ ಯಾವ ನೋವು ಕೂಡ ನಮ್ಮನ್ನು ಕುಗ್ಗಿಸಲಾಗುವುದಿಲ್ಲ. ನಾನು ಉಸಿರಾಡಲು ನೀನೇ ಕಾರಣ ನೀನೇ ನನ್ನ ಸುರಕ್ಷಿತ ತಾಣ ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯರು ಮುಟ್ಟಿನ ರಕ್ತಸ್ರಾವ, ನೋವಿನ ಬಗ್ಗೆ ಹಿಂಜರಿಯಬೇಡಿ,ನಿರ್ಲಕ್ಷ ಮಾಡಬೇಡಿ. ಕೆಲಸದಲ್ಲಿ ಎಷ್ಟೇ ಬಿಸಿಯಾಗಿದ್ದರು ಕೂಡ ತಪಾಸಣೆ ಮಾಡಿಸಿಕೊಳ್ಳುವುದನ್ನ ಮುಂದೂಡಬೇಡಿ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ.



