ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದರು ಬಂದ ಕಾಲದಲ್ಲಿ, ಒಂದು ವಿಭಿನ್ನವಾದ ರೌಡಿಸಂ ಕಥೆ ಭಾರಿ ಸದ್ದು ಮಾಡಿ, ಯಶಸ್ವಿಯಾಗಿತ್ತು, ಅದು ದುನಿಯಾ. ಸೂರಿ ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ದುನಿಯಆ ವಿಜಯ್ ಅವರು ಹೀರೋ ಆದರೆ, ರಶ್ಮಿ ಅವರು ಹೀರೋಯಿನ್. ಈ ಸಿನಿಮಾದ ಕಥೆ, ಆಕ್ಷನ್, ಲವ್ ಸ್ಟೋರಿ ಎಲ್ಲವೂ ಸಹ ಜನರಿಗೆ ತುಂಬಾ ಇಷ್ಟವಾಗಿತ್ತು. ದುನಿಯಾ ಸಿನಿಮಾ ಹಲವರ ಬದುಕನ್ನೇ ಬದಲಾಯಿಸಿತು. ಈ ಸಿನಿಮಾ ಮೂಲಕ ಹಿಟ್ ಆದವರಲ್ಲಿ ಲೂಸ್ ಮಾದ ಯೋಗಿ ಅವರು ಸಹ ಒಬ್ಬರು. ಇದೀಗ ಇವರು ಮತ್ತು ದುನಿಯಾ ವಿಜಯ್ ಅವರ ನಡುವಿನ ಮನಸ್ತಾಪದ ಬಗ್ಗೆ ಪೂರ್ತಿ ಮಾಹಿತಿ ಸಿಕ್ಕಿದೆ.

ಲೂಸ್ ಮಾದ ಯೋಗಿ ಅವರು ಮತ್ಯಾರು ಅಲ್ಲ. ದುನಿಯಾ ವಿಜಯ್ ಅವರ ಅಕ್ಕನ ಮಗ. ದುನಿಯಾ ಸಿನಿಮಾ ಪ್ರೊಡ್ಯುಸ್ ಮಾಡಿದ್ದು ಯೋಗಿ ಅವರ ತಂದೆ. ಈ ಸಿನಿಮಾದಲ್ಲಿ ವಿಜಯ್ ಅವರು ಹೀರೋ ಆದರೆ, ಲೂಸ್ ಮಾದ ಪಾತ್ರದಲ್ಲಿ ಯೋಗಿ ನಟಿಸಿದರು. ವಿಜಯ್ ಅವರು ಹಲವು ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು ಸಹ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ದುನಿಯಾ ಸಿನಿಮಾ. ಲೂಸ್ ಮಾದ ಪಾತ್ರದ ಮೂಲಕ ಯೋಗಿ ಅವರಿಗೂ ಬಹಳ ಕ್ರೇಜ್ ಸೃಷ್ಟಿಯಾಯಿತು. ಈ ಪಾತ್ರ ಎಷ್ಟು ಫೇಮಸ್ ಆಗಿದೆ ಅಂದ್ರೆ ಯೋಗಿ ಅವರ ಹೆಸರಿನ ಜೊತೆಗೆ ಲೂಸ್ ಮಾದ ಅನ್ನೋ ಹೆಸರು ಸೇರಿಕೊಂಡಿತು.
ಇವತ್ತಿಗೂ ಜನ ಇವರನ್ನು ಲೂಸ್ ಮಾದ ಯೋಗಿ ಅಂತಲೇ ಕರೆಯುತ್ತಾರೆ. ದುನಿಯಾ ನಂತರ ವಿಜಯ್ ಅವರು ಹಾಗೂ ಯೋಗಿ ಅವರು ಇಬ್ಬರು ಸಹ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆದರು. ಆದರೆ ಇವರಿಬ್ಬರ ನಡುವೆ, ಇವರ ಕುಟುಂಬದ ನಡುವೆ ಮನಸ್ತಾಪ ಇದೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಲೇ ಇತ್ತು. ಈ ಬಗ್ಗೆ ಯೋಗಿ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ಯೋಗಿ ಅವರ ಸಿನಿಮಾಗಳು ಪದೇ ಪದೇ ಸೋಲುತ್ತಿವೆ. ಹಾಗಾಗಿ ಈಗ ಸಿದ್ಲಿಂಗು2 ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರುತ್ತಿದ್ದು, ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ. ಸಿನಿಮಾ ಪ್ರಚಾರದಲ್ಲಿ ಯೋಗಿ ಅವರು ಬ್ಯುಸಿ ಆಗಿದ್ದಾರೆ.

ಪ್ರೊಮೋಷನ್ ವೇಳೆ ದುನಿಯಾ ವಿಜಯ್ ಅವರ ಬಗ್ಗೆ ಕೇಳಿದ್ದಕ್ಕೆ ಮಾತನಾಡಿದ ಯೋಗಿ ಅವರು, ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿ ಎರಡು ಸಿನಿಮಾ ಫಸ್ಟ್ ಲುಕ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಹಾಗೆಯೇ ಮನಸ್ತಾಪದ ಬಗ್ಗೆ ಮಾತನಾಡಿ, ನಮ್ಮ ಎರಡು ಕುಟುಂಬದ ನಡುವೆ ಮನಸ್ತಾಪ ಇದ್ದಿದ್ದು ನಿಜ, ಈಗ ಎಲ್ಲವೂ ಚೆನ್ನಾಗಿದೆ. ನಾವೆಲ್ಲರೂ ಚೆನ್ನಾಗಿದ್ದೇವೆ ಎಂದಿದ್ದಾರೆ. ಭೀಮ ಸಿನಿಮಾದಲ್ಲಿ ಯೋಗಿ ಅವರು ನಟಿಸಬೇಕಿತ್ತಂತೆ, ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಆದಷ್ಟು ಬೇಗ ನಾವಿಬ್ಬರು ಜೊತೆಯಾಗಿ ನಟಿಸುತ್ತೇವೆ ಎಂದು ಹೇಳಿದ್ದಾರೆ ಲೂಸ್ ಮಾದ ಯೋಗಿ ಅವರು. ಇದರಿಂದ ಎಲ್ಲಾ ಗಾಸಿಪ್ ಗಳಿಗೆ ಸ್ಪಷ್ಟನೆ ಸಿಕ್ಕಿದೆ .
ಇನ್ನು ವಿಜಯ್ ಅವರು ಸಹ ಬೇರೊಂದು ಕಡೆ ಯೋಗಿ ಅವರ ಬಗ್ಗೆ ಮಾತನಾಡಿ, ಅವನು ನನ್ನ ಅಕ್ಕನ ಮಗ, ಮನೆಗೆ ಮೊದಲ ಮಕ್ಕಳು ಅವರು, ಅವರನ್ನೆಲ್ಲ ಎತ್ತಿ ಆಡಿಸಿ ಬೆಳೆಸಿದ್ದೀನಿ. ಅವರ ಮೇಲೆ ಪ್ರೀತಿ ಜಾಸ್ತಿನೇ ಇರುತ್ತೆ. ನಾನು ಯೋಗಿ ಮತ್ತೆ ಸಿನಿಮಾ ಮಾಡ್ತಿವಿ, ಈಗ ನಾನು ನಿರ್ದೇಶಕ ಕೂಡ ಆಗಿರೋದ್ರಿಂದ ಅದು ಸಹ ನಡೆಯಲಿದೆ. ಒಂದು ಕಥೆ ಬಗ್ಗೆ ಮಾತುಕತೆ ನಡೀತಿದೆ, ಫೈನಲ್ ಆಗಬೇಕಿದೆ. ದೂರದಲ್ಲಿ ಇದ್ರು, ಎಲ್ಲೇ ಇದ್ರು, ಅವರು ಚೆನ್ನಾಗಿರಲಿ ಎಂದೇ ಪ್ರಾರ್ಥನೆ ಮಾಡುತ್ತೇನೆ ಎಂದು ಅಕ್ಕನ ಮಗನ ಬಗ್ಗೆ ಮಾತನಾಡಿದ್ದಾರೆ ನಟ ದುನಿಯಾ ವಿಜಯ್. ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದರೆ ದುನಿಯಾ ತರದಲ್ಲೇ ಸೂಪರ್ ಹಿಟ್ ಆಗೋದು ಖಂಡಿತ.