ಸ್ಯಾಂಡಲ್ ವುಡ್ ನಲ್ಲಿ ನಟಿ ರಮ್ಯಾ ಹೆಸರು ಚಿರಪರಿಚಿತ. ಇವರು ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಒಬ್ಬ ಅತ್ಯುತ್ತಮ ನಟಿ. ಪುನೀತ್ ರಾಜ್ ಕುಮಾರ್ ನಟನೆಯ “ಅಭಿ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ರಮ್ಯಾ ತನ್ನ ಮೊದಲ ಚಿತ್ರದ ಮೂಲಕವೇ ಸಾಕಷ್ಟು ಮನ್ನಣೆಗೆ ಪಾತ್ರರಾಗುತ್ತಾರೆ. ನಂತರದ ದಿನಗಳಲ್ಲಿ ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ನಟಿಸಿ ಫಿಲಂ ಫೇರ್ ಪ್ರಶಸ್ತಿ ಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮೋಹಕ ತಾರೆ ಎಂದೇ ಪ್ರಸಿದ್ದಿ ಪಡೆದಿದ್ದ ಇವರು ಕಳೆದ ಏಳು ವರ್ಷಗಳಿಂದ ಸಿನಿಮಾ ರಂಗದಿಂದ ಹೊರಗುಳಿದಿದ್ದರು. ರಮ್ಯಾ ಮತ್ತೆ ಯಾವಾಗ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರವಾಗಿ ಇದೀಗ ಹೊಚ್ಚ ಹೊಸ ಸಿನಿಮಾದ ಮೂಲಕ ಮತ್ತೆ ರಮ್ಯಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

ಹೌದು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಸಿನಿಮಾದಲ್ಲಿ ಮೋಹಕತಾರೆ ನಟಿಸಿದ್ದಾರೆ ಹಾಗೂ ಈ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ ನಂತರ ಎಲ್ಲರ ಗಮನ ಸೆಳೆಯುತ್ತದೆ ಆದರೆ ಈ ಸಿನಿಮಾ ಬಿಡುಗಡೆಗೂ ಮೊದಲೇ ಅಭಿಮಾನಿಗಳನ್ನು ಹುಚೆಬ್ಬಿಸುತ್ತಿದೆ.ಈ ಸಿನಿಮಾ ಬಿಡುಗಡೆಗೊಳ್ಳಲೆಂದೇ ಜನ ಕಾಯುವಂತೆ ಮಾಡಿದೆ. ಹೊಸ ಹೊಸ ವಿಷಯಗಳನ್ನು ಬಳಸಿಕೊಂಡು ಮಾಡಿರುವ ಸಿನಿಮಾಕ್ಕೆ ಈಗಲೇ ಭಾರೀ ಮನ್ನಣೆ ದೊರೆಯುತ್ತಿದೆ. ಈ ಸಿನಿಮಾ ಜನರಲ್ಲಿ ಒಂದು ರೀತಿಯ ಕುತೂಹಲ ಭಾವನೆಯನ್ನು ಮೂಡಿಸಲು ಸಫಲವಾಗಿದೆ.
ಈಗಾಗಲೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟೀಸರ್, ಸಾಂಗ್ ಬಿಡುಗಡೆಗೊಂಡು ಜನರಲ್ಲಿ ಅಚ್ಚರಿ ಮೂಡಿಸಿದೆ. ಸಿನಿಮಾವು ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ತಂಡ ತಿಳಿಸಿದೆ. ಶೂಟಿಂಗ್ ಪ್ರಾರಂಭವಾದ ದಿನದಿಂದಲೂ ಸ್ಯಾಂಡಲ್ ವುಡ್ ನ ಹಲವು ನಟರು ಈ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಇದರಲ್ಲಿ ಪ್ರಮುಖರು. ಇತ್ತೀಚಿಗೆ ದಿಗಂತ್ ಕೂಡಾ ಸಿನಿಮಾ ತಂಡದ ಜೊತೆ ಸೇರಿಕೊಂಡಿದ್ದಾರೆ. ಮುಖ್ಯವಾಗಿ ಹಲವು ರಂಗಭೂಮಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಅಷ್ಟೆ ಅಲ್ಲದೆ ಸಿನಿಮಾದ ಪ್ರಮೋಷನ್ ವಿಡಿಯೋ ದಲ್ಲೂ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಂತೂ ಮೋಹಕತಾರೆಯ ಆಕ್ಟಿಂಗ್ ನ್ನು ಕಣ್ತುಂಬಿಕೊಳ್ಳಲು ಸನ್ನದ್ಧರಾಗಿದ್ದಾರೆ. ಈಗಿನ ಯುವಕರಿಗೆ ಸಂಬಂಧಿಸಿದ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಪ್ರತಿ ಬಾರಿ ವಿಭಿನ್ನ ಮಾದರಿಯ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ .
ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸಲಿದ್ದಾರೆ ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಟ್ರೇಲರ್ ಕೂಡಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಒಟ್ಟಾರೆಯಾಗಿ ಒಳ್ಳೆಯ ಕಂಟೆಂಟ್ ಹೊಂದಿರುವ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಬಹುದೆಂಬ ನಿರೀಕ್ಷೆಯಲ್ಲಿದೆ ಇಡೀ ಚಿತ್ರತಂಡ. ಸಿನಿ ಪ್ರಿಯರು ಸಹ ಈ ಸಿನಿಮಾದ ಸವಿಯನ್ನು ಉಣಲು ಕಾಯುತ್ತಿದ್ದಾರೆ.