ಸ್ನೇಹಿತರು, ಪ್ರೇಮಿಗಳು ಒಟ್ಟಿಗೆ ಸೇರಿ ರೀಲ್ಸ್ ಗಳನ್ನು ಮಾಡುವುದನ್ನು, ಡ್ಯಾನ್ಸ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಅಣ್ಣ-ತಂಗಿ ಸೇರಿ ಹಾಡೊಂದಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದ್ದನ್ನು ನೋಡಿದ್ದೀರಾ?. ಆದರೆ ಈಗ ಅಣ್ಣತಂಗಿಯರ ಡ್ಯಾನ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವರೆಗೆ ಬರೋಬ್ಬರಿ 9 ಮಿಲಿಯನ್ ವೀಕ್ಷಣೆ ಕಂಡಿರುವ ಈ ನೃತ್ಯವನ್ನು 3ಲಕ್ಷ ಜನ ಲೈಕ್ ಮಾಡಿದ್ದಾರೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಫ್ಯಾಮಿಲಿ ಕ್ರ್ಯೂ ಎಂಬ ಪೇಜ್ ನಲ್ಲಿ ಈ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಅಣ್ಣ ತಂಗಿ ಸೇರಿ ರಸ್ತೆಯಲ್ಲಿ ನಿಂತು ಹಾಡೊಂದಕ್ಕೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸೂಪರ್ ಡ್ಯಾನ್ಸ್ ಅಪ್ಲೋಡ್ ಆದ ತಕ್ಷಣದಿಂದ ಈ ತನಕ ವೈರಲ್ ಆಗುತ್ತಿದೆ. ಅಣ್ಣತಂಗಿಯರ ಈ ಕ್ಯೂಟ್ ಡ್ಯಾನ್ಸ್ ಅನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಈ ಸಕ್ಕತ್ ಡ್ಯಾನ್ಸ್ ಕಂಡು ನೆಟ್ಟಿಗರೆಲ್ಲ ಫುಲ್ ಫಿದಾ ಆಗಿದ್ದಾರೆ. 1 ಸಾವಿರಕ್ಕಿಂತಲೂ ಹೆಚ್ಚು ಕಮೆಂಟ್ ಗಳು ಬಂದಿವೆ. ಕೆಲವರು, ‘ನಿಮ್ಮಂತಹ ಅಣ್ಣತಂಗಿಯರನ್ನು ನಾನು ಎಲ್ಲೂ ನೋಡಿಲ್ಲ. ನಿಮ್ಮ ಡ್ಯಾನ್ಸ್ ಕಂಡು ಬಹಳ ಸಂತಸವಾಯಿತು. ನಿಮ್ಮ ಬಾಂಧವ್ಯ ಹೀಗೆಯೇ ಇರಲಿ’ ಎಂದಿದ್ದಾರೆ. ಮತ್ತೊಂದಿಷ್ಟು ಜನ, ‘ರಸ್ತೆಯಲ್ಲಿ ಡ್ಯಾನ್ಸ್ ಮಾಡುವಾಗ ಹುಷಾರು ವಾಹನಗಳು ಬರುತ್ತಿರುತ್ತವೆ. ಆದ್ರೆ ನಿಮ್ಮ ಡ್ಯಾನ್ಸ್ ಮಾತ್ರ ಸೂಪರ್’ ಎಂದಿದ್ದಾರೆ. ಸದ್ಯ, ಈ ಡ್ಯಾನ್ಸ್ ಸಕ್ಕತ್ ವೈರಲ್ ಆಗುತ್ತಿದೆ.