ಬಿಗ್ ಬಾಸ್ ಶೋ ಅಂದ್ರೆ ಹಾಗೆ ಭಾಷೆ ಯಾವುದೇ ಇರಲಿ, ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಳ್ಳುತ್ತದೆ. ಜನರಿಗೆ ಈ ಶೋ ಅಂದ್ರೆ ಅಷ್ಟು ಆಸಕ್ತಿ ಮತ್ತು ಕ್ರೇಜ್. ಬಿಗ್ ಬಾಸ್ ಶೋ ಈಗ ಭಾರತದಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಉತ್ತರ ಭಾರತದ ಕೆಲವು ಭಾಷೆಗಳಲ್ಲಿ ಬರುತ್ತದೆ. ಜನರು ಬಹಳ ಕ್ರೇಜ್ ಇಂದ ಇಷ್ಟಪಟ್ಟು ಬಿಗ್ ಬಾಸ್ ಶೋ ನೋಡ್ತಾರೆ. ಈ ಶೋ ಗೆ ಇರುವಂಥ ಕ್ರೇಜ್ ಸಾಮಾನ್ಯದ್ದಲ್ಲ, ಸೆಲೆಬ್ರಿಟಿಗಳು ಒಬ್ಬ ವ್ಯಕ್ತಿಯಾಗಿ ಹೇಗಿರುತ್ತಾರೆ? ಅವರ ವ್ಯಕ್ತಿತ್ವ ಹೇಗಿದೆ ಅನ್ನೋದನ್ನ ತಿಳಿಸಿಕೊಡೋದೆ ಈ ಶೋ. ಅದೇ ಕಾರಣಕ್ಕೆ ಬಿಗ್ ಬಾಸ್ ಅಷ್ಟು ಜನಪ್ರಿಯ..

ಬಿಗ್ ಬಾಸ್ ಶೋ ನೋಡುಗರಿಗೆ ಎಷ್ಟು ಕುತೂಹಲ ತರುತ್ತದೆಯೋ, ಮನೆಯೊಳಗೆ ಹೋಗುವವರಿಗೆ ಕೂಡ ಅಷ್ಟೇ ಜನಪ್ರಿಯತೆ ತಂದುಕೊಡುತ್ತದೆ. ಹೌದು, ಬಿಗ್ ಬಾಸ್ ನಲ್ಲಿ ಒಳ್ಳೆತನದ ಮೂಲಕ ಶೈನ್ ಆದರೆ, ಆ ವ್ಯಕ್ತಿಗೆ ಸಿಗುವ ಕೀರ್ತಿ, ಜನಪ್ರಿಯತೆ ಅಷ್ಟಿಷ್ಟಲ್ಲ. ಅದಕ್ಕೆ ಕನ್ನಡದಲ್ಲಿಯೇ ಸಾಕಷ್ಟು ಉದಾಹರಣೆಗಳನ್ನ ನೋಡಿದ್ದೇವೆ. ಇಂದು ನಾವು ತೆಲುಗು ಬಿಗ್ ಬಾಸ್ ಶೋ ಫೈನಲಿಸ್ಟ್ ಬಗ್ಗೆ ತಿಳಿಸುತ್ತಿದ್ದೇವೆ. ಈ ಬಾರಿ ಬಿಗ್ ಬಾಸ್ ತೆಲುಗು ಸೀಸನ್ 8 ವಿನ್ನರ್ ನಿಖಿಲ್ ಸಹ ಕನ್ನಡದ ಹುಡುಗ, ಮೈಸೂರಿನ ಹುಡುಗ. ನಮ್ಮ ಕನ್ನಡಿಗರು ಎಲ್ಲಾ ಕಡೆ ಇಷ್ಟು ಸಾಧನೆ ಮಾಡುತ್ತಿರುವುದು ನಿಜಕ್ಕೂ ಬಹಳ ಸಂತೋಷವಾದ ವಿಷಯ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಬಿಬಿಟಿ8 ನಲ್ಲಿ ಫೈನಲಿಸ್ಟ್ ಆಗಿ ಎಲ್ಲರ ಗಮನ ಸೆಳೆದವರು ನಟಿ ಪ್ರೇರಣಾ ಕಂಬಮ್. ಇವರು ಸಹ ಬೆಂಗಳೂರಿನವರೇ, ಪ್ರೇರಣಾ ಅವರು ಕನ್ನಡದ ರಂಗನಾಯಕಿ, ಹರ ಹರ ಮಹಾದೇವ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ಸಹ ಪ್ರೇರಣಾ ನಟಿಸಿದ್ದಾರೆ. ಇಲ್ಲಿ ಇವರಿಗೆ ಒಳ್ಳೆಯ ಜನಪ್ರಿಯತೆ ಇದೆ. ಜೊತೆಗೆ ತೆಲುಗಿನಲ್ಲಿ ಕೃಷ್ಣ ಮುಕುಂದ ಮುರಾರಿ ಧಾರಾವಾಹಿಯಲ್ಲಿ ನಟಿಸಿದರು, ಈ ಧಾರವಾಹಿ ಇವರಿಗೆ ತೆಲುಗು ಆಡಿಯನ್ಸ್ ಪೈಕಿ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತು, ಅದೇ ಕಾರಣಕ್ಕೆ ಪ್ರೇರಣಾ ಅವರು ಬಿಗ್ ಬಾಸ್ ಶೋ ಗೆ ಸಹ ಹೋದರು. ಮನೆಯೊಳಗೆ ಒಳ್ಳೆಯ ರೀತಿ ಇದ್ದರು.

ಕೊಡುವ ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಿ, ಒಳ್ಳೆಯ ಸ್ಪರ್ಧಿ ಆದರು ಪ್ರೇರಣಾ. ಹೊರಗಡೆ ಇವರಿಗೆ ಒಳ್ಳೆಯ ಜನಪ್ರಿಯತೆ ಇದ್ದು, ಪ್ರೇರಣಾ ಅವರಿಗೆ ಬಿಗ್ ಬಾಸ್ ನಲ್ಲಿ ಭಾರಿ ಸಂಭಾವನೆ ಸಿಕ್ಕಿದೆ. ವಾರಕ್ಕೆ 2 ಲಕ್ಷ ಸಂಭಾವನೆ ಇವರಿಗೆ ನಿಗದಿ ಆಗಿದ್ದು, 14 ವಾರಗಳ ಪ್ರಯಾಣಕ್ಕೆ 28 ಲಕ್ಷ ಸಂಭಾವನೆ ಪಡೆದಿದ್ದಾರೆ ಪ್ರೇರಣಾ. ಜೊತೆಗೆ ಟಾಪ್ 4 ಫೈಲನಿಸ್ಟ್ ಆಗಿದ್ದಾರೆ. ಇದರ ಜೊತೆಗೆ ಹಲವು ಗಿಫ್ಟ್ ಗಳು ಸಹ ಪ್ರೇರಣಾ ಅವರಿಗೆ ಸಿಕ್ಕಿದೆ. ಒಟ್ಟಿನಲ್ಲಿ ಇವರಿಗೆ ಭರ್ಜರಿಯಾದ ಸಂಭಾವನೆ ಸಿಕ್ಕಿದೆ ಎಂದರೆ ತಪ್ಪಲ್ಲ. ಈಗ ಪ್ರೇರಣಾ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.
ಪ್ರೇರಣಾ ಅವರಿಗೆ ಈಗ 28 ವರ್ಷ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ಇವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದಾರೆ. ಹಾಗೆಯೇ ನಟಿ ರಶ್ಮಿಕಾ ಮಂದಣ್ಣ ಅವರ ಬೆಸ್ಟ್ ಫ್ರೆಂಡ್ ಇವರು, ಹಿಂದೆ ಕಿರಿಕ್ ಪಾರ್ಟಿ ಸಿನಿಮಾದ ಸಕ್ಸಸ್ ಈವೆಂಟ್ ನಲ್ಲಿ ರಶ್ಮಿಕಾ ಪ್ರೇರಣಾ ಅವರ ಬಗ್ಗೆ ಬಹಳ ಸಂತೋಷದಿಂದ ಮಾತನಾಡಿದ್ದರು. ಈಗ ಪ್ರೇರಣಾ ಅವರಿಗೆ ಬೇಡಿಕೆ ಸಹ ಹೆಚ್ಚಾಗಿರುವ ಕಾರಣ, ತೆಲುಗು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪ್ರಾಜೆಕ್ಟ್ ಗಳು ಸಿಗುವುದರಲ್ಲಿ ಸಂಶಯವಿಲ್ಲ.