ನಟಿ ಸೌಂದರ್ಯ ಅವರು ಹೆಸರಿಗೆ ತಕ್ಕ ಹಾಗೆ ಅತ್ಯಂತ ರೂಪವತಿ, ಸುಂದರವಾದ ನಟಿ. ಅವರನ್ನು ಇಂದಿಗೂ ಕೂಡ ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವ ಹಾಗಿಲ್ಲ. ಸೌಂದರ್ಯ ಅವರು ವಿಧಿವಶರಾಗಿ 21 ವರ್ಷವಾಗುತ್ತಿದೆ. ಆದರೆ ಇವತ್ತಿಗೂ ಕೂಡ ಅಭಿಮಾನಿಗಳು ಇವರ ಬಗ್ಗೆ ಮಾತನಾಡುವುದನ್ನು ಬಿಟ್ಟಿಲ್ಲ, ಇವರ ನೆನಪು ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ನಟಿ ಸೌಂದರ್ಯ ಅವರು ನಮ್ಮನ್ನಗಲಿದ್ದರು ಸಹ ಅವರ ಬಗ್ಗೆ ಅನೇಕ ವಿಚಾರಗಳು ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಅವರ ಸಾ*ವಿನ ಬಗ್ಗೆ ಸುದ್ದಿಯೊಂದು ಚರ್ಚೆ ಆಗುತ್ತಿದ್ದು..ಆಂಧ್ರಪ್ರದೇಶದಲ್ಲಿ ಈ ವಿಚಾರವಾಗಿ ಚಿಟ್ಟಿಬಾಬು ಎನ್ನುವವರು ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೆ ಸೌಂದರ್ಯ ಅವರ ಪತಿ ರಘು ಅವರು ಬಹಿರಂಗ ಪತ್ರ ಬರೆಯುವ ಮೂಲಕ, ಎಲ್ಲಾ ವದಂತಿಗಳಿಗೆ ಉತ್ತರ ನೀಡಿದ್ದಾರೆ.

ನಟಿ ಸೌಂದರ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಅಪ್ಪಟ ಕನ್ನಡದ ಹುಡುಗಿ ಆಗಿದ್ದ ಸೌಂದರ್ಯ ಅವರು ಕನ್ನಡಕ್ಕಿಂತ ಹೆಚ್ಚು ಮಿಂಚಿದ್ದು ತೆಲುಗು ಮತ್ತು ತಮಿಳು ಭಾಷೆಯಲ್ಲಿ. ತೆಲುಗಿನಲ್ಲಿ ಇವರು ಸ್ಟಾರ್ ಹೀರೋಯಿನ್ ಆಗಿ ಮೆರೆದವರು ಎಂದು ಹೇಳಿದರೂ ತಪ್ಪಲ್ಲ. ಸೌಂದರ್ಯ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುಮಾರು 100 ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲಿ ಕೂಡ ನಟಿಸಿದ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ನಟಿ ಸೌಂದರ್ಯ ಅವರ ಸಾ*ವು ಬಹಳ ನೋವು ತರುವಂಥ ವಿಚಾರ. ಕೇವಲ 28 ವಯಸ್ಸಿಗೆ ಸೌಂದರ್ಯ ಅವರು ಇಹಲೋಕ ತ್ಯಜಿಸಿದರು. ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಒಂದೇ ಸಾರಿ ಪ್ರಾಣ ಬಿಟ್ಟರು. ಈ ಘಟನೆಯನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ.

2004ರ ಏಪ್ರಿಲ್ 18ರಂದು ರಾಜಕೀಯ ವಿಚಾರಕ್ಕೆ, ಪ್ರಚಾರಕ್ಕಾಗಿ ಕರೀಂ ನಗರಕ್ಕೆ ಅಣ್ಣನ ಜೊತೆಗೆ ಸೌಂದರ್ಯ ಅವರು ತೆರಳಬೇಕಿತ್ತು. ಹೆಲಿಕಾಪ್ಟರ್ ನಲ್ಲಿ ಇಬ್ಬರು ಹೊರಟ ಕೆಲವೇ ಸಮಯಕ್ಕೆ ಕ್ರಾಶ್ ಆಗಿ, ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ನೋಡಲು ಅಷ್ಟು ಸೌಂದರ್ಯವತಿ ಆಗಿದ್ದ ಸೌಂದರ್ಯ ಅವರಿಗೆ ಆ ರೀತಿಯ ಅಂತ್ಯ ಆಗುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಸೌಂದರ್ಯ ಅವರಿಗೆ ಈ ರೀತಿ ಆಗಿ, ಅವರು ಎಲ್ಲರನ್ನು ಬಿಟ್ಟು ಹೋಗಿ 18 ವರ್ಷವಾಗುತ್ತಿದೆ. ಆದರೆ ಈಗ ಇವರ ಸಾವಿನ ಬಗ್ಗೆ ಚಿಟ್ಟಿ ಬಾಬು ಎನ್ನುವ ವ್ಯಕ್ತಿ ಆಂಧ್ರಪ್ರದೇಶದ ಪೊಲೀಸ್ ಸ್ಟೇಶನ್ ಒಂದರಲ್ಲಿ ದೂರು ನೀಡಿದ್ದರು. ಸೌಂದರ್ಯ ಅವರಿಗೆ ಆಗಿದ್ದು ಆಕ್ಸಿಡೆಂಟ್ ಅಲ್ಲ, ಅದು ಕೊಲೆ ಎನ್ನುವ ಆರೋಪ ಮಾಡಿದ್ದಾರೆ.

ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರು ಈ ರೀತಿ ಮಾಡಿಸಿದ್ದು ಎಂದು ಆ ವ್ಯಕ್ತಿ ದೂರು ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಸೌಂದರ್ಯ ಅವರಿಗೆ ಸೇರಿದ 6 ಎಕರೆ ಫಾರ್ಮ್ ಹೌಸ್ ಇತ್ತು, ಅದನ್ನು ಮೋಹನ್ ಬಾಬು ಅವರು ತಮ್ಮ ಸ್ವಂತ ಮಾಡಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ ಸೌಂದರ್ಯ ಅವರ ಅಣ್ಣ ಇದಕ್ಕೆ ಒಪ್ಪಲಿಲ್ಲ. ಈ ಕಾರಣಕ್ಕೆ ಜಾಗವನ್ನು ಹೇಗಾದರು ಮಾಡಿ ತಮ್ಮ ಸ್ವಂತ ಮಾಡಿಕೊಳ್ಳಬೇಕು ಎಂದು ಮೋಹನ್ ಬಾಬು ಅವರು ಇಂಥ ಕೆಲಸ ಮಾಡಿದ್ದಾರೆ ಎಂದು ಆ ವ್ಯಕ್ತಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇತ್ತ ನಟಿ ಸೌಂದರ್ಯ ಅವರ ಪತಿ ಜಿ.ಎಸ್ ರಘು ಅವರು ಬಹಿರಂಗ ಪತ್ರ ಒಂದನ್ನು ಬರೆಯುವ ಮೂಲಕ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಬರೆದಿರುವುದು ಏನು ಎಂದರೆ..
“ಕಳೆದ ಕೆಲವು ದಿನಗಳಿಂದ ಶ್ರೀ ಮೋಹನ್ ಬಾಬು ಸರ್ ಮತ್ತು ಶ್ರೀಮತಿ ಸೌಂದರ್ಯ ಅವರಿಗೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿರುವ ಆಸ್ತಿಯ ಬಗ್ಗೆ ಸುಳ್ಳು ಸುದ್ದಿ ಇದೆ. ಆಸ್ತಿಗೆ ಸಂಬಂಧಿಸಿದಂತೆ ಹರಡಿರುವ ಆಧಾರರಹಿತ ಸುದ್ದಿಯನ್ನು ನಾನು ನಿರಾಕರಿಸಲು ಬಯಸುತ್ತೇನೆ. ಸ್ಪಷ್ಟಪಡಿಸಲು, ನನ್ನ ಪತ್ನಿ ಲೇಟ್ ಶ್ರೀಮತಿ ಅವರಿಂದ ಶ್ರೀ ಮೋಹನ್ ಬಾಬು ಅವರು ಅಕ್ರಮವಾಗಿ ಸಂಪಾದಿಸಿದ ಯಾವುದೇ ಆಸ್ತಿ ಇಲ್ಲ ಎಂದು ನಾನು ದೃಢೀಕರಿಸುತ್ತೇನೆ. ಸೌಂದರ್ಯಾ. ನನ್ನ ಜ್ಞಾನಕ್ಕೆ ಸಂಬಂಧಿಸಿದಂತೆ ನಾವು ಅವರೊಂದಿಗೆ ಯಾವುದೇ ಭೂ ವಹಿವಾಟು ನಡೆಸಿಲ್ಲ. ನನಗೆ ಶ್ರೀ ಮೋಹನ್ ಬಾಬು ಸರ್ ಕಳೆದ 25+ ವರ್ಷಗಳಿಂದ ಒಳ್ಳೆಯ ಸ್ನೇಹವಿದೆ. ನಮ್ಮ ಕುಟುಂಬಗಳ ನಡುವೆ ನಂಬಿಕೆ ಮತ್ತು ಬಾಂಧವ್ಯ ಇದೆ.

ನಮ್ಮ ಕುಟುಂಬಗಳು, ನನ್ನ ಹೆಂಡತಿ, ನನ್ನ ಅತ್ತೆ ಮತ್ತು ಮಾವನಿಗು ಮತ್ತು ಅವರಿಗೂ ಯಾವಾಗಲೂ ಪರಸ್ಪರ ನಂಬಿಕೆ ಮತ್ತು ಗೌರವ ಇತ್ತು. ಎರಡು ಕುಟುಂಬಗಳು ಅದನ್ನು ಉಳಿಸಿಕೊಂಡು ಬಂದಿದೆ. ನಾನು ಶ್ರೀ ಮೋಹನ್ ಬಾಬು ಸರ್ ಅವರನ್ನು ಗೌರವಿಸುತ್ತೇನೆ ಹಾಗೆಯೇ ನಿಮ್ಮೆಲ್ಲರೊಂದಿಗೆ ಸತ್ಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾವು ಶ್ರೀ ಮೋಹನ್ ಬಾಬು ಸರ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುತ್ತೇವೆ ಮತ್ತು ನಾವಿಲ್ಲರು ಒಂದು ಕುಟುಂಬದ ಹಾಗಿದ್ದೇವೆ. ನಾವಹ್ ಶ್ರೀ ಮೋಹನ್ ಬಾಬು ಸರ್ ಅವರೊಂದಿಗೆ ಇದಕ್ಕೆ ಸಂಬಂಧಿಸಿದ ಯಾವುದೇ ಆಸ್ತಿ ವಹಿವಾಟುಗಳನ್ನು ಹೊಂದಿಲ್ಲ ಎಂದು ಮತ್ತೊಮ್ಮೆ ಖಚಿತಪಡಿಸಲು ಬಯಸುತ್ತೇನೆ. ಇದು ಸುಳ್ಳು ಸುದ್ದಿಯಾಗಿರುವುದರಿಂದ, ತಪ್ಪು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ನಿಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ. ಇದೆಲ್ಲವೂ ಇಲ್ಲಿಗೇ ಕೊನೆಯಾಗಲಿ..”

ಎಂದು ನಟಿ ಸೌಂದರ್ಯ ಅವರ ಪತಿ ಜಿ.ಎಸ್ ರಘು ಅವರು ಬಹಿರಂಗ ಪತ್ರದಲ್ಲಿ ಬರೆದಿದ್ದು, ಈ ಸುದ್ದಿಗಳನ್ನು ಇನ್ನು ಜಾಸ್ತಿ ಹರಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹಾಗೆಯೇ ನಟಿ ಸೌಂದರ್ಯ ಅವರ ವಿಚಾರದಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿರುವುದಕ್ಕೆ ನಟ ಮೋಹನ್ ಬಾಬು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌಂದರ್ಯ ಅವರು ಕೊನೆಯದಾಗಿ ನಟಿಸಿದ ಸಿನಿಮಾ ಮೋಹನ್ ಬಾಬು ಅವರ ಜೊತೆಯಲ್ಲೇ ಆಗಿತ್ತು. ಮೋಹನ್ ಬಾಬು ಅವರು ಸೌಂದರ್ಯ ಅವರ ಕುಟುಂಬದ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಹಾಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ಜನರು ಕೂಡ ನಿಲ್ಲಿಸಬೇಕು. ಇಷ್ಟು ವರ್ಷಗಳ ಬಳಿಕ ಇದ್ಯಾವುದು ಬೇಕಿರಲಿಲ್ಲ ಎನ್ನುವುದು ಹಲವರ ಅಭಿಪ್ರಾಯ ಆಗಿದೆ.