ನಟ ಧನುಷ್ ಅವರು ಹಲವು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಸ್ಟಾರ್ ಹೀರೋ. ಧನುಷ್ ಅವರು ಇಂದು ತಮಿಳಿಗೆ ಮಾತ್ರ ಸೀಮಿತವಾಗಿರದೆ, ಬಾಲಿವುಡ್ ನಲ್ಲಿ ಸಹ ಸಿನಿಮಾಗಳನ್ನು ಮಾಡಿ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವೈಯಕ್ತಿಕ ಜೀವನದ ವಿಚಾರಗಳಿಗೆ ಸಹ ಧನುಷ್ ಅವರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅವರ ಮದುವೆ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದೆ. ಈ ಹುಡುಗಿಯ ಜೊತೆಗೆ ಧನುಷ್ ಅವರು ಎರಡನೇ ಮದುವೆಗೆ ರೆಡಿ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಆ ಹುಡುಗಿ ಬಗ್ಗೆ ಡೀಟೇಲ್ಸ್ ತಿಳಿಸುತ್ತೇವೆ ನೋಡಿ..

ನಟ ಧನುಷ್ ಅವರು ತಮಿಳಿನ ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಮಗ. ಆರಂಭದಲ್ಲಿ ಇವರು ಹೀರೋ ಆಗುವುದಕ್ಕೆ ಸೂಕ್ತರಲ್ಲ ಎಂದು ಹಲವರು ಅವಮಾನ ಮಾಡಿದ್ದರಂತೆ. ಹಾಗಿದ್ದರೂ ಸಹ ತಮ್ಮ ಛಲ ಬಿಡದ ಧನುಷ್ ಅವರು ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ಅಣ್ಣ ಆ ಸಿನಿಮಾ ನಿರ್ದೇಶನ ಮಾಡಿದ್ದರು. ಬಳಿಕ ಒಂದೊಂದೇ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು ನಟ ಧನುಷ್. ಸುಂದರವಾಗಿರೋದು ಮುಖ್ಯವಲ್ಲ, ಪ್ರತಿಭೆ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟ ನಾಯಕರಲ್ಲಿ ಧನುಷ್ ಸಹ ಒಬ್ಬರು.
ಧನುಷ್ ಅವರು ಒಂದು ರೀತಿ ಬಹುಮುಖ ಪ್ರತಿಭೆ, ನಟನೆಯ ಜೊತೆಗೆ ಇವರು ನಿರ್ದೇಶಕರು, ನಿರ್ಮಾಪಕರು, ಲಿರಿಸಿಸ್ಟ್ ಹಾಗೂ ಗಾಯಕ ಎಲ್ಲವು ಹೌದು. ನಿರ್ದೇಶಕರಾಗಿ ಕೂಡ ಇವರ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡಿವೆ. ಚಿತ್ರರಂಗದಲ್ಲಿ ಧನುಷ್ ಅವರು ಬಹಳ ಹೆಸರು, ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಎಲ್ಲವನ್ನು ಗಳಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕ ಜೀವನದ ವಿಚಾರದಿಂದ ಸಿಕ್ಕಾಪಟ್ಟೆ ಸುದ್ದಿ ಆಗುವುದು ಉಂಟು. ನಟ ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಅವರನ್ನು ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು.

ಐಶ್ವರ್ಯ ಅವರು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ಆದರೆ ಐಶ್ವರ್ಯ ಹಾಗೂ ಧನುಷ್ ದಂಪತಿಯ ನಡುವೆ ವೈಮನಸ್ಸು ಮೂಡಿದ ಕಾರಣ ಇಬ್ಬರು ಸಹ 2022ರಲ್ಲಿ ವಿಚ್ಛೇದನ ಪಡೆದರು. ಇವರಿಬ್ಬರು ಈ ಸುದ್ದಿಯನ್ನು ಬಹಿರಂಗಪಡಿಸಿದಾಗ ಅಭಿಮಾನಿಗಳ ಶಾಕ್ ಆಗಿದ್ದರು. ಇವರಿಬ್ಬರನ್ನು ಒಂದು ಮಾಡುವುದಕ್ಕೆ ಮನೆಯ ಹಿರಿಯರು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಯಾವುದು ಸರಿ ಹೋದ ಹಾಗೆ ಕಾಣುತ್ತಿಲ್ಲ..
ಹಾಗಾಗಿ ಧನುಷ್ ಅವರಿಗೆ ಇನ್ನೊಂದು ಮದುವೆ ಮಾಡಿಕೊಳ್ಳಬೇಕು ಎಂದು ಮನೆಯಲ್ಲಿ ಒತ್ತಾಯ ಮಾಡುತ್ತಲಿದ್ದು, ಧನುಷ್ ಅವರು ಕೂಡ ಒಪ್ಪಿಗೆ ಕೊಟ್ಟಿದ್ದಾರಂತೆ. ಸಿನಿಮಾ ಕ್ಷೇತ್ರದ ಹುಡುಗಿ ಬೇಡ, ಬೇರೆ ಕ್ಷೇತ್ರದ ಹುಡುಗಿ ಇದ್ದರೆ ಒಳ್ಳೆಯದು ಹೇಳಿದ್ದು, ಈಗಾಗಲೇ ಒಂದು ಹುಡುಗಿಯನ್ನು ನೋಡಿ, ಓಕೆ ಆಗಿದೆಯಂತೆ. ಈ ಒಂದು ಸುದ್ದಿ ಕಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಆದರೆ ಇದರಲ್ಲಿ ಎಷ್ಟು ನಿಜವಿದೆಯೋ, ಎಷ್ಟು ಸುಳ್ಳಿದೆಯೋ ಎನ್ನುವುದು ತಿಳಿದಿಲ್ಲ. ಅಧಿಕೃತ ಮಾಹಿತಿ ಇನ್ನುಮುಂದೆ ಹೊರಬರಬೇಕಿದೆ.