ಫುಟ್ಬಾಲ್ ಪ್ರಿಯ ದೇಶ ಎಂದೇ ಖ್ಯಾತಿ ಹೊಂದಿರುವ ಸ್ಪೇನ್ನಲ್ಲಿ ಸದ್ಯ ಮಹಿಳಾ ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪದಕ ಹಂಚುವ ವೇಳೆ ಸ್ಪ್ಯಾನಿಸ್ ಫುಟ್ಬಾಲ್ ಫೆಡರೇಶನ್ನ ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್ ಅವರು ಆಟಗಾರ್ತಿ ಜೆನ್ನಿ ಹೆರ್ಮೊಸೊ ತುಟಿಗೆ ಮುತ್ತನ್ನು ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದು,ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.
ಜೆನ್ನಿ ಹೆರ್ಮೋಸ್ ಚಿನ್ನದ ಪದಕವನ್ನು ಪಡೆದ ನಂತರ ತುಟಿಗಳ ಮೇಲೆ ಅಧ್ಯಕ್ಷ ಆಕೆಯನ್ನು ಬಿಗಿದಪ್ಪಿ ಲಿಪ್ ಲಾಕ್ ಮಾಡಿದ್ದಾರೆ. ಈ ಅನಿರೀಕ್ಷಿತ ಕ್ರಿಯೆಯು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಸ್ಪ್ಯಾನಿಷ್ ಮಹಿಳಾ ಫುಟ್ ಬಾಲ್ ತಂಡಕ್ಕೆ ಸಂತೋಷದಾಯಕ ಸಂದರ್ಭವಾಗಿರಬೇಕಾಗಿದ್ದ ಹೊತ್ತಲ್ಲಿ ಅಧ್ಯಕ್ಷರ ನಡೆಯಿಂದ ಎಲ್ಲರೂ ಆಕ್ರೋಶಿತರಾಗಿದ್ದಾರೆ.
ಸ್ಪೇನ್ ದೇಶಕ್ಕೆ ಮಹಿಳಾ ಫುಟ್ಬಾಲ್ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ವಹಿಸಿದ ಆಟಗಾರ್ತಿ ಹೆರ್ಮೊಸೊ ಅವರು ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ರುಬಿಯಾಲ್ಸ್, ‘ನಾನು ಅತೀವ ಖುಷಿಯಿಂದ ಈ ರೀತಿ ನಡೆದುಕೊಂಡೆ. ಆದರೆ ನಾನು ಮಾಡಿದ್ದು ತಪ್ಪು ಎಂಬುದು ಅರಿವಾಗಿದೆ. ತಪ್ಪಿಗಾಗಿ ಎಲ್ಲರೊಂದಿಗೂ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.