ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ನಟ ಶಿವ ರಾಜ್ ಕುಮಾರ್ ಅವರು ಭೈರತಿ ರಣಗಲ್ ಸಿನಿಮಾ ಗೆದ್ದಿರುವ ಸಂತೋಷದಲ್ಲಿ ಇದ್ದಾರೆ, ಅದರ ಜೊತೆಗೆ ಅವರ ಆರೋಗ್ಯದ ಸಮಸ್ಯೆ ಕೂಡ ಇದೆ. ಆದರೆ ಶಿವಣ್ಣ ಅವರು ಬೇಗ ಹುಷಾರಾಗಿ ಬರಲಿ ಎಂದು ಅಭಿಮಾನಿಗಳು ಹಾಗೂ ಇಡೀ ಕರ್ನಾಟಕದ ಜನತೆ ಕಾಯುತ್ತಿದ್ದಾರೆ. ಇದೀಗ ಶಿವಣ್ಣ ಅವರು ತಮ್ಮ ಇಡೀ ಕುಟುಂಬದ ಜೊತೆಗೆ ತಿರುಪತಿಗೆ ಭೇಟಿ ನೀಡಿ, ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಕೂಡ ಮುಡಿ ಕೊಟ್ಟಿದ್ದಾರೆ. ಈ ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವಣ್ಣ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.

ಶಿವಣ್ಣ ಅವರಿಗೆ ತಮ್ಮ ಕೂದಲು ಅಂದ್ರೆ ತುಂಬಾ ಇಷ್ಟ, ಯಾರನ್ನು ಕೂದಲು ಮುಟ್ಟಲು ಬಿಡುತ್ತಿರಲಿಲ್ಲ ಎಂದು ಕೂಡ ಹೇಳಲಾಗುತ್ತದೆ. ಇಂಥ ಶಿವಣ್ಣ ಅವರು ಈಗ ಮುಡಿ ಕೊಟ್ಟಿದ್ದಾರೆ. ಶಿವಣ್ಣ ಅವರನ್ನು ಈ ರೀತಿಯಲ್ಲಿ ನೋಡಿದ ಫ್ಯಾನ್ಸ್ ಹೊಸದೊಂದು ಬೇಡಿಕೆ ಇಟ್ಟಿದ್ದು, ಶಿವಣ್ಣ ಅವರ ಈ ಲುಕ್ ಸೂಪರ್ ಆಗಿದೆ, ಶಿವಣ್ಣ ಅವರು ಇದೇ ಲುಕ್ ನಲ್ಲಿ ಒಂದು ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತದೆ ಅಂತಿದ್ದಾರೆ ಫ್ಯಾನ್ಸ್. ಇನ್ನು ಶಿವಣ್ಣ ಅವರು ಈ ಬಾರಿ ತಿರುಪತಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದಿರುವುದು ಇಡೀ ಕುಟುಂಬದ ಜೊತೆಗೆ. ಪತ್ನಿ ಗೀತಾ ಅವರು, ಮಗಳು ನಿವೇದಿತಾ ಶಿವ ರಾಜ್ ಕುಮಾರ್ ಇವರೆಲ್ಲರೂ ಸಹ ಜೊತೆಯಾಗಿ ಹೋಗಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಕೂಡ ದೇವರಿಗೆ ಮುಡಿ ಕೊಟ್ಟಿದ್ದಾರೆ. ಈ ಬಾರಿ ಮುಡಿ ಕೊಟ್ಟಿರುವುದು ಶಿವಣ್ಣ ಅವರ ಆರೋಗ್ಯ ವಿಚಾರಕ್ಕೋ ಅಥವಾ ಸಿನಿಮಾ ಗೆದ್ದಿರುವ ಸಂತೋಷಕ್ಕೊ ಗೊತ್ತಿಲ್ಲ. ಆದರೆ ಶಿವಣ್ಣ ಮತ್ತು ಗೀತಕ್ಕ ಇಬ್ಬರು ಕೂಡ ಈ ಬಾರಿ ಜೊತೆಯಾಗಿ ಮುಡಿ ಕೊಟ್ಟಿದ್ದಾರೆ. ಇವರ ಕುಟುಂಬದ ಫೋಟೋಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಿವಣ್ಣ ಅವರು ಆದಷ್ಟು ಬೇಗ ಹುಷಾರಾಗಿ ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿರಲಿ ಅಂತಿದ್ದಾರೆ ಫ್ಯಾನ್ಸ್. ಶಿವಣ್ಣನ ಆರೋಗ್ಯದ ಬಗ್ಗೆ ಎಲ್ಲರಿಗೂ ಹೆಚ್ಚಿನ ಕಾಳಜಿ ಇದೆ. ಚಿತ್ರರಂಗದವರು ಕೂಡ ಶಿವಣ್ಣ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ಇರುತ್ತಾರೆ.

ಆರೋಗ್ಯದ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಆಗಿದ್ದು, ಶಿವಣ್ಣ ಅವರಿಗೆ ಟ್ರೀಟ್ಮೆಂಟ್ ನಡೆಯುತ್ತಿದೆ. ಹಾಗೆಯೇ ಶಿವಣ್ಣ ಅವರು ಸರ್ಜರಿ ಮಾಡಿಸಿಕೊಳ್ಳಬೇಕಿದ್ದು, ಇದಕ್ಕಾಗಿ ಅಮೆರಿಕಾಗೆ ಹೋಗಬೇಕಿದೆ. ಇದೇ ತಿಂಗಳು ಶಿವಣ್ಣ ಅವರು ಅಮೆರಿಕಾಗೆ ಸರ್ಜರಿ ಮಾಡಿಸುವ ಸಲುವಾಗಿ ತೆರಳಲಿದ್ದು, ಸರ್ಜರಿ ಮುಗಿಸಿಕೊಂಡು, ಕೆಲ ದಿನಗಳ ಕಾಲ ಅಲ್ಲಿಯೇ ವಿಶ್ರಾಂತಿ ಪಡೆದು ಬರಲಿದ್ದಾರೆ ಎಂದು ಸ್ವತಃ ಶಿವಣ್ಣ ಅವರೇ ಹೇಳಿಕೊಂಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶಿವಣ್ಣ ಅವರು ಅಮರಿಕಾಗೆ ತೆರಳಬಹುದು. ಮುಂದಿನ ತಿಂಗಳು ಅಂದರೆ 2025ರ ಜನವರಿ ತಿಂಗಳ ಮುಗಿಯುವ ವೇಳೆಗೆ, ವಾಪಸ್ ಭಾರತಕ್ಕೆ ಬರಲಿದ್ದಾರೆ. ಈ ಬಗ್ಗೆ ಇಂಟರ್ವ್ಯೂಗಳಲ್ಲಿ ತಿಳಿಸಿದ್ದಾರೆ.
ಇನ್ನು ಶಿವಣ್ಣ ಅವರಿಗೆ ಏನು ತೊಂದರೆ ಆಗುವುದಿಲ್ಲ, ಅವರು ಸಂಪೂರ್ಣವಾಗಿ ಹುಷಾರಾಗಿ ವಾಪಸ್ ಬರುತ್ತಾರೆ ಎಂದು ಅಮೆರಿಕಾದ ವೈದ್ಯರು ಕೂಡ ಭರವಸೆ ನೀಡಿದ್ದಾರಂತೆ. ಹಾಗಾಗಿ ಶಿವಣ್ಣ ಅವರು ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ, ಹಾಗೆಯೇ ಜನವರಿ ತಿಂಗಳ ಮುಗಿಯುವಷ್ಟರಲ್ಲಿ ಶಿವಣ್ಣ ಬ್ಯಾಕ್ ಟು ಫಾರ್ಮ್ ಆಗಿರುತ್ತಾರೆ ಎಂದು ಖುದ್ದು ಶಿವಣ್ಣ ಅವರೇ ಹೇಳಿದ್ದಾರೆ. ಇನ್ನು ಸಿನಿಮಾಗಳ ವಿಷಯದ ಬಗ್ಗೆ ಹೇಳುವುದಾದರೆ, ಭೈರತಿ ರಣಗಲ್ ಸಿನಿಮಾ ಗೆದ್ದ ಸಂತೋಷದಲ್ಲಿ ಶಿವಣ್ಣ ಇದ್ದಾರೆ. ಮುಂದಿನ ವರ್ಷ 45 ಸಿನಿಮಾ ತೆರೆಕಾಣಲಿದ್ದು, ಇನ್ನು ಹಲವು ಸಿನಿಮಾಗಳಲ್ಲಿ ಶಿವಣ್ಣ ನಟಿಸಲಿದ್ದಾರೆ.