ನಟಿ ಶ್ವೇತಾ ಆರ್ ಪ್ರಸಾದ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಇಂದು ನಟನೆ ಇಂದ ದೂರ ಆಗಿರಬಹುದು. ಆದರೆ ಶ್ವೇತಾ ಅವರ ಹಳೆಯ ಧಾರಾವಾಹಿಗಳನ್ನು ನಾವ್ಯಾರು ಮರೆತಿಲ್ಲ. ಇಂದಿಗೂ ಇವರನ್ನು ಪೂರ್ಣಪ್ರಮಾಣವಾದ ನಾಯಕಿಯ ಪಾತ್ರದಲ್ಲಿ ಮತ್ತೆ ನಟಿಸಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಆದರೆ ಶ್ವೇತಾ ಅವರು ಇನ್ನು ಕೂಡ ಕಿರುತೆರೆಗೆ ವಾಪಸ್ ಬರೋ ಮನಸ್ಸು ಮಾಡಿಲ್ಲ. ಆದರೆ ಶ್ವೇತಾ ಅವರು ಈಗ ಹೊಸ ಕೆಲಸವನ್ನು ಸಹ ಶುರು ಮಾಡಿದ್ದು, ಇದರಲ್ಲೂ ಸಕ್ಸಸ್ ಕಂಡಿದ್ದಾರೆ. ಶ್ವೇತಾ ಅವರಿಗೆ ಮೆಚ್ಚುಗೆ ಸಿಗುತ್ತಿದೆ. ಹಾಗಿದ್ದಲ್ಲೋ ಶ್ವೇತಾ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ನಟಿ ಶ್ವೇತಾ ಆರ್ ಪ್ರಸಾದ್ ಅವರ ಮೊದಲ ಧಾರಾವಾಹಿ ಶ್ರೀರಸ್ತು ಶುಭಮಸ್ತು. 2014ರಲ್ಲಿ ಶುರುವಾಗಿದ್ದು, ಮರಾಠಿ ಧಾರಾವಾಹಿಯ ರಿಮೇಕ್ ಆಗಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಾಯಕಿ ಜಾಹ್ನವಿ ಪಾತ್ರದಲ್ಲಿ ಶ್ವೇತಾ ಅಭಿನಯಿಸಿದ್ದರು. ಶ್ರೀ ಜಾನು ಜೋಡಿಗೆ ಎಲ್ಲೆಡೆ ಭಾರಿ ಬೇಡಿಕೆ ಇತ್ತು ಎಂದರು ತಪ್ಪಲ್ಲ. ಟಿಆರ್ಪಿಯಲ್ಲಿ ಸಹ ಈ ಧಾರಾವಾಹಿ ಉತ್ತಮವಾಗಿತ್ತು. ಶ್ವೇತಾ ಅವರ ಅಭಿನಯಕ್ಕೆ ಕೂಡ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಶ್ರೀರಸ್ತು ಶುಭಮಸ್ತು ನಂತರ ಇವರು ಸ್ವಲ್ಪ ಬ್ರೇಕ್ ಪಡೆದು, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದರು. ಇದರಲ್ಲಿ ಕೂಡ ಇವರ ಪಾತ್ರ ಅದ್ಭುತವಾಗಿತ್ತು.
ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಪಾತ್ರ, ರಾಧಾ ರಮಣ್ ಜೋಡಿ ಇದೆಲ್ಲವೂ ವೀಕ್ಷಕರ ಫೇವರೆಟ್. ಶ್ವೇತಾ ಅವರು ಈ ಎರಡು ಧಾರಾವಾಹಿಗಳ ನಂತರ ಮತ್ಯಾವುದೇ ಧಾರಾವಾಹಿಯಲ್ಲಿ ನಟಿಸಲಿಲ್ಲ. ಆದರೆ ಇತ್ತೀಚೆಗೆ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಗೆಸ್ಟ್ ಆಗಿ ಬಂದಿದ್ದರು. ಇದೇ ರೀತಿ ಒಂದೆರಡು ಧಾರಾವಾಹಿಗಳಲ್ಲಿ ಗೆಸ್ಟ್ ಆಗಿ ಬಂದಿದ್ದಾರೆ, ಆದರೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಮತ್ತೆ ಇವರನ್ನು ಕಿರುತೆರೆಯಲ್ಲಿ ನೋಡಬೇಕು ಎಂದು ಬಯಸುತ್ತಿದ್ದಾರೆ. ಇನ್ನು ಶ್ವೇತಾ ಅವರು ಕಿರುತೆರೆಗೆ ಮತ್ತೆ ಬರುವ ಮನಸ್ಸು ಮಾಡಿಲ್ಲ.

ಇನ್ನು ಶ್ವೇತಾ ಆರ್ ಪ್ರಸಾದ್ ಅವರು ಈಗ ಧಾರಾವಾಹಿ ಇಂದ ಒಂದು ಮಟ್ಟಕ್ಕೆ ದೂರವೇ ಉಳಿದಿದ್ದಾರೆ. ಆದರೆ ಈಗ ಶ್ವೇತಾ ಅವರು ನಿರ್ಮಾಪಕಿ ಆಗಿದ್ದಾರೆ. ಇವರ ಪತಿ ಆರ್. ಜೆ ಪ್ರದೀಪ ಅವರು ಕಥೆ ರಚಿಸಿರುವ, ಮರ್ಯಾದೆ ಪ್ರಶ್ನೆ ಸಿನಿಮಾವನ್ನು ಶ್ವೇತಾ ಅವರು ನಿರ್ಮಾಣ ಮಾಡಿದ್ದು, ಈ ಸಿನಿಮಾ ತೆರೆಕಂಡು ಎಲ್ಲರಿಂದ ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಸೆಲೆಬ್ರಿಟಿ ಶೋ ಕೂಡ ನಡೆಯಿತು, ಸಿನಿಮಾ ವೀಕ್ಷಿಸಿದ ಚಂದನವನದ ಸೆಲೆಬ್ರಿಟಿಗಳು ಮರ್ಯಾದೆ ಪ್ರಶ್ನೆ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ವಿಮರ್ಶೆ ನೀಡಿದ್ದಾರೆ..

ಇನ್ನು ಸಿನಿಮಾ ತೆರೆಕಂಡ ನಂತರ ಕನ್ನಡ ಸಿನಿಪ್ರಿಯರು ಕೂಡ ಸಿನಿಮಾ ಮೆಚ್ಚಿಕೊಂಡು, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಜನರಿಂದ ಹಾಗೂ ವಿಮರ್ಶಕರಿಂದ ಮರ್ಯಾದೆ ಪ್ರಶ್ನೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಈ ರೀತಿಯಾಗಿ ಶ್ವೇತಾ ಅವರು ನಟನೆ ಇಂದ ದೂರ ಉಳಿದು, ನಿರ್ಮಾಪಕಿ ಆಗಿ ಕೂಡ ಗೆದ್ದಿದ್ದಾರೆ. ಈ ರೀತಿ ಹೊಸ ಪ್ರಯತ್ನ ಮಾಡುವವರಿಗೆ ಗೆಲುವು ಹಾಗೂ ಜನಪ್ರಿಯತೆ ಸಿಕ್ಕರೆ, ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಸಿನಿಮಾಗಳ ನಿರ್ಮಾಣ ಆಗುತ್ತದೆ. ಹಾಗಾಗಿ ನಾವು ಇಂಥ ಒಳ್ಳೆಯ ಸಿನಿಮಾಗಳನ್ನು ಪ್ರೋತ್ಸಾಹಿಸಿ ಗೆಲ್ಲಿಸಬೇಕು. ಕನ್ನಡ ಸಿನಿಮಾಗಳು ಚೆನ್ನಾಗಿವೆ ಎನ್ನುವುದನ್ನು ನಿರೂಪಿಸಬೇಕು.