ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಕಳೆದ ವಾರವಷ್ಟೇ ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿದ್ದು, ಬಹಳ ನೋವಿನಿಂದ ಸೋಷಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ತಿಳಿಸಿದ್ದರು. ಕುಟುಂಬದಲ್ಲಿ ಈ ರೀತಿ ಆಗಿರುವಾಗ ಶುಭಾ ಪೂಂಜಾ ಅವರು ಕೆಲವು ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಶುಭಾ ಅವರು ತಾಯಿ ಹೋದ 4 ದಿನಕ್ಕೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ನೋವುಗಳ ನಡುವೆ ಕಾಯಕವನ್ನು ಬಿಡಲು ಆಗುವುದಿಲ್ಲ ಎನ್ನುವುದು ಸತ್ಯದ ಮಾತು. ಕೆಲಸಕ್ಕೆ ಪ್ರಾಮುಖ್ಯತೆ ಕೊಟ್ಟು, ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಶುಭಾ ಪೂಂಜಾ ಅವರು ಬಂದಿದ್ದು, ಇವರಿಗೆ ಎಲ್ಲರೂ ಸಮಾಧಾನ ಮಾಡಿದ್ದಾರೆ. ಕಲರ್ಸ್ ಕನ್ನಡ ಶೇರ್ ಮಾಡಿರುವ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಲ್ಲಿ ಶುಭಾ ಪೂಂಜಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಶುಭಾ ಅವರು, ಬಿಗ್ ಬಾಸ್ ನಂತರ ಬಂದಿರುವ ರಿಯಾಲಿಟಿ ಬಾಯ್ಸ್ ವರ್ಸಸ್ ಗರ್ಲ್ಸ್. ಈ ಶೋ ನಲ್ಲಿ ಹುಡುಗಿಯರ ತಂಡಕ್ಕೆ ಶುಭಾ ಅವರು ಮೆಂಟರ್ ಆಗಿದ್ದಾರೆ. ಶುಭಾ ಅವರು ಎಷ್ಟು ಫನ್ನಿ ವ್ಯಕ್ತಿತ್ವ ಹೊಂದಿರುವವರು ಎಂದು ನಮಗೆಲ್ಲ ಗೊತ್ತೇ ಇದೆ. ಶುಭಾ ಇದ್ದಾರೆ ಅಂದ್ರೆ ಅಲ್ಲಿ ತಮಾಷೆ, ನಗು ಇರಲೇಬೇಕು. ನೆಟ್ಟಿಗರು ಕೂಡ ಶುಭ ಅವರು ಇದ್ರೆ ಮಾತ್ರ ಈ ಶೋ ನೋಡೋಕೆ ಚೆಂದ ಎಂದು ಹಲವು ಸಾರಿ ಹೇಳಿದ್ದಿದೆ. ಈ ಕಾರಣ ಹಾಗೂ ಇನ್ನು ಹಲವು ಕಾರಣಗಳಿಗೆ ಶುಭಾ ಅವರನ್ನು ಇಷ್ಟಪಡುವ ಹಲವಾರು ಜನರು ಇದ್ದಾರೆ.
ಶೋ ಏನೋ ತಕ್ಕಮಟ್ಟಿಗೆ ಚೆನ್ನಾಗಿ ಸಾಗುತ್ತಿದೆ. ಜನರಿಗೆ ಈ ಶೋ ಇಂದ ಫುಲ್ ಎಂಟರ್ಟೈನ್ಮೆಂಟ್ ಸಿಗುತ್ತಿದೆ. ಹುಡುಗರು ಮತ್ತು ಹುಡುಗಿಯರ ನಡುವಿನ ಕಾಂಪಿಟೇಶನ್ ಅನ್ನು ವೀಕ್ಷಕರು ಸಖತ್ ಎಂಜಾಯ್ ಮಾಡುತ್ತಾ ನೋಡುತ್ತಿದ್ದಾರೆ. ಸದಾ ನಗುನಗುತ್ತಾ ತಮಾಷೆ ಮಾಡುತ್ತಾ ಇರುವ ಶುಭಾ ಅವರಿಗೆ ಇದು ಸಂತೋಷದ ಸಮಯ ಅಲ್ಲ. ಇತ್ತೀಚೆಗೆ ಶುಭಾ ಅವರು ತಾಯಿಯನ್ನು ಕಳೆದುಕೊಂಡಿದ್ದಾರೆ. ತಾಯಿ ಹೋದ 4 ದಿನಕ್ಕೆ ಶುಭಾ ಪೂಂಜಾ ಶೂಟಿಂಗ್ ಗೆ ಹಾಜರಾಗಿದ್ದಾರೆ. ಶುಭಾ ಅವರ ತಾಯಿ ಕೆಲವು ತಿಂಗಳುಗಳಿಂದ ಆರೋಗ್ಯ ಸಮಸ್ಯೆಯ ಕಾರಣ ಬಳಲುತ್ತಿದ್ದರು. ಅವರಿಗೆ ನಿಮೋನಿಯಾ ಆಗಿತ್ತು ಎನ್ನಲಾಗಿದೆ. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಹೆಚ್ಚಿನ ತೊಂದರೆಗೆ ಸಿಲುಕಿಕೊಂಡ ಕಾರಣ, ಆಸ್ಪತ್ರೆಗೆ ಸೇರಿಸಲಾಗಿತ್ತು..

ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲ ಕೊಡದೇ, ಶುಭಾ ಪೂಂಜಾ ಅವರ ತಾಯಿ ಕಳೆದ ವಾರ ವಿಧಿವಶರಾದರು. ಶುಭಾ ಪೂಂಜಾ ಅವರ ತಾಯಿಯ ಕೊನೆಯ ಆಸೆಯ ಅನುಸಾರ ಅವರನ್ನು, ಅವರ ಹುಟ್ಟೂರಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು. ಅಮ್ಮನನ್ನು ಕಳೆದುಕೊಂಡ ನಂತರ ಶುಭಾ ಪೂಂಜಾ ಅವರು ತಮ್ಮ ತಾಯಿಯ ಬಗ್ಗೆ ಬರೆದ ಕೆಲವು ಸಾಲುಗಳು ಎಲ್ಲರನ್ನು ಭಾವುಕರಾಗುವ ಹಾಗೆ ಮಾಡಿತು. ಅಮ್ಮನ ನೆನಪಲ್ಲಿ ಶುಭಾ ಅವರು ಬರೆದ ಸಾಲುಗಳು ಹೀಗಿತ್ತು.. “ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ.. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ ಈಗ ನಾನು ಏನು ಮಾಡಲಿ.. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ.
ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು.. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ..” ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಹಾಗೆಯೇ ಅಮ್ಮನ ಜೊತೆಗಿನ ಕೆಲವು ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಂಡಿದ್ದರು. ಅವರು ಬರೆದಿರುವ ಒಂದೊಂದು ಸಾಲುಗಳನ್ನು ಓದಿದರೆ, ಅವರ ಮನಸ್ಸಿನಲ್ಲಿ ಎಷ್ಟು ನೋವಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ. ತಾಯಿಯನ್ನು ಕಳೆದುಕೊಂಡ ನೋವು ಸಾಮಾನ್ಯವಾದದ್ದಂತೂ ಅಲ್ಲ. ಅಮ್ಮ ಅನ್ನೋರು ಎಲ್ಲರ ಲೈಫ್ ನಲ್ಲಿ ಅತ್ಯಂತ ಅಮೂಲ್ಯವಾದ ವ್ಯಕ್ತಿ. ಅಮ್ಮನ ಪ್ರೀತಿಯನ್ನ ಕಾಳಜಿಯನ್ನ ಯಾರಿಂದಲೂ ವಾಪಸ್ ಕೊಡುವುದಕ್ಕೆ ಸಾಧ್ಯವಿಲ್ಲ. ಅಂಥ ಅಮ್ಮನನ್ನ ಕಳೆದುಕೊಂಡಾಗ ಯಾರಿಗೆ ಆದರೂ ಆ ಘಟನೆಯನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ.
ಅಂಥ ನೋವಿನ ಘಳಿಗೆಯಲ್ಲಿ ಕೂಡ ಶುಭಾ ಪೂಂಜಾ ಅವರು ಶೂಟಿಂಗ್ ಗೆ ಬಂದಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪ್ರೊಮೋನಲ್ಲಿ ಅನುಪಮಾ ಅವರು ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿ ಕೇವಲ 4 ದಿವಸ ಅಷ್ಟೇ ಆಗಿರೋದು ಎಂದು ಹೇಳುತ್ತಾರೆ. ಇನ್ನು ಶುಭಾ ಪೂಂಜಾ ಅವರ ತಾಯಿಯ ಫೋಟೋಗಳು ಸ್ಕ್ರೀನ್ ಮೇಲೆ ಬಂದಾಗ ಅದನ್ನು ನೋಡಿ ಶುಭಾ ಅವರು ಭಾವುಕರಾಗುತ್ತಾರೆ, ಕಣ್ಣೀರು ಹಾಕುತ್ತಾರೆ. ಅಲ್ಲಿದ್ದ ಎಲ್ಲರೂ ಕೂಡ ಶುಭಾ ಅವರನ್ನು ಸಮಾಧಾನ ಮಾಡುವುದಕ್ಕೆ ಬಂದಿದ್ದಾರೆ. ಈ ಪ್ರೊಮೋ ನೋಡಿ ವೀಕ್ಷಕರು ಕೂಡ ಭಾವುಕರಾಗಿದ್ದಾರೆ.

ಶುಭಾ ಪೂಂಜಾ ಅವರಿಗೆ ನೆಟ್ಟಿಗರು ಧೈರ್ಯ ತುಂಬುತ್ತಿದ್ದು, ನಿಮ್ಮ ತಾಯಿ ಯಾವಾಗಲೂ ನಿಮ್ಮ ಜೊತೆಯಲ್ಲೇ ಇರುತ್ತಾರೆ, ಧೈರ್ಯ ಕಳೆದುಕೊಳ್ಳಬೇಡಿ ಎಂದು ಸಮಾಧಾನ ಮಾಡುತ್ತಿದ್ದಾರೆ. ಅಷ್ಟು ನೋವಿದ್ದರೂ ಶುಭಾ ಪೂಂಜಾ ಅವರು ಶೂಟಿಂಗ್ ಗೆ ಬಂದಿದ್ದಾರೆ ಎನ್ನುವುದಕ್ಕೆ ಶುಭಾ ಅವರಿಗೆ ಮೆಚ್ಚುಗೆ ಕೂಡ ಸಿಗುತ್ತಿದೆ. ಶುಭಾ ಪೂಂಜಾ ಅವರಿಗೆ ಸಧ್ಯಕ್ಕೆ ಈ ಶೋ ಇಂದ ಮತ್ತೆ ಜನಪ್ರಿಯತೆ ಸಿಗುತ್ತಿದ್ದು, ಇದು ಇದೇ ರೀತಿ ಮುಂದುವರೆಯಲಿ ಅಂತಿದ್ದಾರೆ ನೆಟ್ಟಿಗರು. ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಮೂಲಕ ಶುಭಾ ಅವರಿಗೆ ಒಳ್ಳೆಯದಾಗಲಿ. ಅವರ ತಾಯಿ ಇಲ್ಲದ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಶುಭಾ ಅವರಿಗೆ ಕೊಡಲಿ. ಮುಂದಿನ ಸಿನಿಮಾಗಳು ಯಶಸ್ವಿ ಆಗಲಿ ಎಂದು ನಾವು ಕೂಡ ಹಾರೈಸೋಣ.