ಯಶ್ ಅವರು ಇಂದು ಭಾರತ ಟಾಪ್ ಹೀರೋಗಳಲ್ಲಿ ಒಬ್ಬರು. ರಾಕಿ ಭಾಯ್ ಅಂದರೆ ಗೊತ್ತಿಲ್ಲದವರು ಇಲ್ಲ ಎಂದು ಹೇಳಬಹುದು. ವಿದೇಶದಲ್ಲಿ ಸಹ ಕೆಜಿಎಫ್2 ಮೂಲಕ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ ನಟ ಯಶ್. ಯಶ್ ಅವರು ಕೆಜಿಎಫ್1 ಹಾಗೂ ಕೆಜಿಎಫ್2 ಯಶಸ್ಸಿನಿಂದ ಇಂಡಿಯನ್ ಬಾಕ್ಸ್ ಆಫೀಸ್ ನ ಸಿಇಒ ಆಗಿದ್ದಾರೆ ಎಂದು ಸಹ ಹೇಳಬಹುದು. ಯಶ್ ಅವರು ಒಂದು ದಿನದ ಅಥವಾ ಒಂದು ವರ್ಷದ ಕನಸಲ್ಲ ಇದು, ಹಲವು ವರ್ಷಗಳ ಕನಸು ಮತ್ತು ಪರಿಶ್ರಮ. ಇದರ ಬಗ್ಗೆ ಶ್ರುತಿ ನಾಯ್ಡು ಅವರು ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದು, ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶ್ರುತಿ ನಾಯ್ಡು ಅವರು ಇಂದು ಕನ್ನಡ ಕಿರುತೆರೆಯಲ್ಲಿ ಖ್ಯಾತ ಪ್ರೊಡ್ಯುಸರ್, ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದಾರೆ. ಆರಂಭದಲ್ಲಿ ಇವರು ಕೆರಿಯರ್ ಶುರು ಮಾಡಿದ್ದು ನಟಿಯಾಗಿ. ಹಲವು ಧಾರಾವಾಹಿಗಳಲ್ಲಿ ಶ್ರುತಿ ನಾಯ್ಡು ಅಭಿನಯಿಸಿದ್ದಾರೆ. ಯಶ್ ಅವರ ಮೊದಲ ಧಾರಾವಾಹಿಯಲ್ಲಿ ಅವರಿಗೆ ನಾಯಕಿ ಆಗಿದ್ದು ಶ್ರುತಿ ನಾಯ್ಡು ಅವರೇ. ಇವರಿಬ್ಬರು ಸಹ ಮೈಸೂರಿನವರು. ಹಾಗಾಗಿ ಇಬ್ಬರಿಗೂ ಒಳ್ಳೆಯ ಸ್ನೇಹವಿತ್ತು. ಈಗಲೂ ಸಹ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದಾರೆ. ಇವರೆಲ್ಲರ ನಡುವೆ ಅದೇ ಆತ್ಮೀಯತೆ ಇದೆ.
ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಶ್ರುತಿ ನಾಯ್ಡು ಅವರು, ಯಶ್ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆರಿಯರ್ ಶುರುವಿನಲ್ಲಿ ಯಶ್ ಅವರು ತಮ್ಮ ಕನಸುಗಳ ಬಗ್ಗೆ ಹೇಳುತ್ತಿದ್ದಾಗ ಶ್ರುತಿ ನಾಯ್ಡು ಅವರಿಗೆ ಇದೆಲ್ಲಾ ಹೇಗೆ ಸಾಧ್ಯ? ಇದೆಲ್ಲ ಆಗಲ್ಲ ಇವನು ಡಿಪ್ರೆಶನ್ ಹೋಗಿ ಬಿಡ್ತಾನೇನೋ ಎಂದು ಭಯ ಆಗಿತ್ತಂತೆ. ಆದರೆ ಅಂದು ಹೇಳಿದ್ದ ಒಂದೊಂದು ಮಾತನ್ನು ಸಹ ಯಶ್ ಅವರು ನಿಜ ಆಗೋ ಹಾಗೆ ಮಾಡಿದ್ದಾರೆ ಎನ್ನುವುದು ಶ್ರುತಿ ನಾಯ್ಡು ಅವರಿಗೆ ಹೆಮ್ಮೆ ಆಗಿದೆ. ಒಂದೊಂದು ಅವಕಾಶಗಳು ಸಿಕ್ಕಿ, ಯಶ್ ಅವರು ಬೆಳೆಯುತ್ತಾ ಹೋಗೋದನ್ನ ನೋಡಿದಾಗ..
ಶ್ರುತಿ ನಾಯ್ಡು ಅವರಿಗೆ ಆಶ್ಚರ್ಯ ಆಗಿತ್ತಂತೆ. ಯಶ್ ಅವರು ಏನೆಲ್ಲ ಹೇಳುತ್ತಿದ್ದರು ಎಂದು ರಾಪಿಡ್ ರಶ್ಮಿ ಅವರು ಕೇಳಿದಾಗ, ಈಗ ಅವರ ಕೆರಿಯರ್ ವಿಷಯದಲ್ಲಿ ಏನೆಲ್ಲಾ ಆಗ್ತಿದೆ, ಬೆಳವಣಿಗೆ ನಡೆದಿದೆ ಅವೆಲ್ಲವನ್ನೂ ಇದೇ ರೀತಿ ಆಗುತ್ತೆ ಅಂತ ಹೇಳಿದ್ರು ಎಂದು ಹೇಳಿದ್ದಾರೆ ಶ್ರುತಿ ನಾಯ್ಡು. ಯಶ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಯಶ್ ಅವರ ಕನಸುಗಳು ಹಾಗೂ ಅವರ ವಿಷನ್ ನಿಜಕ್ಕೂ ಅದ್ಭುತ ಎಂದು ಹೇಳಬಹುದು. ಒಬ್ಬ ಬಸ್ ಡ್ರೈವರ್ ಮಗ ಆಗಿದ್ದವರು ಇಂದು ಸಾವಿರ ಕೋಟಿ ಹಣಗಳಿಕೆ ಮಾಡಿದ ಸಿನಿಮಾ ನೀಡಿದ್ದಾರೆ ಎಂದರೆ ಅದು ಅವಿಸ್ಮರಣೀಯ ಸಾಧನೆಯೇ ಸರಿ.

ನಿನ್ನೆಯಷ್ಟೇ ಯಶ್ ಅವರ ಹುಟ್ಟುಹಬ್ಬ ನಡೆದಿದೆ. ಫ್ಯಾಮಿಲಿ ಜೊತೆಗೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ ಯಶ್. ಇನ್ನು ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್ ಟೀಸರ್ ಸಹ ನಿನ್ನೆ ಬಿಡುಗಡೆ ಆಗಿದ್ದು, ಈಗಾಗಲೇ 25 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡು ಹೊಸ ದಾಖಲೆ ಬರೆದಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾದ ವಿಷುವಲ್ಸ್ ಅಷ್ಟು ಅದ್ಭುತವಾಗಿ ಮೂಡಿಬಂದಿದ್ದು, ಅವರ ಸ್ಟೈಲ್ ಇನ್ನು ಮಜವಾಗಿದೆ. ಫ್ಯಾನ್ಸ್ ಎಲ್ಲರೂ ಟಾಕ್ಸಿಕ್ ಟೀಸರ್ ನೋಡಿ, ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಸಿನಿಮಾ ರಿಲೀಸ್ ಆಗೋದು ಯಾವಾಗ ಎಂದು ಕಾಯುತ್ತಿದ್ದಾರೆ ರಾಕಿ ಭಾಯ್ ಫ್ಯಾನ್ಸ್.