ಶಿವಣ್ಣ ಅವರು ಈಗ ಅಮೆರಿಕಾದಲ್ಲಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಶಿವಣ್ಣ ಅವರಿಗೆ ಕ್ಯಾನ್ಸರ್ ಆದ ಕಾರಣ ಅವರು ಒಂದಷ್ಟು ದಿವಸ ಕರ್ನಾಟಕದಲ್ಲೇ ಚಿಕಿತ್ಸೆ ಪಡೆದರು. ಬಳಿಕ ಶಿವಣ್ಣ ಅವರಿಗೆ ಸರ್ಜರಿ ಆಗಬೇಕಿದ್ದ ಕಾರಣ ಡಿಸೆಂಬರ್ 18ರಂದು ಶಿವಣ್ಣ ಅವರು ಬೆಂಗಳೂರಿನಿಂದ ಅಮೆರಿಕಾಗೆ ಹೊರಟರು. ಡಿಸೆಂಬರ್ 24ರಂದು ಅವರಿಗೆ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಸರ್ಜರಿ ಕೂಡ ನಡೆಯಿತು. ಜನವರಿ 1ರಂದು ಶಿವಣ್ಣ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ಟೆಸ್ಟ್ ಗಳ ಮೂಲಕ ತಿಳಿದುಬಂದಿದ್ದು, ಹೊಸ ವರ್ಷದ ದಿವಸ ಅಭಿಮಾನಿಗಳ ಬಳಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡರು.
ಗೀತಕ್ಕ ಮತ್ತು ಶಿವಣ್ಣ ಇಬ್ಬರು ಸಹ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಈ ವಿಚಾರ ತಿಳಿಸಿ, ಡಾಕ್ಟರ್ ಒಂದೆರಡು ದಿವಸ ರೆಸ್ಟ್ ಮಾಡೋದಕ್ಕೆ ಹೇಳಿದ್ದಾರೆ, ಆಮೇಲೆ ಎಲ್ಲವನ್ನು ತಿನ್ನಬಹುದು, ಏನು ಬೇಕಾದರೂ ಮಾಡಬಹುದು ಅಂದಿದ್ದಾರೆ. ಶಿವಣ್ಣನಿಗೆ ಮೊದಲು ಎಷ್ಟು ಪವರ್ ಇತ್ತೋ ಅದಕ್ಕಿಂತ ಡಬಲ್ ಪವರ್ ಇನ್ನುಮುಂದೆ ಇರುತ್ತದೆ, ಬೇಗ ವಾಪಸ್ ಬರ್ತೀನಿ ಎಂದು ಹೇಳಿದ್ದರು ಶಿವಣ್ಣ. ಹೊಸ ವರ್ಷದ ದಿವಸ ಅಭಿಮಾನಿಗಳಿಗೆ ಈ ಒಂದು ಸಂತೋಷದ ಸುದ್ದಿಯನ್ನು ಶಿವಣ್ಣ ನೀಡಿದರು. ಇದರಿಂದ ಶಿವಣ್ಣ ಹೇಗಿದ್ದಾರೋ ಎಂದು ಆತಂಕಗೊಂಡಿದ್ದ ಅಭಿಮಾನಿಗಳಿಗೆ ಸಮಾಧಾನ ಸಹ ಆಯಿತು.

ಶಿವಣ್ಣ ಅವರು ಕ್ಯಾನ್ಸರ್ ಮುಕ್ತ ಆಗಿರುವ ಕಾರಣ ಅವರು ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೆಲವು ದಿನಗಳ ಕಾಲ ಶಿವಣ್ಣ ಅಮೆರಿಕಾದಲ್ಲೇ ಇರಲಿದ್ದಾರೆ. ಜನವರಿ 26ರಂದು ಬೆಂಗಳೂರಿಗೆ ಬರಲಿದ್ದಾರೆ, ಪ್ರಸ್ತುತ ಶಿವಣ್ಣ ಅವರು ಅಮೇರಿಕಾದಲ್ಲಿದ್ದು ಅಲ್ಲಿನ ಅವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಸಹ ಅವರು ಉಳಿದುಕೊಂಡಿರುವ ಮನೆಯ ಹತ್ತಿರ ಇರುವ ಬೀಚ್ ಗೆ ಭೇಟಿ ನೀಡಿದ್ದಾರೆ. ಬೀಚ್ ನಲ್ಲಿ ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಕೆಲವು ಫೋಟೋಸ್ ಗೆ ಪೋಸ್ ನೀಡಿದ್ದಾರೆ. ಹಾಗೆಯೇ ಗೀತಕ್ಕ ಶಿವಣ್ಣ ಅವರ ಫೋಟೋ ಕ್ಲಿಕ್ ಮಾಡಿದ್ದಾರೆ..
ಶಿವಣ್ಣ ಈಗಲೂ ಸಹ ಯಂಗ್ ಬಾಯ್ ಹಾಗೆ ಕಾಣುತ್ತಿದ್ದು, ಶಿವಣ್ಣ ಅವರ ಚಾರ್ಮ್ ಇನ್ನು ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ಗಂಡನ ಫೋಟೋವನ್ನು ತಮ್ಮ ಫೋನ್ ನಲ್ಲಿ ಗೀತಕ್ಕ ಕ್ಲಿಕ್ ಮಾಡಿದ್ದು, ಇಬರಿಬ್ಬರ ಜೋಡಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈಗಲೂ ಇಬ್ಬರು ಎಷ್ಟು ಪ್ರೀತಿಯಿಂದ ಇದ್ದಾರೆ, ಗೀತಕ್ಕ ಇರೋದ್ರಿಂದಲೇ ಶಿವಣ್ಣ ಇಷ್ಟು ಚೆನ್ನಾಗಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಅವರು ಬೀಚ್ ನಲ್ಲಿ ಗಡಿಬಿಡಿ ಅಳಿಯ ಸಿನಿಮಾದಲ್ಲಿ ಕಾಣುತ್ತಿದ್ದ ಹಾಗೆ ಕಾಣಿಸಿದ್ದಾರೆ. ಶಿವಣ್ಣ ಬೇಗ ಬೆಂಗಳೂರಿಗೆ ಬಂದು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿ ಎನ್ನುವುದೇ ಎಲ್ಲರ ಆಸೆ.

ಶಿವಣ್ಣ ಅವರಿಗೆ ಅನಾರೋಗ್ಯ ಇದ್ದಾಗಲೇ ಅಮೆರಿಕಾಗೆ ಹೋಗುವ ಮೊದಲೇ 45 ಸಿನಿಮಾದ ಡಬ್ಬಿಂಗ್ ಕೆಲಸಗಳನ್ನು ಸಹ ಮುಗಿಸಿ ಹೋಗಿದ್ದಾರೆ. ಅವರು ಬಂದ ನಂತರ ಸಿನಿಮಾ ಬಿಡುಗಡೆಯ ಸಿದ್ಧತೆಗಳು ಶುರುವಾಗಲಿದೆ. ಇನ್ನು ಶಿವಣ್ಣ ಅವರ ಮಗಳು ನಿವೇದಿತಾ ಶಿವ ರಾಜ್ ಕುಮಾರ್ ಅವರು ನಿರ್ಮಾಣ ಮಾಡಿರುವ ಫೈರ್ ಫ್ಲೈ ಸಿನಿಮಾ ಸಹ ಬಿಡುಗಡೆ ಆಗುವುದಕ್ಕೆ ಸಿದ್ಧವಾಗಿದ್ದು, ಎಲ್ಲರೂ ಬೆಂಗಳೂರಿಗೆ ಬಂದ ನಂತರ ಈ ಸಿನಿಮಾ ಕೂಡ ತೆರೆ ಕಾಣಲಿದೆ. ಹಾಗೆಯೇ ಎ ಫಾರ್ ಆನಂದ್ ಸಿನಿಮಾ ಚಿತ್ರೀಕರಣದಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ.