ಬಿಗ್ ಬಾಸ್ ಸೀಸನ್ 9 ತನ್ನ ಶುರುವಿನಲ್ಲಿ ಬಹಳ ಹೈಪ್ ಪಡೆದುಕೊಂಡಿತ್ತು.ಆದರೆ ದಿನ ಕಳೆಯುತ್ತಿದ್ದಂತೆ ಅದರ ಛಾಪು ಕಳೆದುಕೊಳ್ಳುತ್ತಿದೆ.ಈ ಸೀಸನ್ ನ ನವೀನರ ಹಾಗೂ ಪ್ರವೀಣರ ಆಟ ಬಹಳ ಕುತೂಹಲ ಹಾಗೂ ರೋಚಕ ವಾಗಿರಬಹುದು ಎಂದು ಪ್ರೇಕ್ಷಕರು ಬಯಸಿದ್ದರು.ಆದರೆ ದಿನೇ ದಿನೇ ಪ್ರೇಕ್ಷಕರ ಎಸ್ಪಿಏಕಟೇಶನ್ ತುಂಬಲಾರದೆ ಬಿಗ್ ಬಾಸ್ ಸೀಸನ್ 9 ವೀಕ್ಷಕರ ಸಂಖ್ಯೆ ಕಡಿಮೆ ಮಾಡಿಕೊಂಡಿತ್ತು.ಆದರೆ ಇದೀಗ ಅಲ್ಲಿನ ಸ್ಫರ್ದಿಗಳು ಮನೋರಂಜನೆ ನೀಡುವಲ್ಲಿ ವಿಫಲರಾದ ಕಾರಣ ಬಿಗ್ ಬಾಸ್ ತಮ್ಮ ಚಾತುರ್ಯತೆ ಯಿಂದ ಅಲ್ಲಿನ ಬಿಗ್ ಬಾಸ್ ಸ್ಪರ್ದಿಗಳಿಂದ ಮನೋರಂಜನೆ ದುಪ್ಪಟ್ಟು ಮಾಡುವಂತಹ ಟಾಸ್ಕ್ ನೀಡುತ್ತಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸ್ಪರ್ದಿಗಳು ಶಿಸ್ತಿನಲ್ಲಿ ಬಹಳ ಹಿಂದುಳಿದಿದ್ದರೂ ಆ ಕಾರಣಕ್ಕೆ ಬಿಗ್ ಬಾಸ್ ಮನೆಯ ಮಂದಿಗೆ ಶಿಸ್ತಿನ ಪಾಠ ಕಲಿಸಲು ಹಾಗೂ ಅದ್ರ ಮಹತ್ವ ತಿಳಿಸಲು ಬ್ಯಾಟರಿ ಟಾಸ್ಕ್ ನೀಡಿದ್ದರು.ಮನೆಯ ಮಂದಿ ಮನೆಯಲ್ಲಿ ಅಳವಡಿಸಿರುವ ಷರತ್ತುಗಳನ್ನು ಮೀರಿದರೆ ಪಡೆದಿರುವ ಬ್ಯಾಟರಿ ಚಾರ್ಜ್ ಕಡಿಮೆಯಾಗುವುದರ ಜೊತೆಗೆ ಮನೆ ಮಂದಿಯನ್ನು ಭೇಟಿ ಯಾಗುವ ಅವಕಾಶ ಕೊಡ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುವಂತೆ ಬಿಗ್ ಬಾಸ್ ತಿಳಿಸಿದ್ದರು.
ಅದ್ರಲ್ಲೂ ಕಳೆದ ವಾರ ಫ್ಯಾಮಿಲಿ ವಿಕ್ ಆಗಿದ್ದರಿಂದ ಮತ್ತಷ್ಟು ಹೈಪ್ ಪಡೆದಿಕೊಂಡಿತ್ತು.ಮನೆಯವರೆಲ್ಲರೂ ಕೂಡ ಬಹಳ ಆಕ್ಟಿವ್ ಇದ್ದರು ಬಹಳ ದಿನಗಳ ಬಳಿಕ ತಮ್ಮ ಮನೆಯವರನ್ನು ಭೇಟಿ ಮಾಡುವುದಾಗಿ ಎಲ್ಲರೂ ಕೂಡ ಬಹಳ ಉತ್ಸುಕರಾಗಿದ್ದರು.ಹೀಗೆ ತಮ್ಮ ಮನೆಯವರನ್ನು ಭೇಟಿಯಾದ ನಂತರ ಬಿಗ್ ಬಾಸ್ ಕಲಿಸಿದ ಶಿಸ್ತಿನ ಪಾಠ ಮರೆತಿದ್ದಾರೆ ಎಂಬುದನ್ನು “ಅನುಪಮಾ ಗೌಡ” ಅವರು ನಿರೂಪಿಸಿದ್ದಾರೆ.ಹೌದು! ಮೊನ್ನೆಯ ಸಂಚಿಕೆಯಲ್ಲಿ ಅನುಪಮಾ ಅವರು ಪಾತ್ರೆ ತೊಳೆಯುವ ಸಂಧರ್ಭದಲ್ಲಿ ಕೈ ತಪ್ಪಿನಿಂದ ಗಾಜಿನ ಲೋಟ ಓಡೆದು ಹಾಕಿದ್ದರು.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ತಪ್ಪಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ.ಅದರ ಅನುಸಾರವಾಗಿಯೇ ಅನುಪಮ ಅವರು ಕ್ಯಾಮರಾ ಮುಂದೆ ಬಂದು ಶಿಕ್ಷೆಯ ಬಗ್ಗೆ ಸ್ವಲ್ಪ ದಾರಳತೆ ತೋರಿಸುವಂತೆ ಮಾಡಿದ್ದರು.ಅದರ ಅನುಸಾರದಂತೆ ಬಿಗ್ ಬಾಸ್ ಪತ್ರ ಕಳಿಸುವ ಮುಂತಾರ ಅನುಪಮ ಅವರ ಶಿಕ್ಷೆ ತಿಳಿಸಿದ್ದರು.ಆ ಶಿಕ್ಷೆ ಎಲ್ಲರಿಗೂ ನಗು ಹಾಗೂ ಮನೋರಂಜನೆಯ ಪ್ಯಾಕ್ ಆಗಿತ್ತು ಎಂದರೆ ತಪ್ಪಾಗಲಾರದು. ಬಿಗ್ ಬಾಸ್ ತಿಳಿಸಿರುವ ಹಾಗೆ ಅನುಪಮ ಅವರು ನೀರು ಕುಡಿಯುವ ಮೊದಲು ಮನೆಯಲ್ಲಿ ಇರುವ ಪುರುಷ ಸದಸ್ಯರಿಗೆ ನೃತ್ಯ ಕಲಿಸಿಕೊಡುವದಾಗಿ ತಿಳಿಸಿದ್ದರು.
ಇದರ ಅನುಸಾರವಾಗಿಯೇ ಅನುಪಮ ಒಬೊಬ್ಬರಿಗೂ ನೃತ್ಯ ಕಲಿಸಲು ಆರಂಭಿಸಿದರು.ಅವರೆಲ್ಲರ ಪೈಕಿ ಅತಿ ಹೆಚ್ಚು ಮನೋರಂಜನೆ ನೀಡಿದ ಸದಸ್ಯರು ಎಂದರೆ “ಪ್ರಶಾಂತ್ ಹಾಗೂ ರೂಪೇಶ್ ಶೆಟ್ಟಿ”. ಪ್ರಶಾಂತ್ ನೃತ್ಯ ಮಾಡಲು ಧರಿಸಿದ್ದ ಹುಡುಗಿಯರ ಬಟ್ಟೆ ಹೆಚ್ಚು ಗಮನ ಸೆಳೆದರೆ. ಇತ್ತಾ ರೂಪೇಶ್ ಶೆಟ್ಟಿ ಬೆಲ್ಲಿ ಡಾನ್ಸ್ ಮಾಡುವ ಮುಂಕಾಂತರ ಎಲ್ಲರನ್ನು ನಗಿಸುತ್ತಾ ದೊಡ್ಡ ಪ್ರಮಾಣದ ಮನೋರಂಜನೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು.ಹೀಗೆ ಎಲ್ಲರನ್ನು ರಂಜಿಸುತ್ತಾ ಅನುಪಮಾ ತಮ್ಮ ತಪ್ಪಿಗೆ ಶಿಕ್ಷೆ ಪೂರ್ಣ ಗೊಳಿಸಿದರು.