ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂದ್ರೆ ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದು ಹೇಳುತ್ತಾರೆ. ಇವರ ಸಿನಿಮಾಗಳು ಅಂದ್ರೆ ಅಭಿಮಾನಿಗಳಿಗೆ ಬಹಳ ಇಷ್ಟ. ಒಂದು ಕಾಲದಲ್ಲಿ ಇವರು ಹೀರೋಯಿನ್ ಗಳನ್ನು ಕಲರ್ ಫುಲ್ ಆಗಿ, ಸುಂದರವಾಗಿ ತೋರಿಸುವ ಕಾರಣಕ್ಕೆ ಎಲ್ಲರಿಗೂ ಬಹಳ ಇಷ್ಟ ಆಗಿರುವವರು. ಖ್ಯಾತ ಬಾಲಿವುಡ್ ನಟಿಯರು, ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದವರು ಕ್ರೇಜಿಸ್ಟಾರ್. ಬೇರೆ ನಟಿಯರನ್ನು ಕನ್ನಡಕ್ಕೆ ಕರೆತಂದ ಇವರು, ಹೀರೋಯಿನ್ ಗಳನ್ನು ಬಹಳ ಸುಂದರವಾಗಿ ತೋರಿಸುಕಾ ಕಾರಣಕ್ಕೆ ರವಿಚಂದ್ರನ್ ಅವರು ಹೆಚ್ಚು ಹೆಸರುವಾಸಿ ಆಗಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಇಂಥ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಆ ಒಬ್ಬ ನಟಿಯ ಮದುವೆ ಆದಾಗ ಬಹಳ ಬೇಸರ ಮಾಡಿಕೊಂಡು ಕಣ್ಣೀರು ಹಾಕಿದ್ದರಂತೆ. ಅಷ್ಟಕ್ಕೂ ಆ ಸ್ಟಾರ್ ನಟಿ ಯಾರು ಗೊತ್ತಾ?
ರವಿಚಂದ್ರನ್ ಅವರು ಸಿನಿಮಾಗಳ ವಿಷಯ ಎಂದು ಬಂದರೆ, ಬಹಳ ಗ್ರ್ಯಾಂಡ್ ಆಗಿ ತೆರೆಮೇಲೆ ಸಿನಿಮಾವನ್ನು ತೋರಿಸುತ್ತಾರೆ. ಇವರ ಸಿನಿಮಾಗಳನ್ನು ನೋಡಿದರೆ, ಎಂಥವರಿಗೆ ಆದರೂ ಸಿನಿಮಾ ಅಂದ್ರೆ ವಾವ್ ಅನ್ನಿಸುತ್ತದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತಗಾರನಾಗಿ, ಎಡಿಟರ್ ಆಗಿ ಹೀಗೆ ಎಲ್ಲಾ ಕೆಲಸದಲ್ಲಿ ಸಹ ರವಿಚಂದ್ರನ್ ಅವರು ಸಕ್ರಿಯವಾಗಿದ್ದಾರೆ. ಹೀಗೆ ಸಿನಿಮಾಗೆ ಸಂಬಂಧಿಸಿರುವ ಎಲ್ಲಾ ವಿಭಾಗದಲ್ಲಿ ಸಹ ತೊಡಗಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಯರನ್ನು ಬಹಳ ಸುಂದರವಾಗಿ ತೆರೆಮೇಲೆ ತೋರಿಸುವ ಕಾರಣಕ್ಕೆ ಎಲ್ಲರಿಗೂ ಹೆಚ್ಚು ಇಷ್ಟ ಆಗ್ತಾರೆ. ಅವರ ಯಾವುದೇ ಸಿನಿಮಾ ಆದರೂ ಹೀರೋಯಿನ್ ಗಳನ್ನು ಬಹಳ ಸ್ಪೆಷಲ್ ಆಗಿ ತೋರಿಸುತ್ತಾರೆ..

ರವಿಚಂದ್ರನ್ ಅವರ ಸಿನಿಮಾ ಆಫರ್ ಬಂದರೆ ನಟಿಯರಿಗೂ ಕೂಡ ಇದೇ ಕಾರಣಕ್ಕೆ ಹಿಂದೆ ಮುಂದೆ ನೋಡದೇ ಡೇಟ್ಸ್ ಕೊಡಬೇಕು ಎಂದು ಅನ್ನಿಸುತ್ತದೆ. ಈ ರೀತಿಯಾಗಿ ರವಿಚಂದ್ರನ್ ಅವರು ಸಾಕಷ್ಟು ಹೊರಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಕನ್ನಡದ ನಟಿಯರನ್ನು ಸಹ ಅದೇ ರೀತಿ ಬಹಳ ಸುಂದರವಾಗಿ ತೋರಿಸಿದ್ದಾರೆ. ಹೀರೋಯಿನ್ ಗಳಿಗೆ ಇವರು ಅಂದ್ರೆ ವಿಶೇಷವಾದ ಪ್ರೀತಿ. ಜೂಹಿ ಛಾವ್ಲಾ ಅವರಾಗಲಿ, ಖುಷ್ಬೂ ಅವರಾಗಲಿ ರವಿಚಂದ್ರನ್ ಅವರ ಬಗ್ಗೆ ಎಷ್ಟು ಹೆಮ್ಮೆಯಿಂದ ಪ್ರೀತಿಯಿಂದ ಮಾತಾಡ್ತಾರೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಖುಷ್ಬೂ ಅವರ ತಾಯಿ ಆರೋಗ್ಯಕ್ಕೆ ಸಮಸ್ಯೆ ಆಗಿ, ದುಡ್ಡು ಇಲ್ಲದೇ ಇದ್ದಾಗ, ಸಹಾಯ ಮಾಡಿದ್ದು ರವಿಚಂದ್ರನ್ ಅವರು ಮತ್ತು ಅವರ ತಂದೆ. ಈ ವಿಚಾರವನ್ನು ಖುಷ್ಬೂ ಅವರೇ ತಿಳಿಸಿದ್ದರು.
ಹೀಗೆ ರವಿಚಂದ್ರನ್ ಅವರು ಅನೇಕ ವಿಚಾರಕ್ಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಇನ್ನು ರವಿಚಂದ್ರನ್ ಅವರು ಅಂದ್ರೆ ಗ್ಲಾಮರ್, ಗ್ಲಾಮರ್ ಅಂದ್ರೆ ರವಿಚಂದ್ರನ್ ಅವರು ಹೇಳಬಹುದು. ಅಷ್ಟು ಗ್ಲಾಮರಸ್ ಆಗಿ ಸುಂದರವಾಗಿ ತೋರಿಸುತ್ತಾರೆ. ಮೀನಾ, ಗೌತಮಿ, ಬಿಂದಿಯಾ, ಶಿಲ್ಪಾ ಶೆಟ್ಟಿ ಹೀಗೆ ಎಲ್ಲರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಶೋ ಮ್ಯಾನ್ ಎಂದೇ ಹೆಸರು ಮಾಡಿರುವವರು. ಇವರ ಸಿನಿಮಾಗಳಲ್ಲಿ ಅದ್ಧೂರಿ ಸೆಟ್ ಗಳು, ಸುಂದರವಾದ ಕಾಸ್ಟ್ಯೂಮ್ ಗಳು, ಗ್ಲಾಮರಸ್ ಆಗಿ ಹೀರೋಯಿನ್ ಗಳನ್ನು ತೋರಿಸುವುದು ಇದೆಲ್ಲವೂ ಅಭಿಮಾನಿಗಳಿಗೆ ಬಹಳ ಇಷ್ಟ. ರವಿಚಂದ್ರನ್ ಅವರು ಎಲ್ಲ ನಟಿಯರ ಫೇವರೆಟ್ ಸಹ ಹೌದು.. ಆದರೆ ಆ ಒಬ್ಬ ನಟಿಯ ಜೊತೆಗೆ ನಟಿಸಬೇಕು ಅನ್ನೋ ಕನಸು ಮಾತ್ರ ನನಸಾಗಲಿಲ್ಲ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ದಕ್ಷಿಣ ಭಾರತದವರೇ ಆದ ಬಾಲಿವುಡ್ ನಟಿ ಶ್ರೀದೇವಿ ಅವರ ಫ್ಯಾನ್. ಶ್ರೀದೇವಿ ಅವರೊಡನೆ ಸಿನಿಮಾ ಮಾಡಬೇಕು ಎಂದು ಅವರ ಕನಸಾಗಿತ್ತು. ಆದರೆ ರವಿಚಂದ್ರನ್ ಅವರ ಕನಸು ನೆರವೇರಲೇ ಇಲ್ಲ. ಹೌದು, ಶ್ರೀದೇವಿ ಅವರೊಡನೆ ಸಿನಿಮಾ ಮಾಡಬೇಕು ಎಂದು ಚೆಲುವೆ ಎಂದು ಒಂದು ಟೈಟಲ್ ಇತ್ತು, ಸಿನಿಮಾ ಶುರು ಮಾಡುವ ತವಕದಲ್ಲಿದ್ದರು. ಶ್ರೀದೇವಿ ಅವರು ಕಥೆ ಕೇಳಿ, ಒಪ್ಪಿಗೆ ಕೊಟ್ಟಿದ್ದರು. ಶ್ರೀದೇವಿ ನಾಯಕಿ ಆಗ್ತಾರೆ ಅಂದ್ರೆ ನಾನು ದುಡ್ಡು ತೆಗೆದುಕೊಳ್ಳುವುದೇ ಇಲ್ಲ. ಫ್ರೀಯಾಗಿ ಸಿನಿಮಾ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರಂತೆ. ರವಿಚಂದ್ರನ್ ಅವರೇ ಸಿನಿಮಾ ನಿರ್ದೇಶನ ಕೂಡ ಮಾಡಬೇಕಿತ್ತಂತೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಮುಂದುವರೆಯಲಿಲ್ಲ ಎಂದು ಇತ್ತೀಚೆಗೆ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಕ್ರೇಜಿಸ್ಟಾರ್ ತಿಳಿಸಿದ್ದರು.
ಇನ್ನು ಶ್ರೀದೇವಿ ಅವರು 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರೊಡನೆ ಮದುವೆಯಾದಾಗ ರವಿಚಂದ್ರನ್ ಅವರಿಗೆ ಹಾರ್ಟ್ ಬ್ರೇಕ್ ಆಗಿತ್ತಂತೆ. ಶ್ರೀದೇವಿ ಅವರ ಫ್ಯಾನ್ಸ್ ಅಂದ್ರೆ ಸುಮ್ನೇನಾ? ಅವರಿಗೆ ಮದುವೆ ಫಿಕ್ಸ್ ಆಗಿದೆ ಎಂದಾಗ, ಅವರ ಎಲ್ಲಾ ಫ್ಯಾನ್ಸ್ ಗೆ ಕೂಡ ಹಾರ್ಟ್ ಬ್ರೇಕ್ ಆಗಿತ್ತು, ಅದೇ ರೀತಿ ರವಿಚಂದ್ರನ್ ಅವರಿಗೆ ಕೂಡ ಶ್ರೀದೇವಿ ಅವರ ಮದುವೆಯಾದಾಗ ಬಹಳ ಬೇಜಾರಾಗಿತ್ತಂತೆ. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಗಲಿಲ್ಲ ಎಂದು ಕೂಡ ರವಿಚಂದ್ರನ್ ಅವರಿಗೆ ಬೇಜಾರಾಗಿತ್ತು, ಈ ಘಟನೆ ಇಂದ ಇನ್ನು ಕೂಡ ಬೇಜಾರು ಆಗಿತ್ತಂತೆ. ರವಿಚಂದ್ರನ್ ಅವರು ಟ್ರೈ ಮಾಡಿಯು ಚಿತ್ರರಂಗಕ್ಕೆ ಕರೆತರಲು ಆಗದ ನಟಿಯರು ಅಂದ್ರೆ ಶ್ರೀದೇವಿ ಅವರು ಮತ್ತು ಐಶ್ವರ್ಯ ರೈ ಅವರು ಇಬ್ಬರೇ ಅನ್ನಿಸುತ್ತದೆ. ಐಶ್ವರ್ಯ ರೈ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಸಹ ಮಾಡಿದ್ದರು ಕ್ರೇಜಿಸ್ಟಾರ್..

ಮಂಗಳೂರು ಮೂಲದ ಐಶ್ವರ್ಯ ರೈ ಅವರು ವಿಶ್ವಸುಂದರಿ ಪಟ್ಟ ಗೆದ್ದು, ಕರ್ನಾಟಕಕ್ಕೆ ಬಂದಾಗ ಮೊದಲು ಅವರಿಗೆ ಗೌರವಾರ್ಪಣೆ ಮಾಡಿದ್ದು ರವಿಚಂದ್ರನ್ ಅವರೇ.. ಹಾಗೆಯೇ ಸಿನಿಮಾದಲ್ಲಿ ನಟಿಸಿ ಎಂದು ಐಶ್ವರ್ಯ ರೈ ಅವರಿಗೆ ಮೊದಲು ಪತ್ರ ಬರೆದಿದ್ದು ಕೂಡ ರವಿಚಂದ್ರನ್ ಅವರೇ ಅಂತೆ. ಆದರೆ ಅದು ಕೂಡ ನೆರವೇರಲೇ ಇಲ್ಲ. ಒಟ್ಟಿನಲ್ಲಿ ಈ ಒಂದು ವಿಷಯದಲ್ಲಿ ಶ್ರೀದೇವಿ ಅವರು ಮದುವೆ ಆಗಿದ್ದಕ್ಕೆ ರವಿಚಂದ್ರನ್ ಅವರಿಗೆ ಬಹಳ ಬೇಸರ ಆಗಿದ್ದಂತೂ ನಿಜ.



