1986ರಲ್ಲಿ ತೆರೆಕಂಡ ಆನಂದ್ ಚಿತ್ರ ಕನ್ನಡದ ಆಲ್ ಟೈಮ್ ಬ್ಲಾಕ್ ಬಸ್ಟರ್ ಗಳ ಸಾಲಿಗೆ ಸೇರುತ್ತದೆ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರು ಅಭಿನಯಿಸಿದ ಮೊದಲ ಸಿನಿಮಾ ಆನಂದ್. ಪಾರ್ವತಮ್ಮ ರಾಜ್ ಕುಮಾರ್ ಅವರು ಮತ್ತು ಡಾ. ರಾಜ್ ಕುಮಾರ್ ಅವರು ತಮ್ಮ ಮಗನನ್ನು ಆನಂದ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯ ಮಾಡಿದರು. ಶಿವ ರಾಜ್ ಕುಮಾರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ನಮ್ಮೆಲ್ಲರ ಪ್ರೀತಿಯ ಶಿವಣ್ಣ. ಈ ಸಿನಿಮಾದ ನಾಯಕಿಯ ವಿಚಾರದಲ್ಲಿ ಇಂದಿಗೂ ಒಂದು ಪ್ರಶ್ನೆ ಶುರುವಾಗಿದ್ದು, ಅದಕ್ಕೀಗ ಉತ್ತರ ಸಿಕ್ಕಿದೆ.
ಆನಂದ್ ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ನಟಿಸಿದ್ದು, ಸುಧಾರಾಣಿ ಅವರು. ಇಂದಿಗೂ ಇವರು ಸ್ಟಾರ್ ಹೀರೋಯಿನ್ ಆಗಿ ಅದೇ ಗೌರವ ಅಭಿಮಾನವನ್ನು ಜನರಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಆನಂದ್ ಸಿನಿಮಾದ ನಾಯಕಿಯ ಪಾತ್ರಕ್ಕೆ ಮೊದಲ ಆಯ್ಕೆ ಇವರಲ್ಲ ಎನ್ನುವ ಒಂದು ಸುದ್ದಿ ಕೇಳಿಬಂದಿತ್ತು. ಯೂಟ್ಯೂಬ್ ಸಂದರ್ಶನದಲ್ಲಿ, ಒಬ್ಬರು ಜರ್ನಲಿಸ್ಟ್ ಆನಂದ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು, ಅಪರ್ಣಾ ಅವರು, ಆದರೆ ಅಪರ್ಣಾ ಅದಾಗಲೇ ಮಸಣದ ಹೂವು ಸಿನಿಮಾದಲ್ಲಿ ನಟಿಸಿದ್ದರು, ಶಿವಣ್ಣ ಅವರೊಡನೆ ಲಾಂಚ್ ಮಾಡುವುದಕ್ಕೆ ಫ್ರೆಶ್ ಫೇಸ್ ಬೇಕಿತ್ತು..

ಈ ಕಾರಣಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಅವರು ಅಪರ್ಣಾ ಅವರು ಬೇಡ ಎಂದಿದ್ದರು ಎಂದು ಹೇಳಿದ್ದರು. ಇತ್ತೀಚೆಗೆ ಚಂದನವನದ ಮತ್ತೊಬ್ಬ ವ್ಯಕ್ತಿ, ಆನಂದ್ ಚಿತ್ರಕ್ಕೆ ಸುಧಾರಾಣಿ ಅವರು ಮೊದಲ ಆಯ್ಕೆ ಆಗಿರಲಿಲ್ಲ, ನಟಿ ಪ್ರೇಮಾ ಅವರ ಅತ್ತೆಯ ಮಗಳು ಮೊದಲ ಆಯ್ಕೆ ಆಗಿದ್ದರು, ಅವರನ್ನು ರೆಡಿ ಮಾಡಿ ಶೂಟಿಂಗ್ ಗೆ ಕರೆದುಕೊಂಡು ಬಂದಿದ್ದವು, ಆದರೆ ಆಕೆಗೆ ಆಕ್ಟಿಂಗ್ ಬರುತ್ತಿರಲಿಲ್ಲ. ಇದರಿಂದ ಪಾರ್ವತಮ್ಮನವರಿಗೆ ತುಂಬಾ ಕೋಪ ಬಂದಿತ್ತು, ಹಾಗಾಗಿ ಆ ನಟಿಯನ್ನು ಬೇಡ ಎಂದು ಕ್ಯಾನ್ಸಲ್ ಮಾಡಲಾಯಿತು.
ನಂತರ ಪಾರ್ವತಮ್ಮ ಅವರು ಸುಧಾರಾಣಿ ಅವರನ್ನ ಹುಡುಕಿ ಕರೆದುಕೊಂಡು ಬಂದರು ಎಂದು ಹೇಳಿದ್ದಾರೆ. ಆದರೆ ಇದ್ಯಾವುದು ಸರಿಯಾದ ಮಾಹಿತಿ ಅಲ್ಲ, ಆನಂದ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು, ಬಳಿಕ ಫೈನಲ್ ಆಗಿದ್ದು ಎಲ್ಲವೂ ಸುಧಾರಾಣಿ ಅವರೇ ಎನ್ನುವ ಕೆಲವು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಾಲ್ ಶೇರ್ ಮಾಡಲಾಗುತ್ತಿದೆ. ಹಳೆಯ ಸಂದರ್ಶನ ಒಂದರಲ್ಲಿ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಪಾರ್ವತಮ್ಮನವರು ಆಯ್ಕೆ ಮಾಡಿದ್ದು ಸುಧಾರಾಣಿ ಅವರನ್ನೇ ಎಂದು ತಿಳಿಸಿದ್ದಾರೆ…
“ಸಾಮಾನ್ಯವಾಗಿ ರಾಜ್ ಕುಮಾರ್ ಅವರು ಪಾರ್ವತಮ್ಮನವರು ಅವರಿಗೆ Shooting ಇಲ್ಲದ ವೇಳೆಯಲ್ಲಿ ಉದಯಶಂಕರ್ ಅವರ ಮನೆಯಲ್ಲಿ ಹೋಗಿ ಕಾಲವನ್ನ ಕಳೆಯುತ್ತಿದ್ರು. ಈಕೆ ಆಗಾಗ ಬಂದು ಬಂದು ಹೋಗ್ತಾ ಇದ್ದಿದ್ರಿಂದ, ಸುಧಾರಾಣಿನ ಪಾರ್ವತಮ್ಮ ತುಂಬಾ ಇಷ್ಟ ಪಡ್ತಾ ಇದ್ರು ನಿಜ. ಆಮೇಲೆ ಅನೇಕ ವರ್ಷಗಳ ನಂತರ, ಅವರು ಶಿವಣ್ಣನ್ನ Screen ಗೆ Introduce ಮಾಡ್ಬೇಕು ಅಂತ ಹೇಳ್ದಾಗ..ಅಕಸ್ಮಾತ್ ಕಣ್ಣಿಗೆ ಬಿದ್ದಿದ್ದು ಸುಧಾರಾಣಿ. ಈಗ ಪಾರ್ವತಮ್ಮನವರಿಗೆ ಯೋಚನೆ ಬಂತು, ಈ ಮಗುನೇ ಯಾಕೆ ನಾನು Heroine ಆಗಿ ಹಾಕಬಾರ್ದು.. ಶಿವಣ್ಣನಿಗೆ ಬಹಳ ಒಪ್ಪುತ್ತಲ್ಲ ಇವರಿಬ್ಬರ ಒಂದು ರೂಪು, ಅದು ಇದು ಎಲ್ಲಾ ಒಪ್ಪುತ್ತಲ್ಲಾ ಅನ್ನೋ ಒಂದು Idea ಬಂದು..
ಸುಧಾರಾಣಿಯನ್ನ ಕೇಳಿದ್ರು ನೀನ್ Act ಮಾಡ್ತೀಯಾಮ್ಮ ಶಿವಣ್ಣನ ಜೊತೆ ಅಂತ.. ನಿಮಗೆ ಗೊತ್ತೇ ಇದೆ ಆನಂದ್ ಬಿಡುಗಡೆ ಆದ್ಮೇಲೆ ಯಾವ ರೀತಿ ಯಶಸ್ಸನ್ನು ಕಾಣ್ತು ಆ ಚಿತ್ರ ಅನ್ನೋದು ಎಲ್ಲರಿಗೂ ಗೊತ್ತು…” ಎಂದು ಹೇಳಿದ್ದಾರೆ ಎಸ್. ಕೆ. ಭಗವಾನ್ ಅವರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.