ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಹೆಸರು ಚಿರಪರಿಚಿತ. ಕನ್ನಡ ಸಿನಿರಂಗದಲ್ಲಿ ಕಿಚ್ಚ ಸುದೀಪ್ ಹವಾನೇ ನೆಕ್ಸ್ಟ್ ಲೆವೆಲ್. ಇವರು ಕೇವಲ ಒಬ್ಬ ನಟನಾಗಿರದೆ ಒಬ್ಬ ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕನೂ ಹೌದು. ಇವರು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ.ಕಿಚ್ಚನ ಸಿನಿಪಯಣ ಒಂದೆಡೆಯಾದರೆ ತನ್ನ ಹಲವು ಸಮಾಜಮುಖಿ ಕಾರ್ಯಗಳಿಂದ ಜನರ ಮನಸ್ಸನ್ನು ಗೆದ್ದವರು. ಇವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್ ಆಗಿದ್ದರೂ ಮನಸ್ಸು ಮಾತ್ರ ತುಂಬಾ ಮೃದು.
ಬಿಗ್ ಬಾಸ್ ಕಾರ್ಯಕ್ರಮ ನಿರೂಪಕನಾಗಿರುವಾಗಲೂ ಇವರು ಹಲವು ಪ್ರೇರಣಾದಾಯಕ ಮಾತುಗಳನ್ನಾಡುತ್ತಿದರು. ನುಡಿದಂತೆ ನಡೆಯಬೇಕು ಎಂಬ ಮಾತಿಗೂ ಉತ್ತಮ ಉದಾರಹರಣೆ ಇವರಾಗಿದ್ದಾರೆ. ಇಂತಹದ್ದೇ ಒಂದು ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ. ಸಾಕ್ಷಿ ಎಂಬ ಪುಟ್ಟ ಹುಡುಗಿ ಕಿಚ್ಚನ ಬಹಳ ದೊಡ್ಡ ಅಭಿಮಾನಿ. ಈಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಸ್ವತಃ ಕಿಚ್ಚನೇ ಆಸ್ಪತ್ರೆಗೆ ಬಂದು ಆಕೆಯ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅಷ್ಟೆ ಅಲ್ಲದೆ ಗಿಫ್ಟ್ ಹಾಗೂ ಆಟೋಗ್ರಾಫ್ ಕೊಟ್ಟು ಸಾಕ್ಷಿಯ ನಗುವಿಗೆ ಕಾರಣರಾಗಿದ್ದಾರೆ.
ಇದರ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ಅವರಿಗೆ ತನ್ನ ನೆಚ್ಚಿನ ನಟನನ್ನು ಭೇಟಿ ಯಾಗಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಅದೇ ರೀತಿಯ ಬಯಕೆ ಈ ಪುಟಾಣಿ ಸಾಕ್ಷಿಯದ್ದಾಗಿತ್ತು. ಆಕೆಯ ಬಯಕೆಯನ್ನರಿತು ಕಿಚ್ಚ ಸರಳತೆಯನ್ನು ಮೆರೆದಿದ್ದಾರೆ. ತಾನೇ ಬೆಂಗಳೂರಿನ ‘ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ’ದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಾಕ್ಷಿಯ ಅರೋಗ್ಯ ವಿಚಾರಿಸಿದ್ದಾರೆ.
ಈ ಮೂಲಕ ಪುಟಾಣಿಯ ಮುಖದಲ್ಲಿನ ನಗುವಿಗೆ ಕಾರಣರಾಗಿದ್ದಾರೆ. “ಸುದೀಪ್ ಸರ್ ಎಂದರೆ ನನಗೆ ಬಹಳ ಇಷ್ಟ. ರನ್ನ ಸಿನಿಮಾದ ತಿತ್ಲಿ ಹಾಡು ನನ್ನ ಫೇವರಿಟ್, ಅವರನ್ನು ಭೇಟಿಯಾಗಿ ಬಹಳ ಸಂತೋಷವಾಗಿದೆ “ಎಂದು ಸಂತಸದ ಮಾತನ್ನಾಡಿದ್ದಾಳೆ ಪುಟಾಣಿ ಸಾಕ್ಷಿ.ಕಿಚ್ಚನ ಈ ದೊಡ್ಡತನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



