ಬಾಲಿವುಡ್ ಕಿಂಗ್ ನಟ ಶಾರುಖ್ ಖಾನ್ ಅಭಿನಯದ ‘ಜವಾನ್’ ಟ್ರೇಲರ್ ಹಾಗೂ ಹಾಡುಗಳಿಂದ ದೇಶದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಸಿದೆ. ಈ ಬಿಗ್ ಬಜೆಟ್ ಸಿನಿಮಾ ಇದೇ ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ಜಗತ್ತಿನಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಜವಾನ್ ರಿಲೀಸ್ಗೂ ಮುನ್ನ ಪ್ರಮೋಷನ್ನಲ್ಲಿ ಬ್ಯುಸಿಯಾಗಿರೋ ನಟ ಶಾರುಖ್ ಖಾನ್ ಇದೀಗ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಶಾರುಖ್ ಖಾನ್ ದೇವರಿಗೆ ಕೈ ಮುಗಿಯುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ನಿನ್ನೆ ಬೆಳಗ್ಗೆಯಷ್ಟೇ ‘ಜವಾನ್’ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ. ನಟ ಶಾರುಖ್ ಖಾನ್, ಅವರ ಪುತ್ರಿ ಸುಹಾನ್ ಖಾನ್, ನಟಿ ನಯನಾ ತಾರಾ ದಂಪತಿ ಇಂದು ತಿರುಮಲಕ್ಕೆ ಭೇಟಿ ಕೊಟ್ಟಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದು ಬಂದ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು. ಜವಾನ್ ಸಿನಿಮಾ ಬಿಡುಗಡೆಗೆ ಎರಡೇ ದಿನ ಬಾಕಿ ಇರುವಂತೆ ಇಡೀ ಚಿತ್ರತಂಡ ತಿರುಪತಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಚೆನ್ನೈನಲ್ಲಿ ‘ಜವಾನ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು. ಅಟ್ಲಿ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪಥಿ ನಯನ್ ತಾರಾ, ದೀಪಿಕಾ ಪಡುಕೋಣೆ ನಟಿಸಿದ್ದು, ಇದೀಗ ಚಿತ್ರದ ನಾಯಕ ಶಾರುಖ್ ಖಾನ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಕೈ ಮುಗಿದು, ಪೂಜೆ ಸಲ್ಲಿಸಿರುವ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.