ಬಾಲಿವುಡ್ ನಟ ಶಾರುಖ್ ಖಾನ್ ಅಂದ್ರೆ ಮನಸೋಲದವರಿಲ್ಲ. ಅದರಲ್ಲೂ ಶಾರುಖ್ ಅಂದ್ರೆ 90’ಸ್ ನ ಹುಡುಗಿಯರ ಅಚ್ಚುಮೆಚ್ಚು. ಇವರ ಸ್ಟೈಲ್, ಆಕ್ಷನ್, ಡಾನ್ಸ್, ಆಕ್ಟಿಂಗ್ ಗೆ ಹೆಚ್ಚಿನವರು ಫಿದಾ ಆಗುತ್ತಾರೆ. ಕೆಲ ವರ್ಷಗಳಿಂದ ಶಾರುಖ್ ಗೆ ಗೆಲುವು ಎನ್ನುವುದು ಕೈಗೆಟುಕದ ಹಣ್ಣಾಗಿತ್ತು. ಆದರೆ 2023 ಪ್ರಾರಂಭವಾಗುತ್ತಿದ್ದಂತೆಯೇ ಇವರ ಲಕ್ ಕಂಪ್ಲೀಟ್ ಚೇಂಜ್ ಆಗಿದೆ ಅಂತಾನೆ ಹೇಳಬಹುದು. ಸ್ವಲ್ಪ ತಿಂಗಳ ಹಿಂದೆಯಷ್ಟೇ ಬಿಡುಗಡೆಯಾದ ಪಠಾಣ್ ಸಿನಿಮಾದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ ಶಾರುಖ್. ಆಕ್ಷನ್ ಸಿನಿಮಾವನ್ನು ಮಾಡಿ ಅಭಿಮಾನಿಗಳನ್ನು ಥಿಯೇಟರ್ ಕಡೆ ಸೆಳೆದುಕೊಂಡಿದ್ದರು.

ಈ ಸಿನಿಮಾದ ನಂತರ ಶಾರುಖ್ ಖಾನ್ ಅವರ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುವ ಹೊರೆ ಅವರ ಮೇಲಿತ್ತು. ಇದನ್ನೆಲ್ಲಾ ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಬಂದಿದ್ದಾರೆ ಶಾರುಖ್. ಹೌದು ಶಾರುಖ್ ಅಭಿನಯದ “ಜವಾನ್ “ಸಿನಿಮಾದ ಟ್ರೈಲರ್ ಜುಲೈ 10 ರಂದು ಬಿಡುಗಡೆಯಾಗಿದೆ. ಈ ಸಿನಿಮಾದ ನಿರ್ಮಾಣವನ್ನು ಗೌರಿ ಖಾನ್ ಮಾಡಿದ್ದಾರೆ. ಜವಾನ್ ಸಿನಿಮಾ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿಂದ ತಯಾರಾದ ಅದ್ಭುತ ಚಿತ್ರವಾಗಿದೆ.
ಶಾರುಖ್ ಅಭಿಮಾನಿಗಳಿಗೆ ಇಂದು ಹಬ್ಬದ ದಿನವೇ ಆಗಿದೆ. ಏಕೆಂದರೆ ಇದರ ಟ್ರೈಲರ್ ಧೂಳೆಬ್ಬಿಸಿದೆ . ಕೆಚ್ಚೆದೆಯ ಹೀರೋ ನ ಡೈಲಾಗ್ ಗಳನ್ನು ಕೇಳಿ ವೀಕ್ಷಕರು ಬೆರಗಾಗಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಚಿತ್ರದ ನಾಯಕಿ ನಯನತಾರ ಇವರಿಬ್ಬರೂ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಟ್ಲೀ ಈ ಸಿನಿಮಾದ ನಿರ್ದೇಶನವನ್ನು ಮಾಡಿದ್ದಾರೆ. ಯೌಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾದ 11ಗಂಟೆಗಳಲ್ಲಿ 21ಮಿಲಿಯನ್ ಜನ ಇದನ್ನು ವೀಕ್ಷಿಸಿದ್ದಾರೆ.
“ಪಠಾಣ್ “ಅನ್ನು ಮೀರಿ ಈ ಸಿನಿಮಾ ಸಾಗುತ್ತದೆ ಎಂಬ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ಇನ್ನೋರ್ವ ಬಾಲಿವುಡ್ ನಟ ಕರಣ್ ಜೋಹರ್ “ಇದೊಂದು ಬ್ಲಾಕ್ ಬಸ್ಟರ್ ಸಿನಿಮಾವಾಗುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ. ಜನ ಸಾಮಾನ್ಯರು ಅಥವಾ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಸೆಪ್ಟೆಂಬರ್ 7ರಂದು ಸಿನಿಮಾ ತೆರೆ ಮೇಲೆ ಬರಲೆಂದೇ ಜನ ಕಾಯುತ್ತಿದ್ದಾರೆ.



