ಬಿಗ್ ಬಾಸ್ ಜೋಡಿ ಎಂದೇ ಕರೆಸಿಕೊಳ್ಳುವ ನಿವೇದಿತಾ ಚಂದನ್ ಇನ್ಸ್ಟಾಗ್ರಾಮ್ ನಲ್ಲಿ ಕ್ಯೂಟೆಸ್ಟ್ ಪೇರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹಲವು ಲವ್ ಸ್ಟೋರಿ ಗಳು ಪ್ರಾರಂಭವಾಗಿದೆ. ಅದರಲ್ಲಿ ಇವರೂ ಕೂಡಾ ಒಬ್ಬರು. ಕಾರ್ಯಕ್ರಮ ದಲ್ಲಿ ಸ್ಟೇಜ್ ನಲ್ಲೇ ಪ್ರೊಪೋಸ್ ಮಾಡಿದ ಚಂದನ್ ಶೆಟ್ಟಿ ಗೆ ನಿವೇದಿತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀಗೆ ಇಬ್ಬರೂ ಸಪ್ತಪದಿ ತುಳಿದು ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಾವು ಇವರನ್ನು ನೋಡಬಹುದು. ಕ್ಯೂಟ್ ಫೋಟೋಸ್ ಗಳನ್ನು ಅಪ್ಲೋಡ್ ಮಾಡುವ ಮೂಲಕ ನಿವೇದಿತಾ ಸಕತ್ ಫೇಮಸ್ ಆಗಿದ್ದಾರೆ. ಕೆಲವು ನೆಗೆಟಿವ್ ಕಮೆಂಟ್ಸ್ ಬಂದರೂ ಅದಕ್ಕೆ ಕೇರ್ ಎನ್ನದೆ ತಮ್ಮಷ್ಟಕ್ಕೆ ತಾವು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇವರು ಯಾವುದೇ ಫೋಟೋಸ್ ಹಾಕಿದ್ರು, ಯಾವುದೇ ಬಟ್ಟೆ ಹಾಕಿದ್ರು ತುಂಬಾನೇ ವೈರಲ್ ಆಗುತ್ತಿದೆ. ಮುದ್ದಾದ ಈ ಬೆಡಗಿಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಸ್ ಗಳ ಸುರಿಮಳೆಯೇ ಸುರಿಯುತ್ತದೆ. ಇತ್ತೀಚೆಗಷ್ಟೇ ಜೋಡಿ ಅಮೇರಿಕಾದ ನಯಾಗರ ಫಾಲ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಇದಕ್ಕೆ ಲಕ್ಷಾಂತರ ಮಂದಿ ಲೈಕ್ಸ್ ಮಾಡಿದ್ದರು. ಕೆಲವರು ಖಾಸಗಿ ವಿಚಾರಗಳನ್ನು ಪೋಸ್ಟ್ ಮಾಡುವ ಅಗತ್ಯವಿದೆಯೇ ಎಂದರೆ ಇನ್ನೂ ಕೆಲ ಫ್ಯಾನ್ಸ್ ತುಂಬಾ ಕ್ಯೂಟ್ ಕಾಣಿಸುತ್ತೀರಿ ಎಂದಿದ್ದಾರೆ. ಕಮೆಂಟ್ಸ್ ಗಳು ಏನೇ ಇದ್ದರೂ ನಿವೇದಿತಾ ಮಾತ್ರ ಸಾಮಾಜಿಕ ಜಾಲತಾಣ ದಲ್ಲಿ ಸಕತ್ ಆಕ್ಟಿವ್ ಆಗಿರುತ್ತಾರೆ.
ಇಷ್ಟೇ ಅಲ್ಲದೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಸ್ಕಿಟ್ ಗಳನ್ನು ಮಡುತ್ತಾ ಮನೆಮಾತಾಗಿದ್ದರು. ಇವರು ಸೋಶಿಯಲ್ ಮೀಡಿಯಾ ದಲ್ಲಿ ಹೆಚ್ಚಾಗಿ ರೀಲ್ ಗಳನ್ನು ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ಕೆಲವೊಮ್ಮೆ ಕಲರ್ಫುಲ್ ಫೋಟೋಸ್ ಗಳನ್ನೂ ಅಪ್ಲೋಡ್ ಮಾಡುತ್ತಾರೆ. ಇವರ ವಿಚಿತ್ರ ಬಟ್ಟೆಯ ರೀಲ್ಸ್ ಗಳಿಗೆ ಕೆಲವೊಮ್ಮೆ ಟ್ರೊಲ್ ಆಗುವುದೂ ಇದೆ. ಇದಕ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಲೊಳ್ಳುವುದೇ ಇಲ್ಲ. ಇದೀಗ ನಟಿ ನಿವೇದಿತಾ ಚಂದನ್ ಶೆಟ್ಟಿ ಜೊತೆ ಅಮೆರಿಕ ಟೂರ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಮೆರಿಕದಲ್ಲಿ ಎಂಜಾಯ್ ಮಾಡಿದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವಿದೇಶ ಪ್ರಯಾಣದ ಮೂಡ್ನಲ್ಲಿ ಇರುವ ನಿವೇದಿತಾ ಕೆಲ ದಿನಗಳ ಹಿಂದೆ ಅಮೆರಿಕದಲ್ಲಿರುವ ಸೇಂಟ್ ಮೇರಿ ಚರ್ಚ್ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು. ನಯಾಗರ ಫಾಲ್ಸ್ ನಲ್ಲಿ ನೀರಿಗೆ ಇಳಿದು ಮಕ್ಕಳಂತೆ ಆಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಗಂಡನ ಜೊತೆ ಫಾಲ್ಸ್ ನಲ್ಲಿ ಡಾನ್ಸ್ ಮಾಡಿದ್ದಾರೆ. ರೈನ್ ಕೋಟ್ ಧರಿಸಿ ನೀರಿನಲ್ಲಿ ಆಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಖುಷಿ ವ್ಯಕ್ತ ಪಡಿಸಿದ್ದರೂ ಇನ್ನೂ ಕೆಲ ಟ್ರೊಲ್ ಪೇಜ್ಸ್ ಎದ್ದುಕೊಂಡಿವೆ. ಫ್ಯಾನ್ಸ್ ಮಾತ್ರ ಸಕ್ಕರೆ ಗೊಂಬೆಗೆ ತುಂಬಾ ಪ್ರೀತಿ ವ್ಯಕ್ತ ಪಡಿಸಿದ್ದಾರೆ. ನೀರಿನಲ್ಲಿ ನೆನೆಯಬೇಡ ಕರಗಿ ಹೋಗ್ತೀಯ ಎಂದೆಲ್ಲಾ ಹೇಳಿದ್ದಾರೆ. ಒಟ್ಟಾರೆಯಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮಷ್ಟಕ್ಕೆ ತಾವು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.