ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡರು. ನಂತರ ಟಿವಿ ಸೀಸನ್ಗೂ ಬಂದರು. ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಆದರೆ, ಸಾನ್ಯಾ ಐಯ್ಯರ್ ಅವರು ಕಳೆದ ವಾರ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಹೋಗಿದ್ದಾರೆ. ಸಾನ್ಯಾ ಅವರನ್ನು ಕಳೆದುಕೊಂಡು ರೂಪೇಶ್ ಶೆಟ್ಟಿ ತುಂಬಾನೇ ಕೊರಗಿದ್ದಾರೆ. ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಲ್ಲಿ ಸಖತ್ ಕ್ಲೋಸ್ ಆಗಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ.

ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ದೂರ ದೂರ ಆಗಿದ್ದಾರೆ. ಮನೆಯಲ್ಲಿ ಇಬ್ಬರು ಒಟ್ಟಿಗೆ ಇದ್ದಷ್ಟು ದಿನ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದರು. ಈಗ ಮನೆಯಿಂದ ಹೊರಬಂದಿರುವ ಸಾನ್ಯ, ದೂರದಿಂದಲೇ ರೂಪೇಶ್ ಆಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಖಾಸಗಿ ಪೇಜ್ನಲ್ಲಿ ಲೈವ್ಗೆ ಬಂದ ವೇಳೆ ಮಂಗಳೂರಿಗೆ ಬರುವ ಬಗ್ಗೆ ಸಾನ್ಯಾಗೆ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ.
ರೂಪೇಶ್ ಶೆಟ್ಟಿ, ಬಿಗ್ ಬಾಸ್ ಗೆದ್ದು ಬರಲಿ. ಅವರು ಖಂಡಿತಾ ಗೆಲ್ಲುತ್ತಾರೆ. ನಾನು ಕೂಡ ಕೊರಗಜ್ಜನ ಸನ್ನಿಧಿಗೆ ಬರಬೇಕು. ರೂಪು, ಹೊರ ಬಂದ ಮೇಲೆ ನಾನು ಮಂಗಳೂರಿಗೆ ರೂಪೇಶ್ ಜೊತೆಗೆ ಬರುತ್ತೇನೆ ಎಂದಿದ್ದಾರೆ ಸಾನ್ಯಾ ಐಯ್ಯರ್. ಹೀಗೊಂದು ಅನುಮಾನ ಅಥವ ಪ್ರಶ್ನೆ ಮಾಡಲು ಕಾರಣ ಸಾನ್ಯಾ ಐಯರ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿನ್ನ ಬೇಗ ನೋಡಲು ಕಾಯುತ್ತಿದ್ದೇನೆ ಬೆಸ್ಟ್ ಫ್ರೆಂಡ್ ಎಂದು ಪೋಸ್ಟ್ ಮಾಡಿರೋದು ಕಾಣಬಹುದು.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇದೀಗ ಒಳ್ಳೆಯ ಸ್ಕ್ರಿಪ್ಟ್ಗಳು ಸಾನ್ಯಗೆ ಅರಸಿ ಬರುತ್ತಿದೆ. ಸೂಕ್ತ ಕಥೆಯೊಂದಿಗೆ ಸಿನಿಮಾ ಮಾಡುವುದಾಗಿ ಸಾನ್ಯ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಸಾನ್ಯಾ ಐಯ್ಯರ್ ಔಟ್ ಆದ ಮೇಲೆ, ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಜೊತೆಗೆ ಅಮ್ಮ ದೀಪಾ ಐಯ್ಯರ್ ಕೂಡ ಇದ್ದಾರೆ. ಅಸ್ಸಾಂನಲ್ಲಿರುವ ಮಾ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೊಂದು ಪ್ರಸಿದ್ಧಿ ದೇವತೆಯಾಗಿದ್ದು, ನೀಲಾಚಲ ಬೆಟ್ಟದ ಹೃದಯಭಾಗದಲ್ಲಿ ನೆಲೆಸಿದೆ.