ತುಂಬಾ ದಿನಗಳಿಂದ ಟೀಮ್ ಇಂಡಿಯಾ ದಲ್ಲಿ ನಂಬರ್ 4 ರಲ್ಲಿ ಯಾರು ಆಡ್ತಾರೆ ಎಂಎಂಬ ಚರ್ಚೆ ಶುರು ಆಗಿದೆ , ಶ್ರೇಯಸ್ ಅಯ್ಯರ್ ಹಾಗು ಕೆ ಎಲ್ ರಾಹುಲ್ ಇನ್ನು ಸಂಪೂರ್ಣ ಫಿಟ್ ಆಗಿಲ್ಲ , ಸಂಜು ಹಾಗು ಸ್ಕೈ ನ ಫಾರ್ಮ್ ಹಾಳಾಗಿದೆ , ಈ ಇಬ್ಬರಿಗೆ ನಿರಂತರ ಏಕದಿನ ಹಾಗು ಟಿ ಟ್ವೆಂಟಿ ನಲ್ಲಿ ಆಡಿಸಲಾಗುತ್ತಿದೆ , ಆದರೆ ಫ್ಲಾಪ್ ಆಗುತ್ತಿದ್ದಾರೆ , ಇಂತಹ ಸಮಯದಲ್ಲಿ ಎಡಗೈ ಬ್ಯಾಟ್ಸ್ ಮ್ಯಾನ್ ತಿಲಕ್ ವರ್ಮಾ ಒಬ್ಬ ಒಂದು ರಿಪ್ಲೇಸ್ ಮೆಂಟ್ ಆಗಿ ಕಾಣಿಸುತ್ತಿದ್ದಾರೆ , ಅವರಿಗೆ ಏಷ್ಯಾ ಕಪ್ ನ ತಂಡದಲ್ಲಿ ಅವಕಾಶ ಸಿಗಬಹುದು.

ಏಕೆಂದರೆ ಟೀಮ್ ನ ಟಾಪ್ ನಾಲ್ಕರಲ್ಲಿ ಎಡಗೈ ಬ್ಯಾಟ್ಸ್ ಮ್ಯಾನ್ ಗಳು ಇಲ್ಲ , ಏಷ್ಯಾ ಕಪ್ ನಲ್ಲಿ ಭಾರತ ಆರು ಪಂದ್ಯಗಳನ್ನು ಆಡಲಿದೆ , ಒಂದು ವೇಳೆ ತಿಲಕ್ ವರ್ಮಾ ಅದ್ಬುತ ಪ್ರದರ್ಶನ ನೀಡಿದರೆ ಅವರಿಗೆ ವಿಶ್ವಕಪ್ ನ ತಂಡದಲ್ಲೂ ಅವಕಾಶ ಸಿಗುತ್ತದೆ , ಈ ಮಾತನ್ನು ಸುಮ್ಮನೆ ಹೇಳುತ್ತಿಲ್ಲ , ಅಂಕಿ ಅಂಶಗಳ ಆಧಾರದ ಮೇಲೆ ಹೇಳಲಾಗುತ್ತಿದೆ ಸಂಜು ಸ್ಯಾಮ್ಸನ್ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಬರಿ 19 ರ ಸರಾಸರಿಯಲ್ಲಿ 79 ರನ್ಸ್ ಗಳಿಸಿದ್ದಾರೆ , ಗರಿಷ್ಟ ಅಂದ್ರೆ 51 ರನ್ಸ್ , ಒಂದು ಫಿಫ್ಟಿ ಕೂಡ ಸೇರಿದೆ .
ಸೂರ್ಯ ಕುಮಾರ್ ಯಾದವ್ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಐದು ಪಂದ್ಯಗಳಲ್ಲಿ ಬರಿ 20 ರ ಸರಾಸರಿಯಲ್ಲಿ 100 ರನ್ಸ್ ಗಳಿಸಿದ್ದಾರೆ , ಗರಿಷ್ಟ ಅಂದ್ರೆ ಬರಿ 35 , ಹಾಗು ಒಂದು ಫಿಫ್ಟಿ ಕೂಡ ಗಳಿಸಿಲ್ಲ , ತಿಲಕ್ ವರ್ಮಾ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ 45 ರ ಸರಾಸರಿಯಲ್ಲಿ 90 ರನ್ಸ್ ಗಳಿಸಿದ್ದಾರೆ , ಗರಿಷ್ಟ ಅಂದ್ರೆ 51 ಹಾಗು ಒಂದು ಫಿಫ್ಟಿ ಕೂಡ ಸೇರಿದೆ , ಜೊತೆಗೆ ವರ್ಮಾ ಗೆ ಇನ್ನ ಮೂರು ಟಿ ಟ್ವೆಂಟಿ ಪಂದ್ಯಗಳು ಆಡಲು ಸಿಗಲಿವೆ , ಅದರಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದರೆ ಖಂಡಿತ ಅವರ ಬಗ್ಗೆ ಬಿಸಿಸಿಐ ಯೋಚಿಸಬೇಕಾಗುತ್ತದೆ.
ಅಟ್ಲಿಸ್ಟ್ ಏಷ್ಯಾ ಕಪ್ ತಂಡದಲ್ಲಿ ಇವರಿಗೆ ಚಾನ್ಸ್ ನೀಡಬೇಕಾಗುತ್ತದೆ , ಶ್ರೇಯಸ್ ಅಯ್ಯರ್ ಅಲ್ಲಿವರೆಗೆ ಫಿಟ್ ಆಗ್ತಾರೋ ಇಲ್ಲವೋ ಇನ್ನು ಕೂಡ ಗೊತ್ತಿಲ್ಲ , ಕೆ ಎಲ್ ರಾಹುಲ್ ಬಗ್ಗೆ ಕೂಡ ಕ್ಲಾರಿಟಿ ಇಲ್ಲ , ಇಂತಹ ಸಮಯದಲ್ಲಿ ಸೂರ್ಯ ಕುಮಾರ್ ಯಾದವ್ ಗಿಂತಲೂ ತಿಲಕ್ ವರ್ಮಾ ಅವರು ಅತ್ಯುತ್ತಮವಾಗಿ ಕಾಣಿಸುತ್ತಿದ್ದಾರೆ , ಸಂಜು ಸ್ಯಾಮ್ಸನ್ ಗು ಕೂಡ ಇನ್ನ ಮೂರು ಪಂದ್ಯಗಳ ಅವಕಾಶ ಇದೆ , ಅವರೇನಾದ್ರೂ ಅತ್ಯುತ್ತಮ ಪ್ರದರ್ಶನ ನೀಡಿದ್ರೆ , ಏಷ್ಯಾ ಕಪ್ ತಂಡದಲ್ಲಿ ಮೊದಲ ಅವಕಾಶ ಸಂಜು ಪಾಲಾಗಲಿದೆ , ನಿಮ್ಮ ಪ್ರಕಾರ ಏಷ್ಯಾ ಕಪ್ ನಲ್ಲಿ ನಂಬರ್ 4 ನಲ್ಲಿ ಯಾರು ಸೆಲೆಕ್ಟ್ ಆಗಬಹುದು ಎಂದು ಕಾಮೆಂಟ್ ಮಾಡಿ.