ಸಂಜಯ್ ದತ್ ಬಾಲಿವುಡ್ ಸೂಪರ್ ಸ್ಟಾರ್. ಇವರ ವೃತ್ತಿಪರ ಜೀವನ ಎಷ್ಟು ಯಶಸ್ವಿಯಾಗಿದೆಯೋ ವೈಯಕ್ತಿಕ ಜೀವನವೂ ಅಷ್ಟೇ ವಿವಾದಾತ್ಮಕವಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಸಂಜಯ್ ದತ್ ಮೂವರನ್ನು ಮದುವೆಯಾಗಿದ್ದಾರೆ. ಆದರೆ ಇದೀಗ ಸಂಜಯ್ ದತ್ ಖ್ಯಾತ ನಟಿಯೊಬ್ಬರೊಂದಿಗೆ ನಾಲ್ಕನೇ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಯಾರಿರಬಹುದು ಈ ನಟಿ ಅಂತೀರಾ?.

ಬಾಲಿವುಡ್ ಶಾದಿ.ಕಾಮ್ ಪ್ರಕಾರ, ಸಂಜಯ್ ದತ್ ಅವರು ಈ ನಟಿಯನ್ನು ತಮ್ಮ ನಾಲ್ಕನೇ ಹೆಂಡತಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದರು. ಅಷ್ಟೇ ಅಲ್ಲ, 1993 ರ ಖಲ್ ನಾಯಕ್ ಸಿನಿಮಾದ ಪ್ರಸಿದ್ಧ ನೃತ್ಯ ‘ಚೋಲಿ ಕೆ ಗೀರ್’ ನಲ್ಲಿ ಮಾಧುರಿ ದೀಕ್ಷಿತ್ ಜಾಗಕ್ಕೆ ಈ ನಟಿಯೂ ಸೂಕ್ತವಾಗುತ್ತಾರೆ ಎಂದು ಹಳೆಯ ಸಂದರ್ಶನವೊಂದರಲ್ಲಿ ಸಂಜಯ್ ದತ್ ಹೇಳಿದ್ದಾರೆ. ಅಂದಹಾಗೆ ಸಂಜಯ್ ದತ್ ಮದುವೆಯಾಗಬೇಕೆಂದುಕೊಂಡ ಆ ನಟಿ ಬೇರಾರೂ ಅಲ್ಲ ದೀಪಿಕಾ ಪಡುಕೋಣೆ. ಹೌದು ದೀಪಿಕಾ ಸೌಂದರ್ಯವನ್ನು ಸಂಜಯ್ ಹೊಗಳಿದ್ದಾರೆ. ಅಷ್ಟೇ ಅಲ್ಲ, ವಯಸ್ಸು ಸ್ವಲ್ಪ ಕಡಿಮೆಯಿದ್ದರೆ ದೀಪಿಕಾಳನ್ನು ನಾಲ್ಕನೇ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಿದ್ದೆ ಎಂದೂ ಹೇಳಿದ್ದಾರೆ. ಆದರೆ ಇದನ್ನೆಲ್ಲಾ ಸಂಜಯ್ ತಮಾಷೆಯಾಗಿ ಹೇಳಿದ್ದಾರೆ.
ಸದ್ಯ ಸಂಜಯ್ ಸಂದರ್ಶನ ಈ ರೆಡ್ಡಿಟ್ ಥ್ರೆಡ್ ನಲ್ಲಿ ವೈರಲ್ ಆಗಿದೆ. ಸಂಜಯ್ ಸಂದರ್ಶನದ ನಂತರ ನೆಟ್ಟಿಗರು ನಟನನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಮೂರು ಬಾರಿ ವಿವಾಹವಾದ ಸಂಜಯ್ ದತ್
ಸಂಜಯ್ ದತ್ ಅವರ ಮೊದಲ ಮದುವೆ ನಟಿ ರಿಚಾ ಶರ್ಮಾ ಅವರೊಂದಿಗೆ ಆಯಿತು. ಆದರೆ ಬ್ರೈನ್ ಟ್ಯೂಮರ್ ನಿಂದಾಗಿ ರಿಚಾ 1996 ರಲ್ಲಿ ನಿಧನರಾದರು. ಇದರ ನಂತರ, ಅವರು 1998 ರಲ್ಲಿ ಗಗನಸಖಿ ರೂಪದರ್ಶಿ ರಿಯಾ ಪಿಳ್ಳೈ ಅವರನ್ನು ವಿವಾಹವಾದರು, ಆದರೆ ಇಬ್ಬರೂ 2008 ರಲ್ಲಿ ವಿಚ್ಛೇದನ ಪಡೆದರು. 2008 ರಲ್ಲಿ, ಸಂಜಯ್ ದತ್ ಮಾನ್ಯತಾ ದತ್ ಅವರನ್ನು ವಿವಾಹವಾದರು. ಈಗ ದಂಪತಿಗೆ ಅವಳಿ ಮಕ್ಕಳು ಇದ್ದಾರೆ.
ಸಂಜಯ್ ದತ್ ಮುಂಬರುವ ಸಿನಿಮಾಗಳು..
ಸಂಜಯ್ ದತ್ ಅವರ ಇತ್ತೀಚಿನ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ ಇವರು ಕೊನೆಯದಾಗಿ ತೆಲುಗು ಚಿತ್ರ ಡಬಲ್ ಸ್ಮಾರ್ಟ್ನಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರಗಳ ಪಟ್ಟಿಯಲ್ಲಿ ಹೌಸ್ಫುಲ್ 5 ಇದೆ. ಈ ಚಿತ್ರ ಜೂನ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕ ನಟರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸಂಜಯ್ ಶೆರಾ ದಿ ಕೌಮ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕೆಡಿ ದಿ ಡೆವಿಲ್ ಎಂಬ ಕನ್ನಡ ಚಿತ್ರವೂ ಸಂಜಯ್ ಬಳಿ ಇದೆ.