ಸಿನಿಮಾ ಜಗತ್ತಿನಲ್ಲಿ ಟ್ರೋಲ್ ಗಳ ರಾಣಿ ಎಂದು ಪ್ರಸಿದ್ದಿ ಪಡೆದಿರುವ ಹೆಸರು ಎಂದರೆ ಅದು “ರಶ್ಮಿಕಾ ಮಂದಣ್ಣ”.ಈಕೆ ಟ್ರೋಲ್ ಗಳನ್ನು ಈ ನಟಿ ಎದುರಿಸುತ್ತಿರುವುದು ಹೊಸದೇನೂ ಅಲ್ಲಾ.ಈ ಮೊದಲು ಈ ಮತಿ ಕೆಲವೊಂದು ವಿಚಾರಗಳಿಂದ ಟ್ರೋಲ್ ಆಗುತ್ತಿದ್ದರು.ಆದರೆ ದಿನ ಕಲೆಯುತ್ತಿದಂತೆ ಈಕೆ ಮಾಡಿದ ಕೆಲ್ಸ ಎಲ್ಲಾವು ಕೂಡ ಟ್ರೋಲ್ ಆಗುತ್ತ ಬರುತ್ತಿದೆ.ಈ ವಿಚಾರದಿಂದ ಈಕೆ ಬಹಳ ಕುಗ್ಗುತ್ತಿದ್ದು ಸಾಕಷ್ಟು ಬಾರಿ ಮನವಿ ಕೊಡ ಮಾಡಿಕೊಂಡಿದ್ದಾರೆ.ಆದರೆ ಈ ಕ್ರಮ ಕಡಿಮೆಯಾಗಲೇ ಇಲ್ಲ ಇದರ ಹೊರೆತು ಹೆಚ್ಚುಗುತ್ತಲೇ ಬಂದಿದೆ.

ಈಕೆ ಬಣ್ಣದ ಲೋಕಕ್ಕೆ ಕಾಲಿಟ್ಟು ಸುಮಾರು 8ವರ್ಷ ಕಳೆದಿದೆ.ಈ ನಟಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ನಮ್ಮ ಸ್ಯಾಂಡಲ್ವುಡ್ ನ ಕಿರಿಕ್ ಪಾರ್ಟಿ ಮುಕಂತರ. ಈ ಸಿನಿಮಾ ಹೊಸಬರ ಸಿನಿಮಾ ಆಗಿದ್ದು.ಆ ಸಿನಿಮಾದಲ್ಲಿ ಸಾನ್ವಿ ಎಂಬ ಪ್ರಮುಕ್ಯತೆ ಉಳ್ಳಾ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರು.ಈಕೆ ಸಿನಿಮಾದಲ್ಲಿ ಇದ್ದ ಪೂರ್ತಿ ಸಮಯ ಬಹಳ ಮನೋರಂಜನೆಯನ್ನು ನೀಡಿದ್ದಲ್ಲದೆ ತಮ್ಮ ಮುಗ್ದ ಮಾತು ಹಾಗೂ ಪಡ್ಡೆ ಹುಡುಗರ ನಿದ್ದೆ ಕೆಡಿಸಿವಷ್ಟು ಸೌದರ್ಯದಿಂದ ರಾತ್ರಿ ಕಳೆದು ಬೆಳಗುವಶ್ಟರಲ್ಲಿ ನ್ಯಾಶಿನಲ್ ಕ್ರಶ್ ಎಂಬ ಬಿರುದು ಕೂಡ ಪಡೆದುಕೊಂಡರು.
ಹೀಗೆ ಒಳ್ಳೆಯ ಸ್ಟಾರ್ಟ್ ಮುಕಾಂತರ ಶುರು ಪಡೆದುಕೊಂಡ ನಟಿ ತಮ್ಮ ದೀರ್ಘಕಾಲದ ಸ್ನೇಹಿತನಾಗಿದ್ದ ಹಾಗೂ ಸಹ ಕಲವಿದನಾಗಿದ್ದ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡರು.ಅಷ್ಟರಲ್ಲಿ ಇವರು ಪರ ಭಾಷೆಯಲ್ಲೂ ಕೂಡ ನಟಿಯಾಗಿ ತೊಡಗಿಸಿಕೊಂಡಿದ್ದರು.ಅದೇ ಸಮಯದಲ್ಲಿ ರಶ್ಮಿಕಾ ಹಾಗೂ ವಿಜಯ್ ಅವರ ನಟನೆಯ ಗೀತಾ ಗೋವಿಂದಮ್ ಸಿನಿಮಾ ಸೆಟ್ಟೇರಿತ್ತು.ಈ ಸಿನಿಮಾ ಶುರುವಿನಲ್ಲಿ ಹಾಡುಗಳ ಮೂಲಕ ಬಹಳ ಸದ್ದು ಮಾಡಿತ್ತು.
ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ರಶ್ಮಿಕಾ ಅವರ ಹಣೆ ಬರಹ ಸಂಪೂರ್ಣ ಬದಲಾಗಿತ್ತು. ಇನ್ನು ಈ ಸಿಜಿಮಾದಲ್ಲಿ ರಶ್ಮಿಕಾ ಹಾಗೂ ವಿಜಯ್ ಅವರ ಕೆಮಿಸ್ಟ್ರಿ ಬಹಳ ವರ್ಕೌಟ್ ಆಗಿದ್ದು ಅದ್ರಲ್ಲೂ ಈ ಸಿನಿಮಾದಲ್ಲಿ ಸಾಕಷ್ಟು ಬಾರಿ ಲಿಪ್ ಲಾಕ್ ಸಿನ್ ಬಹಳ ಸದ್ದು ಮಾಡಿತ್ತು.ಆ ಕಾರಣಗಳಿಂದ ಈಕೆಯ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಅದರೊಟ್ಟಿಗೆ ಬೇಸರದ ಸಂಗತಿ ಎಂದರೆ ಕೆಲ ಮನಸ್ತಾಪ ಗಳ ಕಾರಣಗಳಿಂದ ರಕ್ಷಿತ್ ಒಟ್ಟಿಗೆಯ ನಿಶ್ಚಿತಾರ್ಥ ಕೂಡ ಮುರಿದು ಬಿಡುತ್ತದೆ.ಆ ನಂತರ ಈ ನಟಿ ಸಾಕಷ್ಟು ಅವಮಾನ ಹಾಗೂ ಟ್ರೋಲ್ ಗಳನ್ನು ಇಂದಿಗೂ ಅನುಭೂಅವಿಸುತ್ತಾ ಬಂದಿದ್ದಾರೆ.
ಈಗ ಎಲ್ಲದರಿಂದ ಬೇಸತ್ತು ರಶ್ಮಿಕಾ ಟ್ರೋಲರ್ಸ್ ವಿರುದ್ಧ ಖಡಕ್ ಆದ ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್ ಗೆ ದುಲ್ಕರ್ ಸಲ್ಮಾನ್ ಹಾಗೂ ರಮ್ಯಾ ಅವರು ಕೂಡ ಸಾತ್ ನೀಡಿದ್ದಾರೆ.ಇನ್ನು ಆ ಪೋಸ್ಟ್ ನಲ್ಲಿ ಬಹಳ ವರ್ಷಗಳಿಂದ ನಾನು ಟ್ರೋಲ್ ಮುಕಾಂತರ ಸಾಕಷ್ಟು ಅವಮಾನಗಳನ್ನು ಅನುಭವಿಸಿಕೊಂಡು ಬಂದಿದ್ದೇನೆ.ನಿಮನ್ನು ರಂಜಿಸಲು ಸತತ ಪ್ರಯತ್ನ ದಲ್ಲಿ ಇದ್ದೇನೆ ಆದರೆ ನನ್ನ ಎಲ್ಲಾ ಎನರ್ಜಿ ಹಾಗೂ ಉತ್ಸಹ ನಿಮ್ಮ ನಿಗಟಿವ್ ಮಾತುಗಳಿಂದ ದಿನ ದಿಂದ ದಿನಕ್ಕೆ ನನನ್ನು ಕುಗ್ಗಿಸುತ್ತಿದೆ ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.