ನಿನ್ನೆ ಹೈದರಾಬಾದ್ ನಲ್ಲಿ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಅವರ ಮದುವೆ ಅದ್ಧೂರಿಯಾಗಿ ನೆರವೇದಿದೆ. ಇವರಿಬ್ಬರ ಮದುವೆಗೆ ಕುಟುಂಬದವರು ಮತ್ತು ಸ್ನೇಹಿತರು ಬಂದು, ವಿಶ್ ಮಾಡಿ ಹಾರೈಸಿದ್ದಾರೆ. ಇವರಿಬ್ಬರು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇತ್ತೀಚೆಗೆ ಇವರ ಎಂಗೇಜ್ಮೆಂಟ್ ನಡೆದಿತ್ತು. ಇದೀಗ ಇವರಿಬ್ಬರ ಮದುವೆ ಸಹ ನಡೆದಿದ್ದು, ಈ ಜೋಡಿಗೆ ಸಮಂತಾ ವಿಶ್ ಮಾಡಿದ್ದಾರೆ. ಶೋಭಿತಾ ಧೂಳಿಪಾಲ ಅವರ ಫೋಟೋ ಶೇರ್ ಮಾಡಿ, ಸಮಂತಾ ಅವರು ವಿಶ್ ಮಾಡಿದ್ದು, ಆ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಿದ್ದಲ್ಲಿ ಈ ಪೋಸ್ಟ್ ಬಗ್ಗೆ ತಿಳಿಯೋಣ ಬನ್ನಿ..

ಹೌದು, ಶೋಭಿತಾ ಅವರಿಗೆ ಸಮಂತಾ ಅವರು ವಿಶ್ ಮಾಡಿರುವುದು ನಿಜ, ವಿಶ್ ಮಾಡಿರೋದು ಸಮಂತಾ ಅವರೇ. ಆದರೆ ಇದು ನಾಗಚೈತನ್ಯ ಅವರ ಮಾಜಿ ಪತ್ನಿ, ಖ್ಯಾತ ನಟಿ ಸಮಂತಾ ಅವರಲ್ಲ. ಶೋಭಿತಾ ಧೂಳಿಪಾಲ ಅವರ ತಂಗಿ ಸಮಂತಾ. ಹೌದು, ಶೋಭಿತಾ ಅವರಿಗೆ ಒಬ್ಬ ತಂಗಿ ಇದ್ದು, ಅವರ ಹೆಸರು ಕೂಡ ಸಮಂತಾ. ಅಕ್ಕ ಶೋಭಿತಾ ಅವರ ಫೋಟೋ ಒಂದನ್ನು ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರೀತಿಯಿಂದ ಕೆಲವು ಸಾಲುಗಳನ್ನು ಬರೆದು, ಶೋಭಿತಾ ಅವರಿಗೆ ವಿಶ್ ಮಾಡಿದ್ದಾರೆ, ತಂಗಿ ಬರೆದಿರುವ ಈ ಸಾಲುಗಳು ಬಹಳ ಮುದ್ದಾಗಿಯು ಇದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!

ಶೋಭಿತಾ ಅವರು ಮಧುಮಗಳಾಗಿ ರೆಡಿ ಆಗಿರುವ ಫೋಟೋ ವನ್ನು ಸಮಂತಾ ಅವರು ಪೋಸ್ಟ್ ಮಾಡಿದ್ದು, ಅದಕ್ಕೆ ಕ್ಯಾಪ್ಶನ್ ನಲ್ಲಿ.. “ಅಕ್ಕ ನೀನು ತುಂಬಾ ಸುಂದರವಾಗಿ ಕಾಣುತ್ತಿದ್ದಿಯಾ.. ನಾನು ನೋಡಿರುವ ಅತ್ಯಂತ ಸುಂದರವಾದ ವಧು ನೀನು.. ನನ್ನ ಬದುಕಿನಲ್ಲಿ ನಾನು ಪ್ರೀತಿಸುವ ಅತಿಹೆಚ್ಚಿನ ಸ್ಪೆಷಲ್ ವ್ಯಕ್ತಿಗೆ ಚಿಯರ್ಸ್.. ನನ್ನ ಪ್ರೀತಿಯ ಅಕ್ಕ.. #SoChay..” ಎಂದು ಬರೆದಿದ್ದಾರೆ ಸಮಂತಾ. ಈ ಸಾಲುಗಳ ಜೊತೆಗೆ SoChay ಎನ್ನುವ ಹ್ಯಾಶ್ ಟ್ಯಾಗ್ ಸಹ ಬರೆದಿದ್ದಾರೆ. ಇದೀಗ ಈ ಪೋಸ್ಟ್ ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಸಮಂತಾ ಅನ್ನೋ ಹೆಸರು ನಾಗಚೈತನ್ಯ ಅವರನ್ನು ಬಿಟ್ಟು ಹೋಗುವುದಿಲ್ಲವೇನೋ ಎನ್ನುತ್ತಿದ್ದಾರೆ.
ನಾಗಚೈತನ್ಯ ಮತ್ತು ಶೋಭಿತಾ ಅವರ ಮದುವೆ ಆಗಿರುವುದು ನೆಟ್ಟಿಗರಿಗೆ ಒಂದು ರೀತಿ ಬೇಸರ ಆಗಿದ್ದರೆ, ಇನ್ನೊಂದು ರೀತಿ ಖುಷಿಯು ಆಗಿದೆ. ಕೆಲವರು ನಾಗಚೈತನ್ಯ ಅವರು ಸಮಂತಾ ಅವರಂಥ ವಜ್ರವನ್ನು ಕಳೆದುಕೊಂಡರು, ಸಮಂತಾ ಅವರು ತುಂಬಾ ಒಳ್ಳೆಯ ಮನಸ್ಸಿನ ಹುಡುಗಿ, ಅಂಥವರನ್ನು ಕಳೆದುಕೊಂಡಿದ್ದು, ಜೀವನದ ಅತ್ಯಂತ ದೊಡ್ಡ ನಷ್ಟ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಎರಡನೇ ಮದುವೆಯ ಜೀವನ ಆದರೂ ಚೆನ್ನಾಗಿರಲಿ, ಶೋಭಿತಾ ಅವರಿಗೆ ನಾಗಚೈತನ್ಯ ಮೋಸ ಮಾಡದೇ ಇರಲಿ ಎಂದು ಕೂಡ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಹೊಸ ಜೋಡಿಯ ಕುಟುಂಬದಲ್ಲಿ ಸಂಭ್ರಮವಂತು ಮನೆ ಮಾಡಿದೆ..
ಇನ್ನು ಮದುವೆ ಶಾಸ್ತ್ರಗಳು ಎಲ್ಲವು ನಿನ್ನೆ ಚೆನ್ನಾಗಿ ನಡೆದಿದ್ದು, ಮದುವೆಯ ಕೆಲವು ಫೋಟೋಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಮದುವೆ ನಡೆದ ಬಳಿಕ ಮಾಧ್ಯಮದವರ ಜೊತೆಗೆ ನಾಗಚೈತನ್ಯ ಅವರು ಮಾತನಾಡಿದ್ದು, ಶೋಭಿತಾ ಅವರ ಮನೆಯವರು ನನ್ನನ್ನು ಅವರ ಮನೆಯ ಮಗನ ಹಾಗೆ ನೋಡಿಕೊಳ್ಳುತ್ತಾರೆ, ಇತ್ತೀಚೆಗೆ ಕೆಲವು ಹಬ್ಬಗಳನ್ನು ಕೂಡ ನಾವು ಜೊತೆಯಾಗಿ ಆಚರಿಸಿದ್ದೇವೆ, ಮುಂದಿನ ದಿನಗಳಲ್ಲಿ ನಮ್ಮ ಬಾಂಧವ್ಯ ಇನ್ನು ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದ್ದು, ಹೊಸ ಜೋಡಿಗೆ ನೀವು ಕೂಡ ವಿಶ್ ಮಾಡಿ..