ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾರೆ, ಇವರ ಸಿಟಾಡೆಲ್ ವೆಬ್ ಸೀರೀಸ್ ಸೂಪರ್ ಹಿಟ್ ಆಗಿ, ಸಮಂತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದೆಲ್ಲ ಒಂದು ಕಡೆಯಾದರೆ, ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗುವ ಚರ್ಚೆಗಳು ಮತ್ತೊಂದು ಕಡೆ. ಸಮಂತಾ ಅವರು ವಿಚ್ಛೇದನ ಪಡೆದು 3 ವರ್ಷದ ಮೇಲಾಗಿದೆ. ಅವರ ಮಾಜಿ ಪತಿ ನಾಗಚೈತನ್ಯ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇವರಿಬ್ಬರ ಬಗ್ಗೆ ಈಗಲು ಚರ್ಚೆಗಳು ನಡೆಯುತ್ತದೆ. ಇದಕ್ಕೆ ಕೊನೆಯೇ ಇಲ್ಲ, ಸಮಂತಾ ಫ್ಯಾನ್ಸ್ ಎಲ್ಲರೂ ಅವರ ಪರವಾಗಿ ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಪ್ರೀತಿಸಿ ಮದುವೆಯಾದರು. ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ, ಹೆಚ್ಚು ಸಮಯ ಜೊತೆಯಾಗಿ ಇರಲಿಲ್ಲ. ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಇಬ್ಬರು ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಲು ಕಾರಣ ಏನು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಇದಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯ ಸಮಂತಾ ಅವರ ಜೊತೆಗೆ ಇದ್ದಾಗಲೇ ಶೋಭಿತಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು, ಅದೇ ಕಾರಣಕ್ಕೆ ಇಬ್ಬರು ದೂರ ಆಗಿರೋದು ಎನ್ನಲಾಗುತ್ತಿದೆ. ಆದರೆ ಅಸಲಿ ವಿಷಯ ಏನು ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಇಬ್ಬರು ಬೇರೆ ಆಗಿದ್ದು ಆಯಿತು..
ಶೋಭಿತಾ ಅವರ ಜೊತೆಗೆ ನಾಗಚೈತನ್ಯ ಮದುವೆ ಆಗಿದ್ದು ಆಯಿತು. ಅವರಿಬ್ಬರು ಈಗ ಚೆನ್ನಾಗಿಯೇ ಇದ್ದಾರೆ. ಆದರೆ ಸಮಂತಾ ಅವರು ನೋವಿನಲ್ಲೇ ಇದ್ದಾರೆ. ಸಮಂತಾ ಅವರು ತಂದೆಯನ್ನು ಕಳೆದುಕೊಂಡರು, ಅವರ ಆರೋಗ್ಯದಲ್ಲಿ ಕೂಡ ಕೆಲ ಸಮಸ್ಯೆ ಇದೆ. ಏನೇ ಆದರು ಅವರವರ ಜೀವನವನ್ನು ಅವರವರೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಚೈತನ್ಯ ಏನೋ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಅವರನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಫೋಟೋಶೂಟ್ ಕೂಡ ಮಾಡಿಸಿದರು.ಆದರೆ ಸಮಂತಾ ಅವರು ಇನ್ನೂ ಅದೇ ನೋವಿನಲ್ಲಿ ಇದ್ದಾರೆ, ಸಮಂತಾ ಅವರು ಇನ್ನು ಅದರಿಂದ ಹೊರಬಂದಿಲ್ಲ ಎನ್ನುವ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು.

ಆದರೆ ಇದೀಗ ಸಮಂತಾ ಅವರ ಬಗ್ಗೆ ಬೇರೆಯದೇ ವಿಚಾರ ಕೇಳಿಬರುತ್ತದೆ. ಅದೇನು ಎಂದರೆ, ಸಮಂತಾ ಅವರು ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದಾಗ ಅವರ ಮೇಲಿನ ಪ್ರೀತಿಯಿಂದ ಟ್ಯಾಟೂ ಹಾಕಿಸಿಕೊಂಡಿದ್ದರು. ಒಂದು ಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ಒಂದೇ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು, ಜೊತೆಗೆ ಚೈತನ್ಯ ಅವರ ಸಹಿಯನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಂಡಿದ್ದರು ಸಮಂತಾ. ಜೊತೆಗೆ ಸಮಂತಾ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ, ಈ ಸಿನಿಮಾ ಸಮಂತಾ ಅವರಿಗೆ ತುಂಬಾ ಸ್ಪೆಷಲ್ ಆಗಿತ್ತು, ಹಾಗಾಗಿ YMC ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಟ್ಯಾಟೂ ಸಮಂತಾ ಅವರ ಕತ್ತಿನ ಹಿಂಭಾಗದಲ್ಲಿ ಇತ್ತು. ವಿಚ್ಛೇದನ ಪಡೆದ ಮೇಲೆ ಕೂಡ ಸಮಂತಾ ಅವರು ಇದುವರೆಗೂ ಈ ಟ್ಯಾಟೂ ಅನ್ನು ಉಳಿಸಿಕೊಂಡಿದ್ದರು..
ಆದರೆ ಈಗ ಸಮಂತಾ ಅವರು ಟ್ಯಾಟೂ ತೆಗೆಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಸಮಂತಾ ಅವರು ಶೇರ್ ಮಾಡಿರುವ ಫೋಟೋದಲ್ಲಿ ಆ ಟ್ಯಾಟೂ ಕಾಣಿಸುತ್ತಿಲ್ಲ, ಹಾಗಾಗಿ ಸಮಂತಾ ಅವರು ಟ್ಯಾಟೂವನ್ನು ತೆಗೆಸಿದ್ದಾರೆ ಎಂದು ಗೊತ್ತಾಗಿದೆ. ಕೆಲವರು ಇದನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ.. ಸಮಂತಾ ಒಳ್ಳೆಯ ಕೆಲಸ ಮಾಡಿದ್ದಾರೆ, ಕೊನೆಗೂ ಹಳೆಯ ನೆನಪುಗಳಿಂದ ಮೂವ್ ಆನ್ ಆಗುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು, ಬೇರೆಯದೇ ರೀತಿ ಹೇಳುತ್ತಿದ್ದು, ಸಮಂತಾ ಹೀಗೆಲ್ಲಾ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ಕೂಡ ಇದೆ. ಒಟ್ಟಿನಲ್ಲಿ ಸಮಂತಾ ಅವರು ಟ್ಯಾಟೂ ತೆಗೆಸಿರುವ ವಿಚಾರ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಮಂತಾ ಜೀವನದಲ್ಲಿ ಇದು ಬಹಳ ಒಳ್ಳೆಯ ಬದಲಾವಣೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಸಮಂತಾ ಅವರು ತುಂಬಾ ಒಳ್ಳೆಯ ಹುಡುಗಿ, ಬಹಳ ಕಷ್ಟಪಟ್ಟು ಬೆಳೆದು ಬಂದಿರುವ ಹುಡುಗಿ. ಸಾಮಾನ್ಯ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ಕನಸು ಕಟ್ಟಿಕೊಂಡು, ಮನೆಯಲ್ಲಿ ವಿದೇಶಕ್ಕೆ ಕಳಿಸುವಷ್ಟು ದುಡ್ಡು ಇಲ್ಲದ ಕಾರಣ, ಆ ಆಸೆ ಕೈಬಿಟ್ಟು, ಓದುತ್ತಿದ್ದ ವೇಳೆ ಪಾಕೆಟ್ ಮನಿ ಗೋಸ್ಕರ ಸಣ್ಣ ಪುಟ್ಟ ಜಾಹೀರಾತುಗಳನ್ನು ಮಾಡುತ್ತಾ, ಸೀರೆ ಆಡ್ ಗಳನ್ನು ಮಾಡುತ್ತಾ, ಸಿನಿಮಾಗೆ ಎಂಟ್ರಿ ಕೊಟ್ಟರು. ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ಎಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಇವರ ಜೀವನದಲ್ಲಿ ನಡೆದಿರುವ ಘಟನೆಗಳು, ಇವರು ಎಲ್ಲವನ್ನು ಎದುರಿಸಿ, ಇಂದು ಈ ರೀತಿ ಸ್ಟ್ರಾಂಗ್ ಆಗಿ ನಿಂತಿರುವ ರೀತಿ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇಂಥ ಸಮಂತಾ ಅವರಿಗೆ ಮದುವೆ ವಿಷಯದಲ್ಲಿ ತುಂಬಾ ನೋವಾದ ಕಾರಣ ಅದರಿಂದ ಹೊರಗಡೆ ಬಂದರು.
ಇನ್ನು ಸಮಂತಾ ಅವರ ಜೀವನದಲ್ಲಿ ಈಗ ಹೊಸ ವ್ಯಕ್ತಿಯ ಆಗಮನ ಸಹ ಆಗಿದೆ. ಫ್ಯಾಮಿಲಿ ಮ್ಯಾನ್ 2 ಮತ್ತು ಸಿಟಾಡೆಲ್ ಹನಿ ಬನಿ ವೆಬ್ ಸೀರೀಸ್ ಗಳನ್ನು ನಿರ್ದೇಶನ ಮಾಡಿರುವ ರಾಜ್ ನಿಡಿಮೋರು ಅವರೊಡನೆ ಸಮಂತಾ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಗಳು ಕೇಳಿ ಬಂದಿದೆ. ಇದರ ಬಗ್ಗೆ ಸಮಂತಾ ಅವರು ಅಧಿಕೃತವಾಗಿ ಏನನ್ನು ಹೇಳಿಲ್ಲ, ಆದರೆ ರಾಜ್ ಅವರ ಜೊತೆಗೆ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದೆಲ್ಲವೂ ವೈರಲ್ ಆಗಿದ್ದು, ಈ ಸುದ್ದಿ ನಿಜವೇ ಇರಬಹುದು ಎನ್ನಲಾಗಿದೆ.



