ನಟ ಗಣೇಶ್ ಅವರು ಸುಮಾರು 2 ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸ್ಟಾರ್ ಹೀರೋ. ಇವರು ಕೆರಿಯರ್ ಶುರು ಮಾಡಿದ್ದು, ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ, ಕಾಮಿಡಿ ಟೈಮ್ ಶೋ ಗಣೇಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತು. ನಂತರ ಗಣೇಶ್ ಅವರು ಒಂದೊಂದೇ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಇಂದು ದೊಡ್ಡ ಸ್ಟಾರ್ ಆಗಿ ನಿಂತಿದ್ದಾರೆ. ಗಣೇಶ್ ಅವರು ಕನ್ನಡಕ್ಕಾಗಿಯೇ ಹೆಚ್ಚು ಸಿನಿಮಾಗಳನ್ನು ಮಾಡಿದವರು, ಅವರು ಪ್ಯಾನ್ ಇಂಡಿಯಾ ಸಿನಿಮಾವನ್ನು ಇನ್ನು ಮಾಡಿಲ್ಲ. ಆದರೆ ವಿಭಿನ್ನ ಪಾತ್ರಗಳ ಮೂಲಕ ಒಳ್ಳೆಯ ಪ್ರಯತ್ನ ಅಂತೂ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಈಗ ಪಿನಾಕ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ..ಈ ಸಿನಿಮಾ ಫಸ್ಟ್ ಲುಕ್ ಇಂದಲೇ ಕುತೂಹಲ ಸೃಷ್ಟಿಸಿತ್ತು.

ಪಿನಾಕ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿ ಸಿಕ್ಕಿಲ್ಲ. ಆದರೆ ಗಣೇಶ್ ಅವರು ಸಿನಿಮಾ ಕುರಿತ ಹಾಗೆ ಪ್ರೆಸ್ ಮೀಟ್ ಒಂದನ್ನು ಮಾಡಿದರು. ಈ ಪ್ರೆಸ್ ಮೀಟ್ ನಲ್ಲಿ ಗಣೇಶ್ ಅವರ ಜೊತೆಗೆ ರಂಗಾಯಣ ರಘು ಅವರು ಸೇರಿದಂತೆ ಸಾಕಷ್ಟು ಕಲಾವಿದರು ಸಹ ಪಾಲ್ಗೊಂಡಿದ್ದರು. ಈ ವೇಳೆ ಗಣೇಶ್ ಅವರಿಗೆ ಇತ್ತೀಚೆಗೆ ನಡೆದ ಬೆಳವಣಿಗೆ ಬಗ್ಗೆ ಮಾಧ್ಯಮದವರು ಗಣೇಶ್ ಅವರೊಡನೆ ಪ್ರಶ್ನೆ ಕೇಳಿದ್ದಾರೆ. ಅದು ತೆಲುಗು ಹಾಗೂ ಹಿಂದಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಣ್ಣಾವ್ರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ, ಇದಕ್ಕೆ ಗಣೇಶ್ ಅವರು ಒಳ್ಳೆಯ ಉತ್ತರ ಕೊಟ್ಟಿದ್ದು, ಆರ್ಜಿವಿ ಅವರಿಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಹೊಸ ವಿವಾದ ಏನು? ಆರ್ಜಿವಿ ಅಣ್ಣಾವ್ರ ಬಗ್ಗೆ ಹೇಳಿದ್ದಾದರು ಏನು ಎಂದು ನೋಡುವುದಾದರೆ..
ಡಾ. ರಾಜ್ ಕುಮಾರ್ ಅವರು ಕನ್ನಡ ಕಂಡ ಅಪ್ರತಿಮ ಕಲಾವಿದ. ಅವರ ಬಗ್ಗೆ ಹಲವು ವಿಶೇಷತೆಗಳು, ವೈಶಿಷ್ಟ್ಯತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಅಣ್ಣಾವ್ರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲ ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಎಲ್ಲಾ ಥರದ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು. ಸಾಮಾಜಿಕ ಪಾತ್ರಗಳು, ಐತಿಹಾಸಿಕ ಪಾತ್ರಗಳು, ಪೌರಾಣಿಕ ಪಾತ್ರಗಳು ಎಲ್ಲದರಲ್ಲೂ ನಟಿಸಿ, ಸೈ ಎನ್ನಿಸಿಕೊಂಡಿರುವವರು. ಆಡು ಮುಟ್ಟದ ಸೊಪ್ಪಿಲ್ಲ ರಾಜಣ್ಣ ಮಾಡದ ಪಾತ್ರವೇ ಇಲ್ಲ ಎಂದು ಹಲವರು ಹೇಳಿದ್ದಾರೆ. ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಷ್ಟು ಸಮಯ, ಇಲ್ಲಿನ ಸಿನಿಮಾಗಳು ಬಹಳ ಚೆನ್ನಾಗಿದ್ದವು. ಈಗ ಕನ್ನಡ ಚಿತ್ರರಂಗ ಯಜಮಾನ ಇಲ್ಲದ ಮನೆಯಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದೆಲ್ಲವೂ ಒಂದು ಕಡೆಯಾದರೆ, ಅಣ್ಣಾವ್ರ ಸಿನಿಮಾಗಳ ಗತ್ತು ಮತ್ತೊಂದು ಕಡೆ…

ಡಾ. ರಾಜ್ ಕುಮಾರ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನವಾಗಿ ಇರುತ್ತಿದ್ದವು. ಹಲವು ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂಥ ಸಿನಿಮಾ ಆಗಿರುತ್ತಿತ್ತು. ಅಣ್ಣಾವ್ರ ಸಿನಿಮಾಗಳು ಬಹಳಷ್ಟು ಭಾಷೆಗಳಿಗೆ ಡಬ್ ಆಗಿವೆ. ಅಲ್ಲಿನ ಕಲಾವಿದರು ನಾವು ಡಾ. ರಾಜ್ ಕುಮಾರ್ ಅವರ ಹಾಗೆ ಅಭಿನಯಿಸೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಿದೆ. ಅಂಥ ಶ್ರೇಷ್ಠ ಅಭಿನಯ ಇವರದ್ದು. ಡಾ. ರಾಜ್ ಕುಮಾರ್ ಅವರನ್ನು ಸೀನಿಯರ್ ಎನ್.ಟಿ.ಆರ್, ಎ.ಎನ್.ಆರ್, ಶಿವಾಜಿ ಗಣೇಶನ್, ಎಂ.ಜಿ.ಆರ್ ಎಲ್ಲರೂ ಹೊಗಳುತ್ತಿದ್ದರು. ಇಂಥ ಕಲಾವಿದರ ಬಗ್ಗೆ ಇದೀಗ ನಿರ್ದೇಶಕ ಆರ್ಜಿವಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ, ಸಂದರ್ಶನ ಒಂದರಲ್ಲಿ ಏನನ್ನೋ ಮಾತನಾಡಿದ್ದಾರೆ ಆರ್ಜಿವಿ. ಇದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು.
ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು 70 ಮತ್ತು 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ, ಹಿಟ್ ಗಳಿಸುತ್ತಿದ್ದರು. ಚಿರಂಜೀವಿ, ರಜನಿಕಾಂತ್, ರಾಜ್ ಕುಮಾರ್ ಎಲ್ಲರೂ ಇದೇ ರೀತಿ ಮಾಡುತ್ತಾ ಇದ್ದಿದ್ದು. 90ರ ದಶಕದಲ್ಲಿ ನಂತರ ಬದಲಾಯ್ತು, ಬಾಲಿವುಡ್ ನಲ್ಲಿ ಮೈನೆ ಪ್ಯಾರ್ ಕಿಯಾ ಅಂಥ ಮ್ಯೂಸಿಕಲ್ ಸಿನಿಮಾಗಳನ್ನು ಮಾಡುವುದಕ್ಕೆ ಶುರು ಮಾಡಿದರು, ಆದರೆ ದಕ್ಷಿಣದಲ್ಲಿ ಬದಲಾಗಲಿಲ್ಲ, ಒಂದೇ ರೀತಿಯ ಮಸಾಲ ಸಿನಿಮಾಗಳನ್ನೇ ಮಾಡುತ್ತಾ ಬಂದರು. ಅಲ್ಲಿ ಈಗಲೂ ಹಾಗೆ ಇದೆ, ಯಾವುದು ಬದಲಾಗಿಲ್ಲ. ಬಾಲಿವುಡ್ ಸಿನಿಮಾಗಳ ಹಾಗೆ ಮುಂದುವರೆದಿಲ್ಲ ಎಂದು ಅಸಂಬದ್ಧ ಹೇಳಿಕೆಯನ್ನು ಆರ್ಜಿವಿ ಅವರು ನೀಡಿದ್ದು, ಈ ಹೇಳಿಕೆ ಬಗ್ಗೆ ಕನ್ನಡಿಗರು ಕೋಪ ಮಾಡಿಕೊಂಡಿದ್ದಾರೆ. ಅಣ್ಣಾವ್ರ ಫ್ಯಾನ್ಸ್ ಅಂತೂ ಆರ್ಜಿವಿ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಷಯದ ಬಗ್ಗೆ ಪಿನಾಕ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಸಹ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಗಣೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಆರ್ಜಿವಿ ಅವರು ನೀಡಿರುವ ಹೇಳಿಕೆಗೆ ನಾವು ಪ್ರತಿಕ್ರಿಯೆ ಕೊಟ್ಟರೆ ಅದು ತಪ್ಪು. ಡಾ. ರಾಜ್ ಕುಮಾರ್ ಅಂದ್ರೆ ಕನ್ನಡ, ಕನ್ನಡ ಅಂದ್ರೆ ಡಾ. ರಾಜ್ ಕುಮಾರ್. ಅಣ್ಣಾವ್ರ ಬಗ್ಗೆ ಮಾತನಾಡಿದರೆ ಅದು ಆಕಾಶವನ್ನ ನೋಡಿ ಉಗಿದ ಹಾಗೆ, ಆಕಾಶಕ್ಕೆ ಉಗಿದರೆ ಅದು ನಮ್ಮ ಮುಖಕ್ಕೆ ಬೀಳುತ್ತೆ. ಹಾಗಾಗಿ ನಾವು ಆರ್ಜಿವಿ ಅವರ ಮಾತಿಗೆ ಪ್ರತಿಕ್ರಿಯೆ ಕೊಡಬಾಡದು, ಮಾತನಾಡಬಾರದು. ನಾನು ಅದರ ಬಗ್ಗೆ ಮಾತನಾಡೋದಿಲ್ಲ..” ಎಂದು ಹೇಳೋ ಮೂಲಕ ಗಣೇಶ್ ಅವರು ಆರ್ಜಿವಿ ಅವರಿಗೆ ತಕ್ಕ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ. ಅಣ್ಣಾವ್ರ ಬಗ್ಗೆ ಮಾತನಾಡೋದು ಸಾಮಾನ್ಯವಾದ ವಿಷಯ ಅಂತೂ ಅಲ್ಲವೇ ಅಲ್ಲ, ಇದು ಆರ್ಜಿವಿ ಅವರಿಗೆ ಗೊತ್ತಿಲ್ಲ ಅನ್ಸುತ್ತೆ..
ಕೆಲವು ದಿನಗಳ ಹಿಂದೆಯಷ್ಟೇ ಕನ್ನಡದ ಬಗ್ಗೆ ಕಮಲ್ ಹಾಸನ್ ಅವರು ನೀಡಿದ ಹೇಳಿಕೆ ಎಷ್ಟರ ಮಟ್ಟಿಗೆ ವಿವಾದ ಸೃಷ್ಟಿಸಿತು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರೆ, ಅದರ ಪರಿಣಾಮ ಏನೆಲ್ಲಾ ಆಗುತ್ತದೆ ಎಂದು ಸಾಕ್ಷಿ ಇದ್ದರು ಸಹ ಆರ್ಜಿವಿ ಅವರು ಅಣ್ಣಾವ್ರ ಬಗ್ಗೆ ಹಾಗೆಲ್ಲ ಹೇಳಿಕೆ ನೀಡಿದ್ದು ನಿಜಕ್ಕೂ ಕೋಪ ಬರುವಂಥ ವಿಚಾರ ಆಗಿದೆ.. ಚಿತ್ರರಂಗದ ಇತಿಹಾಸ ಗೊತ್ತಿದ್ದರೆ ಮಾತ್ರ ಮಾತನಾಡಬೇಕು, ಗೊತ್ತಿರದೇ ಏನನ್ನು ಮಾತನಾಡಬಾರದು, ಇದನ್ನು ಆರ್ಜಿವಿ ಅವರು ತಿಳಿದುಕೊಳ್ಳಬೇಕಿತ್ತು.



