ಜ.16 ರ ಮಧ್ಯರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದನು. ಘಟನೆಯಲ್ಲಿ ಸೈಫ್ ಅವರಿಗೆ ಗಂಭೀರ ಗಾಯಗಳಾಗಿವೆ. ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸರು ಅವರ ಕುಟುಂಬ ಹಾಗೂ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ಮೇಲೆ ದಾಳಿ ನಡೆದು 48 ಗಂಟೆಗಳಿಗೂ ಹೆಚ್ಚು ಸಮಯ ಕಳೆದರೂ ಇದುವರೆಗೂ ದಾಳಿಕೋರನನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಎಲ್ಲಿದ್ದಾನೆ ದುಷ್ಕರ್ಮಿ?
ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ಮಾಡಿದ ದುಷ್ಕರ್ಮಿಯನ್ನು ಹಿಡಿಯಲು ಮುಂಬೈ ಪೊಲೀಸರು ಅಪರಾಧ ವಿಭಾಗದ 28 ತಂಡಗಳನ್ನು ರಚಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಪೊಲೀಸರು ಪತ್ತೆ ಮಾಡಿಲ್ಲ. ದಾಳಿಕೋರ ಎಲ್ಲಿದ್ದಾನೆ ಎಂಬ ಪ್ರಶ್ನೆ ಉಳಿದಿದೆ? ಈ ಪ್ರಕರಣದಲ್ಲಿ ಇದುವರೆಗೆ 40-50 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂಬೈ ಪೊಲೀಸರು ಬಾಂದ್ರಾ ಮತ್ತು ಸೈಫ್ ಅಲಿ ಖಾನ್ ಅವರ ಮನೆಯ ಸುತ್ತ ತಿರುಗುತ್ತಿರುವ ಹಲವಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದರು. ಆರೋಪಿಯ ಲಿಂಕ್ ಪತ್ತೆ ಮಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ ಇದುವರೆಗೂ ಆರೋಪಿ ಪೊಲೀಸರ ಕೈಗೆ ಸಿಕ್ಕಿಲ್ಲ. ಶಂಕಿತರ ಛಾಯಾಚಿತ್ರವನ್ನು ತೋರಿಸುವ ಮೂಲಕ ಆರೋಪಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಾಂದ್ರಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಲ್ಲಿ ಪರಾರಿಯಾಗಿದ್ದಾನೆ?
ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿ ನಾಪತ್ತೆಯಾಗಿರುವುದರಿಂದ, ಬಾಂದ್ರಾ ನಿಲ್ದಾಣದಿಂದ ಸ್ಥಳೀಯ ರೈಲು ಅಥವಾ ಎಕ್ಸ್ಪ್ರೆಸ್ ರೈಲಿನಲ್ಲಿ ಆರೋಪಿಯು ಮುಂಬೈಗೆ ಅಥವಾ ಅದರ ಸುತ್ತಮುತ್ತ ಹೋಗಿದ್ದಾನೆ ಎಂದು ಮುಂಬೈ ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ರೈಲು ನಿಲ್ದಾಣ ಮತ್ತು ಎಕ್ಸ್ಪ್ರೆಸ್ ರೈಲು ನಿಲ್ದಾಣದ ಸಿಸಿಟಿವಿಯನ್ನು ಹಲವು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ. ಇಲ್ಲಿಯವರೆಗೆ ಪೊಲೀಸರಿಗೆ ಆ ಕಳ್ಳನ ಯಾವುದೇ ಕ್ರಿಮಿನಲ್ ದಾಖಲೆ ಕಂಡುಬಂದಿಲ್ಲ ಅಥವಾ ಅವನ ಕುಟುಂಬ ಅಥವಾ ಯಾವುದೇ ಸ್ನೇಹಿತರ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿಲ್ಲ.
ಕ್ರೈಂ ವೆಬ್ ಸಿರೀಸ್-ಸಿನಿಮಾ ವೀಕ್ಷಿಸಿದ್ದಾನಾ?
ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆದು ಎರಡು ದಿನಗಳು ಕಳೆದಿವೆ. ಆದರೆ ಆರೋಪಿ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಮತ್ತೆ ಮತ್ತೆ ಬಟ್ಟೆ ಬದಲಾಯಿಸುತ್ತಿದ್ದಾನೆ. ಹೀಗಿರುವಾಗ ಪೊಲೀಸರಿಗೆ ದಾರಿ ತಪ್ಪಿಸಲು ಬಟ್ಟೆ ಬದಲಿಸುವ ರೀತಿ ನೋಡಿದರೆ ಯಾವುದೋ ಕ್ರೈಂ ವೆಬ್ ಸೀರೀಸ್ ಅಥವಾ ಕ್ರೈಂ ಸಿನಿಮಾಗಳಿಂದ ಪ್ರಭಾವಿತನಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಮೇಲಿನ ದಾಳಿಯ ಕೆಲವೇ ಗಂಟೆಗಳ ನಂತರ, ಮುಂಬೈ ಪೊಲೀಸರು ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ಸಹ ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಆರೋಪಿ ಮೆಟ್ಟಿಲುಗಳ ಕೆಳಗೆ ಬರುತ್ತಿರುವುದನ್ನು ಕಾಣಬಹುದು. ಶುಕ್ರವಾರ, ದೃಶ್ಯಗಳ ಆಧಾರದ ಮೇಲೆ, ಪೊಲೀಸರು ಶಂಕಿತನನ್ನು ಬಂಧಿಸಿದ್ದರು, ಆದರೆ ವಿಚಾರಣೆಯ ನಂತರ ಅವನು ದಾಳಿಕೋರನಲ್ಲ ಎಂದು ಸ್ಪಷ್ಟವಾಯಿತು.
Saif Ali Khan Attack: ದಾಳಿಕೋರ ಕ್ರೈಂ ಸೀರೀಸ್ ನೋಡಿ ಈ ಕೃತ್ಯ ಎಸಗಿರುವ ಶಂಕೆ!

Leave a Comment
Leave a Comment