ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರತಿಭಾನ್ವಿತ ನಟಿ ಅಂದರೆ ಸಾಯಿಪಲ್ಲವಿ ಎಂದು ಕಣ್ಣುಮುಚ್ಚಿಕೊಂಡು ಹೇಳಿಬಿಡಬಹುದು. ಏಕೆಂದರೆ ಸಾಯಿಪಲ್ಲವಿ ಅವರು ಅಂಥ ಅದ್ಭುತವಾದ ಪ್ರತಿಭೆ, ಹೆಸರಿಗೆ ಒಂದಷ್ಟು ಸಿನಿಮಾ ಮಾಡಬೇಕು ಎಂದು ಸಿಕ್ಕಿದ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳೋ ನಟಿ ಅಲ್ಲ ಇವರು. ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಒಳ್ಳೆಯ ಅಂಶ ಇದ್ದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಅಂಥ ನಟಿ ಸಾಯಿಪಲ್ಲವಿ ಅವರು ಬಾಲಿವುಡ್ ನ ಬಹು ನಿರೀಕ್ಷಿತ ಪ್ರಾಜೆಕ್ಟ್ ರಾಮಾಯಣದಲ್ಲಿ ನಟಿಸುತ್ತಿರುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ನಟಿಸಲು ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಸಾಮಾನ್ಯವಾಗಿ ಪಡೆಯುವುದಕ್ಕಿಂತ 4 ಪಟ್ಟು ಹೆಚ್ಚು.

ಹೌದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ನಟಿ ಸಾಯಿಪಲ್ಲವಿ ಅವರು ಸಾಮಾನ್ಯವಾಗಿ ಬೇರೆ ಸಿನಿಮಾಗಳಿಗೆ ಎಷ್ಟು ಸಂಭಾವನೆ ಪಡೆಯುತ್ತಾರೋ, ಅದಕ್ಕಿಂತ 4 ಪಟ್ಟು ಹೆಚ್ಚು ಸಂಭಾವನೆಯನ್ನು ರಾಮಾಯಣ ಸಿನಿಮಾಗಾಗಿ ಪಡೆದಿದ್ದಾರಂತೆ. ಇದು ಅತಿದೊಡ್ಡ ಸಿನಿಮಾ, ಬಿಗ್ ಬಜೆಟ್, 2 ಪಾರ್ಟ್ ಜೊತೆಗೆ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಬೇಕು ಎನ್ನುವ ಕಾರಣಕ್ಕೋ ಏನೋ ಸಾಯಿಪಲ್ಲವಿ ಅವರು ಹೆಚ್ಚು ಮೊತ್ತವನ್ನು ಸಂಭಾವನೆ ಪಡೆದಿದ್ದಾರೆ. ಹಲವರು ಹೇಳುವ ಹಾಗೆ, ಸೀತಾ ಪಾತ್ರಕ್ಕೆ ಸಾಯಿಪಲ್ಲವಿ ಅವರನ್ನು ಬಿಟ್ಟರೆ, ಇನ್ಯಾರು ಸರಿ ಹೊಂದುವುದಿಲ್ಲ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಾಗಾಗಿ ಸಾಯಿಪಲ್ಲವಿ ಅವರು ಸೀತೆಯ ಪಾತ್ರಕ್ಕೆ ಬೆಸ್ಟ್ ಆಯ್ಕೆ ಆಗಿದ್ದಾರೆ. ಇನ್ನು ಇವರು ಪಡೆದಿರುವ ಸಂಭಾವನೆ ಬಗ್ಗೆ ಹೇಳುವುದಾದರೆ, ರಾಮಾಯಣ ಸಿನಿಮಾದ ಸೀತೆಯ ಪಾತ್ರಕ್ಕೆ ಸಾಯಿಪಲ್ಲವಿ ಅವರು ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದು ಅತಿಹೆಚ್ಚಿನ ಸಂಭಾವನೆ ಆಗಿದೆ, ಸಾಮಾನ್ಯವಾಗಿ ಬೇರೆ ಸಿನಿಮಾಗಳಿಗೆ ಸಾಯಿಪಲ್ಲವಿ ಅವರು 3 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ರಾಮಾಯಣ ಸಿನಿಮಾಗಾಗಿ 4 ಪಟ್ಟು ಹೆಚ್ಚು ಸಂಭಾವನೆಯನ್ನು ಪಡೆದಿದ್ದಾರೆ. ಪ್ರಸ್ತುತ ಈ ವಿಚಾರ ವೈರಲ್ ಆಗಿದೆ.

ಸಾಯಿಪಲ್ಲವಿ ಅವರು ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಅಂದ್ರೆ ಅದರಲ್ಲಿ ಒಳ್ಳೆಯ ಅಂಶವಿದೆ, ಅದೆ ಕಾರಣಕ್ಕೆ ಅವರು ಒಪ್ಪಿರುತ್ತಾರೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಹಾಗೆಯೇ ಸಾಯಿಪಲ್ಲವಿ ಅವರಂಥ ನಟಿ ಒಪ್ಪಿದರೆ, ಸಿನಿಮಾ ಸಕ್ಸಸ್ ಆಗೋದು ಗ್ಯಾರೆಂಟಿ ಅನ್ನೋ ನಂಬಿಕೆ ಕೂಡ ಇದೆ. ಅವರ ಹಿಂದಿನ ಸಿನಿಮಾಗಳನ್ನು ತೆಗೆದುಕೊಂಡರೆ ಸಾಯಿಪಲ್ಲವಿ ನಟಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿವೆ. ಹಾಗಾಗಿ ಸಾಯಿಪಲ್ಲವಿ ಅವರ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚು, ಜೊತೆಗೆ ಅಭಿಮಾನಿಗಳು ಸಹ ಅವರನ್ನು ನೋಡುವ ಸಲುವಾಗಿ ಆದರೂ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ. ಅಷ್ಟು ಚೆನ್ನಾಗಿರುತ್ತದೆ ಆಕೆಯ ಅಭಿನಯ.
ಇನ್ನು ಸಾಯಿಪಲ್ಲವಿ ಅವರು ನಾಯಕಿಯಾಗಿ, ನಟ ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸಿ, ಕಮಲ್ ಹಾಸನ್ ಅವರು ನಿರ್ಮಾಣ ಮಾಡಿದ ಅಮರನ್ ಚಿತ್ರ ದೀಪಾವಳಿ ಹಬ್ಬಕ್ಕೆ ತೆರೆಕಂಡಿತು, ಇದು ಮೇಜರ್ ಮುಕುಂದ್ ವರದರಾಜನ್ ಅವರ ಬಯೋಪಿಕ್ ಆಗಿದೆ. ಈ ನೈಜ ಕಥೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದರು.ಅಮರನ್ ಸಿನಿಮಾ ಥಿಯೇಟರ್ ನಲ್ಲಿ ಇದ್ದಾಗ 330 ಕೋಟಿಗಿಂತ ಹೆಚ್ಚು ಹಣ ಗಳಿಕೆ ಮಾಡಿದೆ, ಈಗ ಓಟಿಟಿ ಗೆ ಬಂದಿದ್ದರು ಸಹ ಥಿಯೇಟರ್ ಗೆ ಜನ ಬರುವುದು ಕಡಿಮೆ ಆಗಿಲ್ಲ. ಒಳ್ಳೆ ಸಿನಿಮಾಗಳು ಒಳ್ಳೇ ಪಾತ್ರಗಳು ಬಂದರೆ ಜನರು ಕೈಬಿಡುವುದಿಲ್ಲ ಎನ್ನುವುದಕ್ಕೆ ಇದು ಉತ್ತಮವಾದ ಸಾಕ್ಷಿ ಆಗಿದೆ.