ಬಿಗ್ ಬಾಸ್ ಮನೆಯಿಂದ 6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ, ಸಾನಿಯಾ ಅವರ ಎಲಿಮಿನೇಟ್ ಇಂದ ಕಣ್ಣೀರು ಹಾಕಿದ್ದು ರೂಪೇಶ್ ಶೆಟ್ಟಿ ಅವರಿಗೆ ಈಗ ಬಾತ್ರೂಮ್ ಸುಂದರಿ ಸಿಕ್ಕಿದ್ದಾಳೆ. ಆ ಸುಂದರಿಗೆ ವಿಶೇಷವಾಗಿ ಸಾನಿಯಾ ಎಂದು ನಾಮಕರಣ ಮಾಡಿದ್ದಾರೆ. ಮನೆಯಲ್ಲಿ ಗೋಡೆಯ ಮೇಲೆ ಪ್ರದರ್ಶಿಸಲಾಗಿರುವ ಜಾಹೀರಾತಿನ ಸುಂದರಿ ಒಬ್ಬಳ ಜೊತೆಗೆ ರೂಪೇಶ್ ಶೆಟ್ಟಿ ಬಹಳ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ನೀನು ಸಾನಿಯಾ ರೀತಿಯ ಇದ್ದೀಯ. ಬಹಳ ಸುಂದರವಾಗಿದ್ದೀಯ. ನಿನ್ನ ಕಣ್ಣುಗಳು ಹೊಳೆಯುತ್ತಿವೆ. ನಾನು ಇನ್ನು ಮೇಲೆ ನಿನ್ನ ಸ್ನೇಹಿತ. ನಿನ್ನೊಂದಿಗೆ ನಿತ್ಯವೂ ಮಾತನಾಡುತ್ತಿರುತ್ತೇನೆ ಎಂದು ಅವರ ಭಾಗದ ಭಾಷೆಯಲ್ಲಿ ಬಹಳ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ.

ಆ ಸುಂದರಿಯ ಜೊತೆ ಕ್ಯೂಟ್ ಆಗಿ ಮಾತನಾಡಿ ರೂಪೇಶ್ ರಾಜಣ್ಣ ಬಂದರೆ ನಗಬೇಡ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ನಿನ್ನ ಕಣ್ಣು ತುಂಬಾ ಚೆನ್ನಾಗಿದೆ, ನಿನ್ನ ಸಿಂಪಲ್ ಕಿವಿ ರಿಂಗ್ ತುಂಬಾ ಚೆನ್ನಾಗಿದೆ, ಮೂಗುತಿ ಹಾಕುದ್ರೆ ತುಂಬಾ ಚೆನ್ನಾಗಿ ಕಾಣುತ್ತೀಯ, ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ನನ್ನ ಸ್ನೇಹಿತರು ಆದರೆ ಅವರ ಹತ್ತಿರ ನಾನು ಏನನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಿನ್ನ ಹತ್ತಿರ ಹೇಳಿಕೊಳ್ಳುತ್ತಿದ್ದೇನೆ ಎಂದರು.
ಒಂದು ವೇಳೆ ನಿನಗೆ ಇವೆಲ್ಲ ಅರ್ಥ ಆದರೆ ಒಳ್ಳೆಯದು ಇಲ್ಲವಾದರೆ ಇನ್ನೂ ಒಳ್ಳೆಯದು ನಾನು ಏನು ತಾನೆ ಮಾಡುವುದಕ್ಕೆ ಆಗುತ್ತದೆ ಎಂದು ಹೇಳಿದರು. ಇದರ ಜೊತೆಗೆ ರೂಪೇಶ್ ರಾಜಣ್ಣ ಬಂದರೆ ನಗಬೇಡ ಅವರಿಗೆ ಮದುವೆಯಾಗಿದೆ ಅಷ್ಟೇ ಅಲ್ಲದೆ ಅವರಿಗೆ 40 ವರ್ಷವಾಗಿದೆ. ಆರ್ಯ ವರ್ಧನ್ ಗುರೂಜಿ ನಿನಗೆ ತಂದೆಯ ಸಮಾನ ಆದ್ದರಿಂದ ಅವರಿಗೆ ಸ್ಮೈಲ್ ಕೊಡು ನಿನ್ನ ಜೊತೆ ಮಾತನಾಡುವುದು ತುಂಬಾ ಇದೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಹೊರಟರು ರೂಪೇಶ್ ಶೆಟ್ಟಿ.