ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿಗೌಡಗೆ ವಿವಾಹ ಬಂಧನಕ್ಕೆ ಕಾಲಿಡಲು ಸಜ್ಜಾಗಿದ್ದರು. ಆದರೆ ಮೊದಲ ಹೆಜ್ಜೆಯಲ್ಲೆ ವಿಘ್ನ ಉಂಟಾಗಿದೆ. ಹೌದು, ವೈಷ್ಣವಿ ಕೈಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಇದೀಗ ನಟ ವಿದ್ಯಾಭರಣ್ ಅವರು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾರೆ ಎನ್ನುವ ಬಗ್ಗೆ ಇಬ್ಬರು ಹೆಣ್ಣುಮಕ್ಕಳು ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ. ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿರಾಜ್ ಸಿನಿಮಾದ ನಟ ವಿದ್ಯಾಭರಣ್ ಸರಿಯಿಲ್ಲ ಎಂದು ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪ ಚರ್ಚೆಯಾಗುತ್ತಿದ್ದು, ಇದರಿಂದ ಮನನೊಂದಿರುವ ವೈಷ್ಣವಿ ಗೌಡ ಇನ್ಸ್ಟಾಗ್ರಾಂ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ ಮಾತುಕತೆ ಮುರಿದು ಬಿದ್ದಿದೆ.
ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಾದ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಅವರು ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡು ಕುಟುಂಬದವರು ನವೆಂಬರ್ 11ರಂದು ಮದುವೆ ಮಾತುಕತೆ ನಡೆಸಿದ್ದಾರೆ. ಅಂದು ತೆಗೆದ ಫೋಟೋ ವೈರಲ್ ಆಗಿದೆ ಎಂದು ಹೇಳಲಾಗಿದೆ. ನಿಶ್ಚಿತಾರ್ಥವಾಗಿದೆ ಎನ್ನಲಾದ ಫೋಟೋ ಹರಿದಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ವೈಷ್ಣವಿ ಗೌಡ, ನಮ್ಮ ಖಾಸಗಿ ತನಕ್ಕೆ ಗೌರವ ಕೊಡಿ. ಇದು ಎಂಗೇಜ್ಮೆಂಟ್ ಅಲ್ಲ. ನಿಶ್ಚಿತಾರ್ಥ ಮಾಡಿಕೊಂಡರೆ ನಾನೇ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನು ಇಲ್ಲಿಗೆ ಬಿಟ್ಟುಬಿಡಿ, ಮತ್ತಷ್ಟು ಎಳೆಯಬೇಡಿ. ಶುಭ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಅವರು ಹೇಳಿದ್ದು, ಮದುವೆ ಮಾತುಕತೆ ಕ್ಯಾನ್ಸಲ್ ಆಗಿರುವ ವಿಚಾರ ಹೇಳಿದ್ದಾರೆ ಎನ್ನಲಾಗಿದೆ. ನಾನು ವೈಷ್ಣವಿ ಇನ್ನೂ ಪರಸ್ಪರ ಮಾತನಾಡಿಲ್ಲ, ನಿಶ್ಚಿತಾರ್ಥ ನಡೆದಿಲ್ಲ ಎಂದು ವಿದ್ಯಾಭರಣ್ ಖಾಸಗಿ ಚಾನೆಲ್ ಗಳಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈರಲ್ ಆದ ಫೋಟೋ ಬಗ್ಗೆ ಹುಟ್ಟಿಕೊಂಡ ಅನುಮಾನಕ್ಕೆ ಸ್ಪಷ್ಟಣೆ ನೀಡಿದ್ದಾರೆ. ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ.
ಇನ್ನು ವಿದ್ಯಾಭರಣ್ ವಿರುದ್ಧ ಯುವತಿಯೊಬ್ಬಳು ಆರೋಪ ಮಾಡಿದ್ದು, ಆರೋಪವನ್ನು ವಿದ್ಯಾಭರಣ್ ಅಲ್ಲಗಳದಿದ್ದಾರೆ. ಈ ಹಿಂದೆ ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜ. ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ನನ್ನ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಯುವತಿ ನೇರವಾಗಿ ಆರೋಪ ಮಾಡಬಹುದಿತ್ತು. ಇಲ್ಲದಿದ್ದರೆ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.



