ಕಾಂತರ ಸಿನಿಮಾ ನಮ್ಮ ಸ್ಯಾಂಡಲ್ವುಡ್ ಅಲ್ಲದೆ ಎಲ್ಲಾ ಭಾಷೆಯವರು ಹಾಡಿ ಹೋಗಳುವಂತೆ ಮಾಡಿದೆ.ಈ ಚಿತ್ರ ಸೆಪ್ಟೆಂಬರ್ 30 ರಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು.ಆ ನಂತರ ಪರಭಾಷೆಯ ಜನರೇ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಿ ಎಂಬ ಬೇಡಿಕೆಗಳು ಹೆಚ್ಚಾಗುತ್ತಾ ಹೋಯಿತು.ಹಾಗಾಗಿ ರಿಷಬ್ ಶೆಟ್ಟಿ ಕಳೆದ ವಾರ ಎಲ್ಲಾ ಭಾಷೆಗಳಲ್ಲು ಡಬ್ ಮಾಡಿ ಬಿಡುಗಡೆ ಮಾಡಿದ್ದರು. ಇನ್ನು ಎಲ್ಲಾ ಕೆಲಸಗಳು ಮುಗಿದರೆ ಈ ವಾರ ಮಲಯಾಳಂ ನಲ್ಲಿ ಬಿಡುಗಡೆ ಮಾಡುತ್ತಾರೆ.ಹೀಗೆ ಕನ್ನದಲ್ಲಿ ಪಡೆದುಕೊಂಡ ಹಾಗೆ ಪರ ಭಾಷೆಯಲ್ಲೂ ಕೊಡ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಈ ಕಾಂತರ ಸಿನಿಮಾ.

ಈಗಾಗಲೇ ಈ ಚಿತ್ರ 100ಕೋಟಿ ಅಷ್ಟು ಬಾಕ್ಸ್ ಆಫೀಸ್ ನಲ್ಲಿ ಸಂಪಾದನೆ ಮಾಡಿದೆ.ಹಾಗೆಯೇ ಎಲ್ಲಾ ಭಾಷೆಯ ಸಂಪಾದನೆ ಸೇರಿ ದಿನಕ್ಕೆ ಎರಡಂಕಿ ಗಳಿಸುತ್ತಿದೆ.ಈಗಾಗಲೇ ಈ ಚಿತ್ರ ಕನ್ನಡದ ಟಾಪ್ ಲಿಸ್ಟ್ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.ಹೀಗೆ ಈ ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರೆದರೆ ಟಾಪ್ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ “ಕೆಜಿಎಫ್ 2” ಸಿನಿಮಾವನ್ನು ಕೆಳಗಿಳಿಸಿ ಆ ಸ್ಥಾನ ಪಡೆದುಕೊಳ್ಳುವಲ್ಲಿ ಯಾವ ಸದೇಹವಿಲ್ಲ ಎಂದಿದ್ದಾರೆ ಹಲವಾರು ನೆಟ್ಟಿಗರು.
ಇನ್ನು ಈ ಚಿತ್ರವನ್ನು ಪ್ರೇಕ್ಷಕರು ಅಲ್ಲದೆ ಬಹಳಷ್ಟು ಸೆಲಬ್ರೆಟಿಗಳು ಕೂಡ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ನಮ್ಮ ಕನ್ನಡದ “ಕಿಚ್ಚ ಸುದೀಪ್, ಜಗ್ಗೇಶ್,ರಕ್ಷಿತ್ ಶೆಟ್ಟಿ, ರಮ್ಯಾ” ಅಲ್ಲದೆಯೇ ಪರಭಾಷೆಯ ನಿರ್ದೇಶಕರು ನಿರ್ಮಾಪಕರು ಅಲ್ಲದೆಯೇ ನಟನಟಿಯರಾದ ಧನುಷ್ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ವಿಶೇಷವೇನೆಂದರೆ ಈ ಚಿತ್ರವನ್ನು ಎರಡು ಬಾರಿ ವೀಕ್ಷಿಸಿದ “ಪ್ರಭಾಸ್” ಅವರು ಬಹಳ ಉತ್ಸುಕರಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.ಇನ್ನು ಕಾಲಿವುಡ್ ನ “ಕಾರ್ತಿ” ಅವರು ಈ ಚಿತ್ರದ ತಮಿಳು ಅವತರಿಣಿಕೆಯ ಕಾಂತರ ನೋಡಿ ರಿಷಬ್ ಅವರನ್ನು ಭೇಟಿ ಮಾಡಿ ಆ ಚಿತ್ರವನ್ನು ಹೋಗಳಿರುವುದು ವಿಷೆಶವಾಗಿದೆ.
ಇಷ್ಟೆಲ್ಲ ಒಳ್ಳೆಯ ಮಾತುಗಳನ್ನು ಪರ ಭಾಷಿಗರು ಹೇಳುತ್ತಿರುವ ಸಮಯದಲ್ಲಿ ನಮ್ಮವರೇ ನಮ್ಮ ಸಿನಿಮಾಗೆ ಪ್ರೋತ್ಸಾಹ ನೀಡದೇ ಇರುವುದು ಹಲವರಲ್ಲಿ ಬೇಸರ ತಂದಿದೆ.ಈ ಚಿತ್ರದ ಬಗ್ಗೆ ಕನ್ನಡ ನಾಡಿನಲ್ಲಿ ಹುಟ್ಟಿ ಪರ ಬಾಷೆಯಲ್ಲಿ ಹೆಸರು ಮಾಡುತ್ತಿರುವ ನಟಿಯರಾದ “ರಶ್ಮಿಕಾ ಮಂದಣ್ಣ,ಕೃತಿ ಶೆಟ್ಟಿ ಹಾಗೂ ಪೂಜಾ ಹೆಗ್ಡೆ” ಯಾವ ಪ್ರತಿಕ್ರಿಯೆ ನೀಡಿಲ್ಲ.ಇನ್ನು ನಮ್ಮ ಸ್ಯಾಂಡಲ್ವುಡ್ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎನ್ನುವ ನಟರಾದ “ದರ್ಶನ್,ಯಶ್ ಹಾಗೂ ಶಿವಣ್ಣ” ಈ ಚಿತ್ರವನ್ನು ವೀಕ್ಷಿಸದೆ ನಮ್ಮವರಿಗೆ ಶುಭ ಹಾರೈಸದೆ ಇರುವುದು ಎಲ್ಲರಲ್ಲೂ ಬೇಸರ ತಂದಿದೆ.
ನಿನ್ನೆಯಷ್ಟೇ ರಿಷಬ್ ಹಾಗೂ ಕಾಂತರ ಚಿತ್ರ ತಂಡ ದಿಗ್ವಿಜಯ ಪ್ರೆಸ್ ಮೀಟ್ ಆಟನ್ಡ್ ಮಾಡಿತ್ತು. ಆಗ ನಿಮ್ಮ ಚಿತ್ರದ ಬಗ್ಗೆ ನಿಮಗಿರುವ ಹೆಮ್ಮೆ ಹಾಗೂ ನಿಮಗೆ ಬಂದ ಪ್ರಶಂಸೆಗಳನ್ನು ಸಣ್ಣದಾಗಿ ವಿವರಿಸಿ ಎಂದಾಗ.ರಿಷಬ್ ಅವರು ನನ್ನ ಸಿನಿಮಾ ಬಿಡುಗಡೆ ಆಗುವ ದಿನ ರಾಕಿಂಗ್ ಸ್ಟಾರ್ “ಯಶ್” ಅವರು ಕರೆ ಮಾಡಿ “ಎಲ್ಲಾ ಚೆನ್ನಾಗಿ ಆಗತ್ತೆ, ಹಾಗೂ ಒಳ್ಳೆಯ ರೆಸ್ಪಾನ್ಸ್ ಬರತ್ತೆ ಚಿನ್ನಾ” ಎಂದು ತಿಳಿಸಿದ್ದರು ಎಂದು ಸ್ವತಹ ರಿಷಬ್ ಅವರೇ ತಿಳಿಸಿದ್ದಾರೆ.ಹಾಗಾಗಿ ಯಶ್ ಅವರ ಮೇಲೆ ಇದ್ದ ಕೊಂಕು ಮಾತುಗಳು ಅಳಿಸಲು ದಾರಿಮಾಡಿಕೊಟ್ಟಿತು.ಈಗ “ಕಂಗನಾ” ಅವರು ಈ ಚಿತ್ರ ವೀಕ್ಷಣೆ ಮಾಡಲು ಬಹಳ ಉತ್ಸುಕರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.