ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್, ಯಂಗ್ ರೆಬಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ನಟನೆಯ ಎಲ್ಲಾ ಸಿನಿಮಾಗಳೂ ಕೂಡ ಥಿಯೇಟರ್ ನಲ್ಲಿ ಮಕ್ಕಾಡೆ ಮಲಗಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಪ್ರಭಾಸ್ ಹಾಗೂ ಅವರ ಅಭಿಮಾನಿಗಳಿಗೆ ಮರು ಜೀವ ಕೊಟ್ಟದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’. ಈ ಚಿತ್ರದ ಟೀಸರ್ ರಿಲೀಸ್ ಆಗಿ ಸಕ್ಕತ್ ಸೌಂಡ್ ಮಾಡಿತ್ತು. ಇದೀಗ ಪ್ರಭಾಸ್ ನಟನೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾದ ಟೀಸರ್ ಹಾಗೂ ಟೈಟಲ್ ರಿಲೀಸ್ ಆಗಿ ದಾಖಲೆಗಳನ್ನು ದೂಳಿಪಟ ಮಾಡುತ್ತಿದೆ. ಅಷ್ಟಕ್ಕೂ ‘ಪ್ರಾಜೆಕ್ಟ್-ಕೆ’ ಅಂದರೆ ಏನು ಅಂತ ಗೊತ್ತಾ?

ಈ ಸಿನಿಮಾವನ್ನು ತೆಲುಗಿನ ಫೇಮಸ್ ಡೈರೆಕ್ಟರ್ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು. ಇಲ್ಲಿಯ ವರೆಗೆ ಇದನ್ನು ‘ಪ್ರಾಜೆಕ್ಟ್-ಕೆ’ ಎಂದು ಕರೆಯಲಾಗುತ್ತಿತ್ತು.ಸದ್ಯ ಈ ಸಿನಿಮಾದ ಅಧಿಕೃತ ಟೈಟಲ್ ಅನ್ನು ನಟ ಪ್ರಭಾಸ್ ಹಾಗೂ ಕಮಲ್ ಹಾಸನ್ ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ನಲ್ಲಿ ಲಾಂಚ್ ಮಾಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಪ್ರಾಜೆಕ್ಟ್- ಕೆ ಎಂದರೆ ‘ಕಲ್ಕಿ2898 ಕ್ರಿ.ಶ’ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಇದೇ ಚಿತ್ರದ ಟೈಟಲ್. ಈ ಸಿನಿಮಾವನ್ನು 600 ಕೋಟಿ ಬಜೆಟ್ ನಲ್ಲಿ ತಯಾರಿಸಲಾಗುತ್ತಿದ್ದು, ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಪ್ರಭಾಸ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.
ನಿನ್ನೆಯಷ್ಟೇ ‘ಕಲ್ಕಿ2898ಕ್ರಿ.ಶ’ ಟೀಸರ್ ರಿಲೀಸ್ ಆಗಿದ್ದು, 12 ಗಂಟೆಗಳಲ್ಲಿ ಬರೋಬ್ಬರಿ 55 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಇದೊಂದು ಸೂಪರ್ ಹಿರೋ ಕಥೆಯಾಗಿದ್ದು, ಹಾಲಿವುಡ್ ಚಿತ್ರಗಳನ್ನು ನೆನಪಿಸುವಂತೆ ಅದ್ದೂರಿಯಾಗಿ ತಯಾರಿಸಲಾಗಿದೆ. ಚಿತ್ರದಲ್ಲಿ ಪ್ರಭಾಸ್ ಸೂಪರ್ ಹಿರೋ ಹಾಗೂ ಇನ್ನುಳಿದ ಕಲಾವಿದರು ಈ ಹೊಸ ಲೋಕದ ಸ್ಟಾರ್ ಗಳು. ಸಲಾರ್ ನಂತರ ಈ ಚಿತ್ರ ಜಗತ್ತಿನಾದ್ಯಂತ ತೆರೆಗಪ್ಪಳಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.