ಬಾಲಿವುಡ್ ನಲ್ಲಿ ಯಾರು ಮರೆಯದ ಲವ್ ಸ್ಟೋರಿ ಎಂದರೆ ರೇಖಾ ಮತ್ತು ಅಮಿತಾಬ್ ಬಚ್ಚನ್ ಅವರ ಲವ್ ಸ್ಟೋರಿ. ಇವರಿಬ್ಬರು ಬ್ರೇಕಪ್ ಮಾಡಿಕೊಂಡು, 40 ವರ್ಷದ ಮೇಲಾಗಿದೆ, ಆದರೆ ಇವತ್ತಿಗೂ ಸಹ ಇವರ ಬಗ್ಗೆ ಮಾತಾಡೋದು, ಇವರಿಬ್ಬರ ಪ್ರೀತಿ ಬಗ್ಗೆ ಚರ್ಚೆ ಆಗೋದು ಮಾತ್ರ ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ರೇಖಾ ಅವರು ತಾವು ಅಮಿತಾಭ್ ಬಚ್ಚನ್ ಆವರು ನಿರೂಪಣೆ ಮಾಡುವ ಕೌನ್ ಬನೆಗಾ ಕರೋಡ್ ಪತಿ ಕಾರ್ಯಕ್ರಮವನ್ನು ತಪ್ಪದೇ ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳು, ಹಾಗೂ ಇದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..

ನಟಿ ರೇಖಾ ಅವರು ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಬಚ್ಚನ್ ಅವರು ಜಯಾ ಬಾಧುರಿ ಅವರೊಡನೆ ಮದುವೆಯಾದರು. ಮದುವೆಯಾದ ನಂತರ ಕೂಡ ರೇಖಾ ಅವರೊಡನೆ ಅಮಿತಾಬ್ ಬಚ್ಚನ್ ಅವರ ರಿಲೇಶನ್ಷಿಪ್ ಮುಂದುವರೆದಿತ್ತಂತೆ. ಈ ಮೂವರು ಕೂಡ ಸಿಲ್ಸಿಲಾ ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು, ಈ ಸಿನಿಮಾ ಇವತ್ತಿಗೂ ಕೂಡ ಎಲ್ಲರ ಫೇವರೆಟ್ ಆಗಿದೆ. ಈ ಸಿನಿಮಾ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತದೆ. ಆದರೆ ಸಿಲ್ಸಿಲಾ ನಂತರ ಇವರಿಬ್ಬರು ಸಹ ಇನ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹಾಗೆಯೇ 80ರ ದಶಕದ ಶುರುವಿನಲ್ಲಿ ಇಬ್ಬರು ಬ್ರೇಕಪ್ ಮಾಡಿಕೊಂಡರು ಎನ್ನಲಾಗುತ್ತದೆ.

ಅಮಿತಾಬ್ ಬಚ್ಚನ್ ಅವರೇನೋ ಮದುವೆಯಾದರು, ಅಮಿತಾಬ್ ಜಯಾ ಜೋಡಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಈಗ ಅವರಿಗೆ ಮೊಮ್ಮಕ್ಕಳು ಕೂಡ ಇದ್ದಾರೆ. ಆದರೆ ಇವತ್ತಿಗೂ ಕೂಡ ರೇಖಾ ಅವರು ಮದುವೆ ಆಗೇ ಇಲ್ಲ, ಇವತ್ತಿಗೂ ಸಿಂಗಲ್ ಆಗಿ ಉಳಿದಿದ್ದು, ಅಮಿತಾಬ್ ಬಚ್ಚನ್ ಅವರ ಮೇಲಿರುವ ಪ್ರೀತಿ ಕೂಡ ಕಡಿಮೆ ಆಗಿಲ್ಲ. ಎಲ್ಲರ ಹಾಗೆ ತಾವು ಕೂಡ ಕೌನ್ ಬನೆಗಾ ಕರೊಡ್ ಪತಿ ಕಾರ್ಯಕ್ರಮದ ಫ್ಯಾನ್ ಮಿಸ್ ಮಾಡದೇ ನೋಡುತ್ತೇನೆ ಎಂದು ಹೇಳಿದ್ದಾರೆ ರೇಖಾ. ಈ ಮಾತನ್ನು ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನೆಟ್ಫ್ಲಿಕ್ಸ್ ನಲ್ಲಿ ಕಪಿಲ್ ಶರ್ಮ ನೇತೃತ್ವದ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸ್ಟ್ರೀಮ್ ಆಗುತ್ತಿದೆ.
ಈ ಶೋಗೆ ರೇಖಾ ಅವರು ಗೆಸ್ಟ್ ಆಗಿ ಬಂದಿದ್ದಾಗ, ಅವರ ಕೆರಿಯರ್ ಬಗ್ಗೆ ಮತ್ತು ಪರ್ಸನಲ್ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಕಪಿಲ್ ಶರ್ಮ ಅವರು ತಮ್ಮ ತಾಯಿಯ ಜೊತೆಗೆ ಕೌನ್ ಬನೆಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಹೋದಾಗ ನಡೆದ ಘಟನೆಯನ್ನು ತಿಳಿಸುವಾಗ, ಅಮಿತಾಬ್ ಬಚ್ಚನ್ ಅವರ ಥರ ಕಪಿಲ್ ಶರ್ಮ ಮಿಮಿಕ್ರಿ ಮಾಡಿದಾಗ, ಬಚ್ಚನ್ ಅವರು ಕಪಿಲ್ ಅವರ ತಾಯಿಗೆ, ಇವನಿಗೆ ಜನ್ಮ ಕೊಡುವುದಕ್ಕಿಂತ ಮೊದಲು ಏನು ತಿಂದಿದ್ರಿ ಏನು ಕೇಳುತ್ತಾರೆ, ಇದನ್ನು ಹೇಳಿ ಉತ್ತರ ಹೇಳೋದಕ್ಕೂ ಮೊದಲೇ ರೇಖಾ ಅವರು ದಾಲ್ ರೋಟಿ ಎಂದು ಹೇಳಿದರು.

ನನಗೆ ಎಲ್ಲಾ ಮಾತುಗಳು ಸ್ಪಷ್ಟವಾಗಿ ನೆನಪಿದೆ ಎಂದು ಹೇಳಿದಾಟು ರೇಖಾ. ಈ ಮೂಲಕ ರೇಖಾ ಅವರು ಅಮಿತಾಬ್ ಬಚ್ಚನ್ ಅವರ ಕಾರ್ಯಕ್ರಮ ಕೌನ್ ಬನೆಗಾ ಕರೋಡ್ ಪತಿ ಕಾರ್ಯಕ್ರಮವನ್ನು ಮರೆಯದೇ ವೀಕ್ಷಿಸುವುದಾಗಿ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದರೆ, ರೇಖಾ ಅವರಿಗೆ ಅಮಿತಾಬ್ ಬಚ್ಚನ್ ಅವರ ಮೇಲೆ ಇದ್ದಂಥ ಪ್ರೀತಿ ಸ್ವಲ್ಪ ಕೂಡ ಕಡಿಮೆ ಆಗಿಲ್ಲ ಎನ್ನುವುದು ಗೊತ್ತಾಗುತ್ತದೆ. ರೇಖಾ ಅವರು ಸಹ ವಯಸ್ಸು ಆಗಿದ್ದರೂ ಇನ್ನು ಮದುವೆಯೇ ಆಗದೇ ಇರುವುದು ಚರ್ಚೆಗೆ ಒಳಗಾಗುವ ಮತ್ತೊಂದು ವಿಷಯ. ಒಟ್ಟಿನಲ್ಲಿ ಪ್ರೀತಿ ಅನ್ನೋದು ಒಂದು ಸಾರಿ ಶುರುವಾದ್ರೆ ಮನಸ್ಸಿನಿಂದ ದೂರ ಅಂತು ಆಗುವುದಿಲ್ಲ.