ಮಳೆ ಪ್ರವಾಹ ಬಂದಾಗ ರಸ್ತೆಯ ತುಂಬೆಲ್ಲ ನೀರು ನದಿಯಂತೆ ಹರಿಯುವುದು, ಅವಾಂತರ ಸೃಷ್ಟಿಸುವುದನ್ನು ನೀವು ಕಂಡಿರಬಹುದು. ಆದರೆ ನಡು ರಸ್ತೆಯಲ್ಲಿ ರೆಡ್ ವೈನ್ ನದಿಯಂತೆ ಹರಿಯುವುದನ್ನು ಕಂಡಿದ್ದೀರಾ?. ಮಧ್ಯ ಪ್ರಿಯರು ಬಲುವಾಗಿ ಇಷ್ಟ ಪಡುವ ಈ ರೆಡ್ ವೈನ್ ರಸ್ತೆಯಲ್ಲಿ ಹರಿಯಲು ಕಾರಣವೇನು?, ಈ ಘಟನೆ ನಡೆದದ್ದು ಎಲ್ಲಿ? ಎಂಬೆಲ್ಲ ಪ್ರಶ್ನೆಗೆ ಉತ್ತರ ಈ ವೈರಲ್ ವಿಡಿಯೋದಲ್ಲಿದೆ.
ಕಳೆದ ಭಾನುವಾರ ಪೋರ್ಚುಗಲ್ನ ಸಾವೊ ಲೌರೆಂಕೊ ಡಿ ಬಾರೊ ಸಣ್ಣ ಪಟ್ಟಣದ ಜನ ಕೆಲ ಹೊತ್ತು ಭೀತಿಗೆ ಒಳಗಾಗಿದ್ದರು ಜೊತೆಗೆ ಆಶ್ಚರ್ಯವೂ ಕಾದಿತ್ತು. ನಗರದ ರಸ್ತೆ ತುಂಬೆಲ್ಲಾ ರಕ್ತದ ಬಣ್ಣವನ್ನು ಹೋಲುವ ಹೊಳೆಯೇ ಹರಿದಂತೆ ಭಾಸವಾಗಿತ್ತು ಇದನ್ನು ಕಂಡ ಅಲ್ಲಿಯ ಜನ ಒಂದು ಕ್ಷಣ ಭೀತಿಗೊಳಗಾಗಿದ್ದೂ ಹೌದು ಬಳಿಕ ಗೊತ್ತಯಿತು ಇದು ರಕ್ತವಲ್ಲ ರೆಡ್ ವೈನ್ ಎಂದು.
20 ಲಕ್ಷ ಲೀಟರ್ ರೆಡ್ ವೈನ್ ಸಾಗಿಸುವ ಬ್ಯಾರೆಲ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ನಗರದ ಪ್ರಮುಖ ರಸ್ತೆಗಳ ತುಂಬೆಲ್ಲಾ ರೆಡ್ ವೈನ್ ಹೊಳೆಯಂತೆ ಹರಿದಿದೆ ಹಾಗಾಗಿ ಮೊದಲು ಜನರಿಗೆ ಕೆಂಪು ಬಣ್ಣದ ನೀರು ಕಂಡು ಗಾಬರಿಗೊಂಡ ಜನಕ್ಕೆ ಬಳಿಕ ಇದು ರೆಡ್ ವೈನ್ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಲಕ್ಷಾಂತರ ಲೀಟರ್ ರೆಡ್ ವೈನ್ ಪೋಲಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.