ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಆಂಟೋನಿ ತಟ್ಟಿಲ್ ಅವರ ಜೊತೆ ಮದುವೆಯಾಗಿ ಸುದ್ದಿಯಾದರು. ಇವರ ಮದುವೆ ಫೋಟೋ ಎಲ್ಲವೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ಹೀರೋಯಿನ್. ಇವರ ಕುಟುಂಬ ಸಹ ಚಿತ್ರರಂಗದ ಜೊತೆಯಲ್ಲೇ ಗುರುತಿಸಿಕೊಂಡಿದೆ ಎಂದು ಹೇಳಿದರೂ ತಪ್ಪಲ್ಲ. ಕೀರ್ತಿ ಸುರೇಶ್ ಅವರು ಮಾತ್ರವಲ್ಲ, ಅವರ ತಾಯಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಟಿ. ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿದ್ದಾರೆ, ಅದು ಡಾ. ರಾಜ್ ಕುಮಾರ್ ಅವರ ಜೊತೆಗೆ ಒಂದು ಸಿನಿಮಾ ಮಾಡಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಕೀರ್ತಿ ಸುರೇಶ್ ಅವರ ತಾಯಿ ಯಾರು? ಅವರು ಯಾವ ಸಿನಿಮಾದಲ್ಲಿ ನಟಿಸಿದ್ದಾರೆ? ಫುಲ್ ಡೀಟೇಲ್ಸ್ ಇಲ್ಲಿದೆ.

ನಟಿ ಕೀರ್ತಿ ಸುರೇಶ್ ಅವರ ಕುಟುಂಬ ಚಿತ್ರರಂಗದಲ್ಲಿ ಗುರುತಿಸಿಕೊಂಡಿದೆ. ಕೀರ್ತಿ ಅವರ ತಂದೆ ಸುರೇಶ್, ಇವರು ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರು. ಮಲಯಾಳಂ ಸ್ಟಾರ್ ಹೀರೋಗಳ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.. ಇನ್ನು ಕೀರ್ತಿ ಸುರೇಶ್ ಅವರ ತಾಯಿಯ ಹೆಸರು ಮೇನಕಾ. ಇವರು ಸಹ ನಾಯಕಿಯಾಗಿ ಗುರುತಿಸಿಕೊಂಡವರು. ಕೀರ್ತಿ ಸುರೇಶ್ ಅವರ ತಾಯಿ ತಮಿಳು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಗುರುತಿಸಿಕೊಂಡವರು. 80ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಮೇನಕಾ ಅವರು ನಟಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸಹ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ದಕ್ಷಿಣದ ಬಹುತೇಕ ಸ್ಟಾರ್ ಗಳ ಜೊತೆಗೆ ನಟಿಸಿರುವ ಮೇನಕಾ ಅವರು ಡಾ. ರಾಜ್ ಕುಮಾರ್ ಅವರ ಜೊತೆಗೆ ಕೂಡ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

ಹೌದು, ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಅವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಸಿನಿಮಾ, ಅದು ಡಾ. ರಾಜ್ ಕುಮಾರ್ ಅವರ ಜೊತೆಗೆ. ಆ ಸಿನಿಮಾ ಮತ್ಯಾವುದು ಅಲ್ಲ. ದೊರೈ ಭಗವಾನ್ ಅವರ ನಿರ್ಮಾಣದಲ್ಲಿ ಮೂಡಿಬಂದ ಸಮಯದ ಗೊಂಬೆ. ಈ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ರೂಪಿಣಿ ಅವರು ನಾಯಕಿ ಆಗಿದ್ದಾರೆ, ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಅವರು ರಾಜ್ ಕುಮಾರ್ ಅವರ ತಂಗಿ ಪಾತ್ರದಲ್ಲಿ, ಶ್ರೀನಾಥ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಡಾ. ರಾಜ್ ಕುಮಾರ್ ಅವರ ಮುದ್ದಿನ ತಂಗಿಯ ಪಾತ್ರವಿದು. ಮೇನಕಾ ಅವರು ಅಣ್ಣಾವ್ರ ತಂಗಿಯಾಗಿ ಈ ಸಿನಿಮಾದಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಾರೆ. ನೀವು ಸಹ ಈ ಸಿನಿಮಾವನ್ನು ನೋಡಿರುತ್ತೀರಿ. ಈ ಸಿನಿಮಾದ ಕೋಗಿಲೆ ಹಾಡಿದೆ ಕೇಳಿದೆಯಾ ಹಾಡು ತುಂಬಾ ಫೇಮಸ್.
ಮೇನಕಾ ಅವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಸಿನಿಮಾ ಆಗಿದ್ದರು ಸಹ, ಇದು ಸದಾ ಕಾಲ ನೆನಪಲ್ಲಿ ಉಳಿಯುವ ಸಿನಿಮಾ ಆಗಿದೆ. ಹಾಗಾಗಿ ಜನರಿಗೆ ಇವರ ಹೆಸರಿನ ಪರಿಚಯ ಇಲ್ಲದೆ ಇರಬಹುದು, ಆದರೆ ಇವರನ್ನು ಮರೆಯಲು ಸಾಧ್ಯವಿಲ್ಲ. ಡಾ. ರಾಜ್ ಕುಮಾರ್ ಅವರ ಜೊತೆಗೆ ಎಂದಿಗೂ ಮರೆಯದ ಪಾತ್ರವಿದು. ಇನ್ನು ಮೇನಕಾ ಅವರ ಬಗ್ಗೆ ನಿರ್ದೇಶಕ ದೊರೈ ಭಗವಾನ್ ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದರು, ಅವರು ಹೇಳಿದ್ದು ಏನು ಎಂದರೆ, ಮೇನಕಾ ಅವರನ್ನು ಡಾ. ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದಕ್ಕೆ ಬಹಳ ಖುಷಿಯಿಂದ ಬೆಂಗಳೂರಿಗೆ ಬಂದು ಅಭಿನಯಿಸಿದರಂತೆ. ಡಾ. ರಾಜ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಎಂದರೆ, ಎಲ್ಲಾ ಭಾಷೆಯ ಕಲಾವಿದರು ಅಷ್ಟು ಸಂತೋಷದಿಂದ ಬರುತ್ತಿದ್ದರು..

ಅಣ್ಣಾವ್ರಿಗೆ ಇದ್ದ ಪ್ರೀತಿ ಗೌರವ ಅದು. ಕೀರ್ತಿ ಸುರೇಶ್ ಅವರ ತಾಯಿ ಹೀಗೆ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಕೀರ್ತಿ ಸುರೇಶ್ ಅವರು ಇನ್ನು ಕೂಡ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಹಿಂದೊಮ್ಮೆ ಕನ್ನಡದಲ್ಲಿ ಯಾವ ನಟನ ಜೊತೆಗೆ ಅಭಿನಯಿಸಲು ಇಷ್ಟಪಡುತ್ತೀರಿ ಎಂದು ಅಭಿಮಾನಿ ಒಬ್ಬರು ಕೇಳಿದ್ದಕ್ಕೆ, ಪುನೀತ್ ಸರ್ ಅಂದ್ರೆ ಇಷ್ಟ ಎಂದು ಕೀರ್ತಿ ಹೇಳಿದ್ದರು. ಈಗ ಅಪ್ಪು ಸರ್ ನಮ್ಮ ಜೊತೆಗೆ ಇಲ್ಲ. ಮುಂದಿನ ದಿನಗಳಲ್ಲಿ ಕೀರ್ತಿ ಸುರೇಶ್ ಅವರು ಯಾವ ಕನ್ನಡ ನಟನ ಜೊತೆಗೆ ಅಭಿನಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಮದುವೆಯ ಮಂತರ ಸಹ ಕೀರ್ತಿ ಸುರೇಶ್ ಅವರು ನಟನೆ ಇಂದ ಬ್ರೇಕ್ ತೆಗೆದುಕೊಂಡಿಲ್ಲ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.