ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಗಿದ್ದೇ ಆಗಿದ್ದು ರಿಷಬ್ ಶೆಟ್ಟಿಕೂಡಾ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಿಷಬ್ ಎಲ್ಲಿ ಹೋದರೂ ಸಿನಿಮಾಭಿಮಾನಿಗಳು ಅವರನ್ನು ಗುರುತಿಸಿ ಮಾತನಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ನಿಮ್ಮ ಮುಂದಿನ ಸಿನಿಮಾದಲ್ಲಿ ನನಗೂ ಚಾನ್ಸ್ ಕೊಡಿ ಎನ್ನುಷ್ಟರ ಮಟ್ಟಿಗೆ ರಿಷಬ್ ಖ್ಯಾತಿ ಗಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲಿ ಕೂಡಾ ರಿಷಬ್ಗೆ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದ್ದಾರೆ. ಕಾಂತಾರ ಸಿನಿಮಾ ನೋಡಿದವರು ಪ್ರೀಕ್ವೆಲ್ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರಂತೂ ಸಾಕಷ್ಟು ಕುತೂಹಲ ಕೆರಳಿಸಿದ್ದು ಸಿನಿಮಾ ನೋಡಲು ಎಕ್ಸೈಟ್ ಆಗಿದ್ದಾರೆ.
ಈ ನಡುವೆ ರಿಷಬ್ ಶೆಟ್ಟಿ ತೇಜಾ ಸಜ್ಜಾ ನಟಿಸಿರುವ ಜೈ ಹನುಮಾನ್ ತೆಲುಗು ಸಿನಿಮಾ ಪ್ರೀಕ್ವೆಲ್ನಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಅವರು ಛತ್ರಪತಿ ಶಿವಾಜಿ ಮಹಾರಾಜ್ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಹೊಸ ಸುದ್ದಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಬರಲಿದೆ ಎಂದು ಇದಕ್ಕೂ ಮುನ್ನ ಹೇಳಲಾಗಿತ್ತು. ಆದರೆ ಈ ಸಿನಿಮಾ ಯಾವಾಗ ಶುರುವಾಗಲಿದೆ? ಚಿತ್ರದಲ್ಲಿ ಶಿವಾಜಿ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ? ಎಂಬ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಸ್ವತಃ ಚಿತ್ರತಂಡ ಈ ವಿಚಾರವನ್ನು ರಿವೀಲ್ ಮಾಡಲಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ರಿಷಬ್ ಶೆಟ್ಟಿ ಕೂಡಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ಶಿವಾಜಿ ಮಹಾರಾಜ್ ಅವರಂಥ ಪರಾಕ್ರಮಿಯ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸಲು ಬಹಳ ಹೆಮ್ಮೆಯಾಗುತ್ತಿದೆ. ಈ ರೀತಿಯ ಪ್ರಾಜೆಕ್ಟ್ನಲ್ಲಿ ನಟಿಸಲು ನನಗೆ ಗೌರವ ಮತ್ತು ಹೆಮ್ಮೆ ಇದೆ. ಇದು ಬರೀ ಸಿನಿಮಾ ಅಲ್ಲ. ಎದುರಾಳಿಗಳ ವಿರುದ್ಧ ಹೋರಾಡಿದ ಪರಾಕ್ರಮಿಯ ಇತಿಹಾಸ. ಅಂತಹ ಯೋಧನ ಇತಿಹಾಸವನ್ನು ಸಿನಿಮಾವಾಗಿ ತರುತ್ತಿರುವುದು ಬಹಳ ಖುಷಿಯ ವಿಚಾರ. ಈ ಸಾಹಸ ನಾಟಕಕ್ಕೆ ಸಿದ್ಧರಾಗಿ. ಅದ್ಭುತ ಸಿನಿಮೀಯ ಅನುಭವಕ್ಕಾಗಿ ಮಾತ್ರವಲ್ಲ, ಛತ್ರಪತಿ ಶಿವಾಜಿಯ ಬಗ್ಗೆ ಇದುವರೆಗೆ ತಿಳಿದಿಲ್ಲದ ಕಥೆಗಳನ್ನು ತಿಳಿದುಕೊಳ್ಳಲು ಸಿದ್ಧರಾಗಿ 21 ಜನವರಿ 2027 ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ ಎಂದು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರವನ್ನು ಸಂದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಇದಕ್ಕೂ ಮುನ್ನ ಸಫೇದ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅಲಿಘಡ್, ಸರ್ಬಜಿತ್, ಭೂಮಿ, ಪಿಎಂ ನರೇಂದ್ರ ಮೋದಿ, ಜೌಂದ್, ಮೇ ಅಟಲ್ ಹೂ, ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ರೌಡಿ ರಾಥೋರ್, ಮೇರಿ ಕೋಮ್, ಗಬ್ಬರ್ ಇಸ್ ಬ್ಯಾಕ್ ಸಿನಿಮಾಗಳಿಗೆ ಸಹ ನಿರ್ಮಾಣ ಮಾಡಿದ್ಧಾರೆ. ರಿಷಬ್ ಶೆಟ್ಟಿ ಈಗ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾ ಕಾಂತಾರ ಚಿತ್ರದಂತೆ ದೊಡ್ಡ ಹಿಟ್ ಆಗಲಿ ಎಂದು ಅಭಿಮಾನಿಗಳು, ಸಿನಿ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿಗೆ ವಿಶ್ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಚಿತ್ರದ ನಿರ್ಮಾಣ, ತಾಂತ್ರಿಕ ವರ್ಗ, ಸಹ ಕಲಾವಿದರು ಹಾಗೂ ಇನ್ನಿತರ ಮಾಹಿತಿ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.



