ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಸಿನಿರಂಗದ ಟಾಪ್ ನಾಯಕಿ. ರಶ್ಮಿಕಾ ಕನ್ನಡ ಮಾತ್ರವಲ್ಲದೆ ಹಲವು ಸಿನಿಮಾ ರಂಗದಲ್ಲಿ ಸಾಲು ಸಾಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ವಿವಾದಗಳೂ ಕೂಡ ರಶ್ಮಿಕಾ ಅವರಿಂದ ದೂರವಿಲ್ಲ. ಈ ಹಿಂದೆ ವಿಜಯ ದೇವರಕೊಂಡ ಅವರೊಂದಿಗೆ ಲಿಪ್ ಲಾಕ್ ನಡೆಸಿ ಸುದ್ದಿಯಾಗಿದ್ದ ರಶ್ಮಿಕಾ ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಸದ್ಯ, ಈ ಹಸಿಬಿಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆಲಿಯಾ ಭಟ್ ಪತಿ, ರಣ್ಬೀರ್ ಕಪೂರ್ ಜೊತೆ ‘ಪುಷ್ಪ’ ನಟಿ ಲಿಪ್ ಲಾಕ್ ಮಾಡಿದ್ದ ಫೋಟೋಗಳು ನಿನ್ನೆಯಷ್ಟೇ ವೈರಲ್ ಆಗಿದ್ದವು. ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ಗೆ ರಶ್ಮಿಕಾ ಜೊತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಟ್ರೈಲರ್ ಮೂಲಕ ‘ಅನಿಮಲ್’ ಚಿತ್ರದ ತುಣುಕು ಗಮನ ಸೆಳೆದಿತ್ತು. ಈಗ ಚಿತ್ರದ ಪೋಸ್ಟರ್ನಲ್ಲಿ ಹಸಿ ಬಿಸಿ ದೃಶ್ಯದ ಫೋಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.
ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿ ಬೋಲ್ಡ್ ಆಗಿಯೇ ಲಿಪ್ ಲಾಕ್ ಮಾಡಿದ್ದರು. ಈಗ ರಣ್ಬೀರ್ ಜೊತೆ ಚುಂಬನದ ದೃಶ್ಯದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯ ವೈರಲ್ ಆಗಿರುವ ಫೋಟೋಗಳು ಬಿಡುಗಡೆಗೆ ಸಜ್ಜಾಗಿರುವ ಹಿಂದಿಯ ‘ಅನಿಮಲ್’ ಚಿತ್ರದ್ದು ಎನ್ನಲಾಗುತ್ತಿದೆ. ವೈರಲ್ ಫೋಟೋಗಳನ್ನು ಕಂಡು ನೆಟ್ಟಿಗರು ತರಹೆವಾರಿ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.