ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿರುವವರು ನಟಿ ರಶ್ಮಿಕಾ ಮಂದಣ್ಣ. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಇಂದು ರಶ್ಮಿಕಾ ಮಂದಣ್ಣ ದೊಡ್ಡ ಸ್ಟಾರ್ ಆಗಿದ್ದಾರೆ, ಸ್ಟಾರ್ ಹೀರೋಗಳ ಸಿನಿಮಾಗಳಲ್ಲೇ ನಟಿಸುತ್ತಾರೆ. ಆದರೆ ಅಂದು ರಶ್ಮಿಕಾ ಅವರು ಓದುತ್ತಿದ್ದಾಗ, ಸ್ಟಾರ್ ಅಗಿಲ್ಲದೆ ಇದ್ದ ಸಮಯದಲ್ಲಿ ಅವರ ರೂಮ್ ಮೇಟ್ ಆಗಿದ್ದವರು ಇಂದು ಬಿಗ್ ಬಾಸ್ ತೆಲುಗು ನಲ್ಲಿ ಸ್ಪರ್ಧಿಯಾಗಿ ಹೋಗಿದ್ದಾರೆ. ನಿರೂಪಕ ನಾಗಾರ್ಜುನ ಅವರೊಡನೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಈಗ ಕನ್ನಡದಲ್ಲಿ ಸಿನಿಮಾ ಮಾಡುವುದೇ ಇಲ್ಲ, ಕನ್ನಡದಲ್ಲಿ ಇವರು ನಟಿಸಿದ ಕೊನೆಯ ಸಿನಿಮಾ ಪೊಗರು. ಅದಾದ ಬಳಿಕ ರಶ್ಮಿಕಾ ಅವರು ಇನ್ಯಾವುದೆ ಹೊಸ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ. ಕನ್ನಡ ಸಿನಿಮಾ ಇಂದ ದೂರವೇ ಉಳಿದು ಬಿಟ್ಟಿದ್ದಾರೆ ಎಂದರೂ ತಪ್ಪಲ್ಲ. ಪ್ರಸ್ತುತ ಇವರು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲೇ ಬ್ಯುಸಿ ಇದ್ದು, ಬಿಡುವಿಲ್ಲದೆ ಇದ್ದಾರೆ. ರಶ್ಮಿಕಾ ಅವರು ಒಂದಾದ ನಂತರ ಮತ್ತೊಂದು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಗೆ ತೆಲುಗಿನಲ್ಲಿ ಭಾರಿ ಪಾಪ್ಯುಲಾರಿಟಿ ಇದೆ.

ಆದರೆ ರಶ್ಮಿಕಾ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಕರ್ನಾಟಕದ ಕೊಡಗಿನಲ್ಲಿ ಎನ್ನುವ ವಿಚಾರವನ್ನು ಮರೆಯುವಂತಿಲ್ಲ. ಹುಟ್ಟಿದ್ದು ಕೊಡಗಿನಲ್ಲಿ ಓದಿದ್ದು ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ. ರಶ್ಮಿಕಾ ಓದುವಾಗಲೇ ಮಾಡೆಲಿಂಗ್ ಸಹ ಮಾಡುತ್ತಿದ್ದರು ಎನ್ನುವ ವಿಷಯವನ್ನು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಆಗಿನ ಸಮಯದಲ್ಲಿ ಇವರ ರೂಮ್ ಮೇಟ್ ಆಗಿದ್ದವರು ನಟಿ ಪ್ರೇರಣಾ ಕಂಬಮ್. ಹೌದು, ಸ್ವತಃ ಪ್ರೇರಣಾ ಅವರೇ ಈ ವಿಷಯವನ್ನು ತಿಳಿಸಿದ್ದಾರೆ. ನಾಗಾರ್ಜುನ ಅವರ ಜೊತೆಗೆ ಈ ವಿಚಾರ ಹಂಚಿಕೊಂಡಿದ್ದಾರೆ.
ಹಾಗೆಯೇ ರಶ್ಮಿಕಾ ಅವರ ಬೆಳವಣಿಗೆ ನೋಡಿದರೆ ತುಂಬಾ ಖುಷಿಯಾಗುತ್ತದೆ ಎಂದು ಕೂಡ ಹೇಳಿದ್ದಾರೆ. ಇನ್ನು ಪ್ರೇರಣಾ ಅವರು ಕನ್ನಡದಲ್ಲಿ ಕೆಲವು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಎರಡು ಕಡೆ ನಟಿಸಿದ್ದಾರೆ. ಹಾಗೆಯೇ ಕೆಲವು ತೆಲುಗು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗಿನಲ್ಲಿ ಕೂಡ ಇವರಿಗೆ ಜನಪ್ರಿಯತೆ ಇರುವ ಕಾರಣ ತೆಲುಗು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ತೆಲುಗಿನಲ್ಲಿ ಚೆನ್ನಾಗಿ ಆಟ ಆಡುತ್ತಿದ್ದಾರೆ. ಇವರು ಶ್ರೀಪಾದ್ ದೇಶಪಾಂಡೆ ಎನ್ನುವವರನ್ನು ಪ್ರೀತಿಸಿ, ಅವರೊಡನೆ ಮದುವೆಯಾಗಿದ್ದಾರೆ. ಸಂತೋಷದ ದಾಂಪತ್ಯ ಜೀವನ ಇವರದ್ದು.
ಇನ್ನು ತೆಲುಗು ಬಿಗ್ ಬಾಸ್ ನಲ್ಲಿ ಕನ್ನಡಿಗರ ಹವಾ ಪ್ರತಿ ಸೀಸನ್ ನಲ್ಲಿ ಇದ್ದೇ ಇರುತ್ತದೆ. ಅದೇ ರೀತಿ ಈ ಸೀಸನ್ ನಲ್ಲಿ ಕೂಡ 4 ಜನ ಕನ್ನಡಿಗರು ತೆಲುಗು ಬಿಗ್ ಬಾಸ್ ನಲ್ಲಿದ್ದು, ತೆಲುಗು ಶೋ ಒಂದರಲ್ಲಿ ಅವರ ಕನ್ನಡ ಕೇಳುವುದಕ್ಕೆ ಸಂತೋಷ ಆಗುತ್ತದೆ ಎಂದರೆ ತಪ್ಪಲ್ಲ. ಮೊದಲು ಜ್ಯೂನಿಯರ್ ಎನ್ಟಿಆರ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗ, ಒಂದೆರಡು ಬಾರಿ ಕನ್ನಡಿಗರ ಜೊತೆಗೆ ಕನ್ನಡದಲ್ಲಿ ಮಾತನಾಡಿದ್ದರು. ಆದರೆ ನಾಗಾರ್ಜುನ ಅವರಿಗೆ ಕನ್ನಡ ಬರುವುದಿಲ್ಲ. ಆದರೆ ನಾಗಾರ್ಜುನ ಅವರಿಗೂ ಕನ್ನಡದ ಬಗ್ಗೆ ಪ್ರೀತಿ ಗೌರವ ಇದೆ. ಈ ವರ್ಷದ ತೆಲುಗು ಬಿಗ್ ಬಾಸ್ ನಲ್ಲಿ ಪ್ರೇರಣಾ ಅವರು ಗೆದ್ದು ಬರಲಿ ಎಂದು ಕನ್ನಡ ವೀಕ್ಷಕರು ಬಯಸಿದ್ದಾರೆ, ಕನ್ನಡದವರು ಪ್ರೇರಣಾ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.