ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ. ಇದರ ಮಧ್ಯೆ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರ ಮದುವೆ ವಿಚಾರವು ಭಾರಿ ಗಮನ ಸೆಳೆದಿದೆ. 14ನೇ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಸಹ ಭಾಗಿಯಾಗಿದ್ದರು. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಬಿಜಿಎಸ್ ಉತ್ಸವ 2022 ನಡೆಯಿತು.

ಚಿತ್ರನಟಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ರಮ್ಯಾ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಸ್ಟೂಡೆಂಟ್ ಇಬ್ಬರು ಕೇಳಿದ ಮದುವೆ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರ ಸದ್ಯ ವೈರಲ್ ಆಗುತ್ತಿದೆ. ಕಾರ್ಯಕ್ರಮವೊಂದರಲ್ಲಿ ರಮ್ಯಾ ಅಭಿಮಾನಿ ನಿಮ್ಮ ಮದುವೆ ಯಾವಾಗ ಎಂದಿದ್ದಾರೆ. ಅದಕ್ಕೆ ರಮ್ಯಾ ಮದುವಾ ಆಗಬೇಕಾ ಎಂದಿದ್ದಾರೆ. ಆಗ ಅಭಿಮಾನಿ ಮದುವೆ ಆಗಬೇಡಿ ಮೇಡಂ ಎಂದಿದ್ದಾರೆ.
ಮುಗುಳ್ನಕ್ಕ ರಮ್ಯಾ, ಮದುವೆ ಆಗಬಾರದು ತಾನೆ.. ಯೆಸ್ ಆಗಲ್ಲಾ. ಹ್ಯಾಪಿ ಆಗಿರೋದು ಅಥವಾ ಮದುವೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅದಕ್ಕೆ ನಾನು ಸಂತೋಷವಾಗಿರುವುದನ್ನೆ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ. ರಮ್ಯಾ ಮದುವೆ ಬಗ್ಗೆ ಹೇಳಿದ ಈ ಮಾತುಗಳು ವೈರಲ್ ಆಗುತ್ತಿವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಈ ವಿಡಿಯೋ ಟ್ರೆಂಡಿಂಗ್ ಆಗುತ್ತಿದೆ. ಮದುವೆ ಏಕೆ ಆಗಬೇಕು. ನೀವು ಹ್ಯಾಪಿಯಾಗಿರಬೇಕಾ? ಮದುವೆ ಆಗಿರಬೇಕಾ? ನನಗೆ ಸಂತೋಷವಾಗಿರುವುದು ಮುಖ್ಯ.
ನಾನು ಮದುವೆ ಆಗಲ್ಲ ಎಂದಿದ್ದಾರೆ ರಮ್ಯಾ. ಮಹಿಳೆಯರು ಆರ್ಥಿಕವಾಗಿ ಸಬಲರಾಗಿರುವುದು ಮುಖ್ಯ. ಶಿಕ್ಷಣ ತುಂಬಾ ಮುಖ್ಯ. ನಿಮಗೆ ಇಷ್ಟ ಆದ್ರೆ ಮಾತ್ರ ಮದುವೆ ಆಗಿ. ಬೇರೆಯವರ ಒತ್ತಾಯಕ್ಕೆ ಯಾವತ್ತೂ ಮದುವೆ ಆಗಬಾರದು ಎಂದು ರಮ್ಯಾ ಹೇಳಿದ್ದಾರೆ. ನನಗೆ ನನ್ನ ಸೋಲ್ ಮೇಟ್ ಅನ್ನೋ ತರ ಹುಡುಗ ಸಿಕ್ಕಿಲ್ಲ. ಸಿಕ್ಕರೆ ಖಂಡಿತವಾಗಿಯೂ ಮದುವೆ ಆಗ್ತೇನೆ. ಉತ್ತರಕಾಂಡ ನನ್ನ ಮುಂದಿನ ಚಿತ್ರ ಶೂಟಿಂಗ್ ಆರಂಭಿಸಿದ್ದೀವಿ. ಟೀಸರ್ ಬಿಡುಗಡೆ ಮಾಡಿದ್ದೀವಿ ಎಂದು ಮೋಹಕ ತಾರೆ ಹೇಳಿದ್ದಾರೆ.