ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳು ಮಾನವೀಯತೆಯನ್ನು ಮರೆತು ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಕ್ಕ-ಬುಕ್ಕರಂತಿದ್ದ ಅಶ್ವಿನಿ ಗೌಡ ಮತ್ತು ಜಾನ್ವಿ ಇಬ್ಬರು ಒಬ್ಬರಿಗೊಬ್ಬರು ಎಂಬಂತೆ ಜೊತೆಯಾಗಿ ಇರುತ್ತಿದ್ದರು. ನಂತರ ಟಾಸ್ಕ್ ಒಂದರಲ್ಲಿ ನಡೆದ ವಾದ ವಿವಾದಗಳಿಂದ ಇವರಿಬ್ಬರ ನಡುವಿನ ಗೆಳೆತನ ಕಟ್ಟಾಗಿ ಅಶ್ವಿನಿ ಗೌಡ ಇದೀಗ ಹೊಸದೊಂದು ಗುಂಪನ್ನು ರಚಿಸಿಕೊಂಡಿದ್ದಾರೆ.
ಜಾನ್ವಿ ಜಾಗದಲ್ಲಿ ಇದೀಗ ರಾಶಿಕ ಸೇರ್ಪಡೆಯಾಗಿದ್ದಾಳೆ. ಬಿಗ್ ಬಾಸ್ ಅಲ್ಲಿನ ಸ್ಪರ್ಧಿಗಳಿಗೆ ಒಂದು ಟಾಸ್ಕನ್ನು ನೀಡಿರುತ್ತಾರೆ ಅದು ಕಬ್ಬಡಿ ಟಾಸ್ಕ್ ಅದರ ಪ್ರಕಾರ ರೈಡರ್ ಆಗಿ ಎದುರಾಳಿ ತಂಡದವರಿಂದ ಕಾಯಿನ್ ಗಳನ್ನು ತೆಗೆದುಕೊಂಡು ಹೋಗಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ರಕ್ಷಿತಾ ಶೆಟ್ಟಿಯ ಬಟ್ಟೆಯನ್ನ ಎಳೆಯಲು ಸ್ಪಂದನ ಮತ್ತು ರಾಶಿಕ ಪ್ರಯತ್ನಿಸುತ್ತಾರೆ, ಅಂತಹ ಸಂದರ್ಭದಲ್ಲಿ ಕ್ಯಾಪ್ಟನ್ ಆಗಿರುವ ರಘು ಅವರು ಈ ಆಟವನ್ನು ಸ್ಟಾಪ್ ಮಾಡಿ ಎಂದು ಎಷ್ಟೇ ಹೇಳಿದರೂ ಕೂಡ ಅದನ್ನು ನಿಲ್ಲಿಸುವುದೇ ಇಲ್ಲ. ಈ ಆಟಕ್ಕೆ ಯಾವುದೇ ರೀತಿಯ ಅಂಕಗಳನ್ನು ನೀಡುವುದಿಲ್ಲ ಎಂದು ಹೇಳಿದರು ಕೂಡ ಅದೇ ರೀತಿಯ ವರ್ತನೆಯನ್ನು ಇಬ್ಬರೂ ಕೂಡ ಮುಂದುವರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಎಲ್ಲರೂ ಕೂಡ ಸುಮ್ಮನಿರುತ್ತಾರೆ ಆದರೆ ನಮ್ಮ ಗಿಲ್ಲಿ ನಟ ಸ್ವತಃ ತಮ್ಮ ತಂಡವೇ ಗೆಲ್ಲುವುದರಲ್ಲಿ ಇದ್ದರೂ ಕೂಡ ಎದುರಾಳಿ ತಂಡದ ರಕ್ಷಿತಾಳ ಪರವಾಗಿ ಸ್ಟ್ಯಾಂಡ್ ತಗೋತಾರೆ. ಗಿಲ್ಲಿಯ ಈ ನಡವಳಿಕೆಗೆ ಒಂದು ಬಿಗ್ ಸಲ್ಯೂಟ್ ಕೊಡಲೇಬೇಕು.

ನೀನು ಹೆಣ್ಣಾಗಿದ್ದರೆ ನಿನಗೂ ಕೂಡ ಅಲ್ಲಿ ಏನಾಗಿದೆ ಎಂದು ನಿನಗೆ ಅರ್ಥ ಆಗುತ್ತಿತ್ತು ಎಂದು ಗಿಲ್ಲಿ ಹೇಳುತ್ತಾರೆ. ಆಗ ಅಶ್ವಿನಿ ಇಲ್ಲಿರುವ ನಾವೆಲ್ಲರೂ ಕೂಡ ಹೆಣ್ಣೆ ಅಲ್ವಾ ಅವರ ಫೇವರ್ ಆಗಿ ಮಾತಾಡ್ತಿಯಲ್ಲ ನೀನು ನಮ್ಮ ಟೀಮನ್ನ ಬಿಟ್ಟು ಎದುರಾಳಿ ಟೀಮಿನಲ್ಲಿ ಕಾವ್ಯ ಇರುವುದರಿಂದ ಆ ಟೀಮ್ ನವರ ಪರವಾಗಿ ಮಾತನಾಡುತ್ತೀಯಾ ಎಂದು ಅಶ್ವಿನಿ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಾಳೆ. ಆಗ ಗಿಲ್ಲಿ ಕೋಪಗೊಂಡು ನೀನು ಬೇಡ ನಿಮ್ಮ ಟೀಮು ಬೇಡ ಎಂದು ಎದ್ದು ಹೋಗುತ್ತಾರೆ. ಗಿಲ್ಲಿಯ ಈ ನಡೆಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಲೇಬೇಕು. ಹೆಣ್ಣು ಮಕ್ಕಳೇ ಒಬ್ಬ ಹೆಣ್ಣು ಮಗಳ ವಿರುದ್ಧವಾಗಿ ಅಸಹ್ಯ ರೀತಿಯಲ್ಲಿ ನಡೆದುಕೊಳ್ಳುವಾಗ ನ್ಯಾಯದ ಪರ ರಕ್ಷಿತಾಳಿಗೆ ಬೆಂಬಲವಾಗಿ ನಿಂತು ಗಿಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಎಲ್ಲರೂ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಾರೆ ಆದರೆ ನಮ್ಮ ಗಿಲ್ಲಿ ನಟ ಮಾತ್ರ ಮಾನ್ವಿಯತೆಯನ್ನು ಉಳಿಸಿಕೊಂಡು ಆಟವಾಡುವ ಏಕೈಕ ವ್ಯಕ್ತಿ.

ಹೆಣ್ಣಿನ ಬಟ್ಟೆಯನ್ನು ಎಳೆದು ಅವಮಾನ ಮಾಡಿ ಆಟ ಗೆಲ್ಲುವ ಅವಶ್ಯಕತೆ ಇಲ್ಲ ಎಂದು ತನ್ನ ಟೀಮ್ ವಿರುದ್ಧವೇ ತಿರುಗಿಬಿದ್ದಂತ ಗಿಲ್ಲಿಯ ನಡೆ ಮೆಚ್ಚುವಂತದ್ದು. ಮೊದಲು ಹೆಣ್ಣಿಗೆ ಗೌರವವನ್ನು ಕೊಡಿ ಗೌರವವನ್ನು ಕೊಡದೆ ಬಟ್ಟೆಯನ್ನು ಎಳೆದು ಗೆಲ್ಲುವ ಗೆಲುವು ನಮಗೆ ಬೇಡ. ರಾಶಿಕಾ ಅವಳು ಕೂಡ ಒಬ್ಬ ಹೆಣ್ಣಾಗಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾಳೆ. ಜೊತೆಗೆ ರಾಶಿಕಾ ಬ್ರೇಕಪ್ ಆದಮೇಲೆ ಇವರಿಬ್ಬರೂ ಒಂದು ತಿಂಗಳಾದರೂ ಕೂಡ ಇನ್ನ ಚೆನ್ನಾಗಿದ್ದಾರೆ ಎಂದು ಕಾವ್ಯ ಮತ್ತು ಗಿಲ್ಲಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾಳೆ. ಗಿಲ್ಲಿ ಮತ್ತು ಕಾವ್ಯ ಳ ಜೊತೆಯಲ್ಲಿ ಚೆನ್ನಾಗಿ ಇರುವಂತಹ ರಕ್ಷಿತಾಳನ್ನು ಕೂಡ ರಾಶಿಕ ಟಾರ್ಗೆಟ್ ಮಾಡಿಕೊಂಡಿದ್ದಾಳೆ ಇದಕ್ಕೆ ಅಶ್ವಿನಿ ತುಪ್ಪ ಸುರಿಯುತ್ತಿದ್ದಾಳೆ. ಅಶ್ವಿನಿಗೂ ಕೂಡ ಇದೇ ರೀತಿ ಬಟ್ಟೆಯನ್ನು ಎಳೆದು ಅವಮಾನ ಮಾಡಿದ್ದರೆ, ಅವಳಿಗೂ ಕೂಡ ಗೊತ್ತಾಗುತ್ತಿತು. ಹೆಣ್ಣನ್ನು ಅವಮಾನಿಸುವುದು ಅಶ್ವಿನಿಯ ನೀಚತನವನ್ನು ಎತ್ತಿ ತೋರಿಸುತ್ತದೆ.
ಬಿಗ್ ಬಾಸ್ ಶುರುವಾದ ದಿನದಿಂದಲೂ ಕೂಡ ತನಗೆ ಎಷ್ಟೇ ಯಾವುದೇ ರೀತಿಯ ತೊಂದರೆ ಅವಮಾನಗಳಾದರೂ ಕೂಡ ನಗುನಗುತ್ತಾ ಕಾಮಿಡಿ ಆಗಿ ತೆಗೆದುಕೊಳ್ಳುತ್ತಿದ್ದ ಗಿಲ್ಲಿ ಹೆಣ್ಣಿನ ಗೌರವದ ವಿಚಾರಕ್ಕೆ ಧಕ್ಕೆಯಾದ ಸಂದರ್ಭ ಎದುರಾದಾಗ ಬಿಗ್ ಬಾಸ್ ಮನೆಯಲ್ಲೇ ಪಪ್ರಥಮವಾಗಿ ಕೋಪಗೊಂಡು ಮಾತನಾಡಿದ ಗಿಲ್ಲಿ ನಟ. ಇಬ್ಬರು ಮೂವರು ಗಿಲ್ಲಿಯನ್ನು ಹಿಡಿದುಕೊಂಡು ಅರ್ಧ ಮೀಸೆಯನ್ನು ತೆಗೆದಾಗದಲೂ ಕೂಡ ಕೋಪಗೊಳ್ಳದೆ ತಾಳ್ಮೆಯಿಂದ ಇದ್ದಂತಹ ಗಿಲ್ಲಿ ಹೆಣ್ಣಿನ ಗೌರವದ ವಿಚಾರಕ್ಕೆ ಬಂದಂತ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ಕನ್ನಡದ ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ಇದರಿಂದಲೇ ಗೊತ್ತಾಗುತ್ತದೆ ಬಿಗ್ ಬಾಸ್ ಮನೆಯಲ್ಲಿ ಮಾನವೀಯತೆಯಿಂದ ಆಟವಾಡುತ್ತಿರುವ ಏಕೈಕ ವ್ಯಕ್ತಿ ಎಂದರೆ ಗಿಲ್ಲಿ. ಗಿಲ್ಲಿ ಇರುವುದರಿಂದಲೇ ಕಾರ್ಯಕ್ರಮದಲ್ಲಿ ನಗು, ಬಿಗ್ ಬಾಸ್ ಕಾರ್ಯಕ್ರಮವನ್ನು ಜನ ನೋಡುತ್ತಿರುವುದೇ ಗಿಲ್ಲಿ ನಟ ನೀಡುತ್ತಿರುವ ಮನೋರಂಜನೆ ಯಿಂದಾಗಿ. ಇನ್ನು ಮುಂದೆಯಾದರೂ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಆಟದ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಲಿ.



