ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಬಿಗ್ ಬಾಸ್ ಕಾರ್ಯಕ್ರಮವು ಜನರಿಗೆ ಅತ್ಯುತ್ತಮವಾದ ಮನೋರಂಜನೆಯ ರಸದೌತಣವನ್ನು ನೀಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮಾತನಾಡುವುದನ್ನು ವೀಕ್ಷಕರು ಸರಿಯಾಗಿ ಗಮನಿಸಿ ಅದು ತಪ್ಪಿದ್ದರೆ ತಪ್ಪು ಎಂದು ಸರಿ ಇದ್ದರೆ ಸರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಜಾನ್ಹವಿ ಮತ್ತು ಅಶ್ವಿನಿ ಗೌಡ ರಕ್ಷಿತಾಳನ್ನು ಟಾರ್ಗೆಟ್ ಮಾಡಿ ಹಿಯಾಳಿಸುವ ಬರದಲ್ಲಿ ಎಸ್ ಎಂಬ ಪದವನ್ನು ಬಳಕೆ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ಆಯ್ತು. ಈ ಪದ ಬಳಕೆ ಮಾಡಿರುವುದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಜೊತೆಗೆ ರಕ್ಷಿತಾ ಹಾಕುವ ಬಟ್ಟೆಗಳ ಬಗ್ಗೆ ಕೂಡ ತುಂಬಾ ಕೀಳಾಗಿ ಅಶ್ವಿನಿ ಗೌಡ ಮಾತಾಡಿದ್ದಾರೆ.
ಈ ವಿಚಾರವನ್ನು ಖಂಡಿಸುತ್ತಾ ಕಾಂತಾರದ ಸ್ವರಾಜ್ ಶೆಟ್ಟಿ , ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಶ್ವಿನಿ ಗೌಡರ ನಡೆ ಪದಬಳಿಕೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕರಾವಳಿ ಮೂಲದ ಸ್ವರಾಜ್ ಶೆಟ್ಟಿ ಇವರು ಮೂಲತಃ ರಂಗಭೂಮಿಯ ಕಲಾವಿದರು.

ಸ್ವರಾಜ್ ಶೆಟ್ಟಿ ಕಾಂತಾರದಲ್ಲಿ ಗುರುವ ಎಂಬ ಪಾತ್ರವನ್ನು ಮಾಡಿದ್ದರು . ನಂತರ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪಂಜುರ್ಲಿ ಎಂಬ ಪಾತ್ರದಲ್ಲಿ ಅಭಿನಯಿಸಿ ಜನ ಮೆಚ್ಚುಗೆಯನ್ನ ಪಡೆದುಕೊಂಡಿದ್ದಾರೆ. ತುಳು ಮತ್ತು ಕನ್ನಡ ಭಾಷೆಯಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಕ್ಷಿತಾಳ ತಂದೆ ತಾಯಿ ಶ್ರೀಮಂತರಾಗಿದ್ದರೆ ಅವಳು ಕೂಡ ಒಳ್ಳೆಯ ಬಟ್ಟೆಗಳನ್ನು ಧರಿಸುತ್ತಿದ್ದಳು. ನ್ಯಾಷನಲ್ ಟಿವಿಯ ಯೂಟ್ಯೂಬ್ ಚಾನೆಲ್ ಒಂದೇ ಒಂದರಲ್ಲಿ ಸಂದರ್ಶನವನ್ನು ನೀಡುವ ಸಂದರ್ಭದಲ್ಲಿ ಬಿಗ್ ಬಾಸ್ ರಕ್ಷಿತಾ ಶೆಟ್ಟಿಯ ಬಗ್ಗೆ ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಕಡೆಯ ಹುಡುಗಿ ಬಿಗ್ ಬಾಸ್ ಮನೆಗೆ ಹೋಗಿ ಆಟವಾಡುತ್ತಿರುವುದು ನನಗೆ ಖುಷಿಯ ವಿಚಾರ. ಟಾಸ್ಕಳ ವಿಚಾರಕ್ಕೆ ಬಂದಾಗ ಚೆನ್ನಾಗಿ ಆಡುತ್ತಿದ್ದಾಳೆ. ಮನೆಯ ಕೆಲಸ ಮಾಡುವ ವಿಚಾರದಲ್ಲಿ ಕೂಡ ಭಾಗಿಯಾಗಿದ್ದಾಳೆ, ಅವಳ ಯೋಚನೆ ಕೂಡ ಅದ್ಭುತವಾಗಿದೆ, ಎಲ್ಲಾ ವಿಚಾರದಲ್ಲಿ ಮಾತುಗಳನ್ನು ಕೂಡ ಚೆನ್ನಾಗಿ ಆಡುತ್ತಿದ್ದಾಳೆ. ಎಲ್ಲಾ ವಿಚಾರವನ್ನು ಕೂಡ ಓಪನ್ ಆಗಿ ಮಾತನಾಡುತ್ತಾ ತಪ್ಪನ್ನು ತಪ್ಪು ಎಂದು, ಸರಿಯನ್ನು ಸರಿ ಎಂದು ನೇರ ವ್ಯಕ್ತಿತ್ವ ಉಳ್ಳ ರಕ್ಷಿತ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟ ಆಡುತ್ತಿದ್ದಾಳೆ. ದೊಡ್ಡವರೇ ತುಂಬಿರುವ ಬಿಗ್ ಬಾಸ್ ಮನೆಯಲ್ಲಿ ಆ ಪುಟ್ಟ ಹುಡುಗಿ ಎಲ್ಲರಿಗಿಂತಲೂ ಅದ್ಭುತವಾಗಿ ಆಟ ಆಡುತ್ತಿದ್ದಾಳೆ. ನಮ್ಮ ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಗೆದ್ದು ಬಾ ಆಲ್ ದ ಬೆಸ್ಟ್ ಎಂದು ಹೇಳುವ ಮೂಲಕ ರಕ್ಷಿತಾ ಶೆಟ್ಟಿಗೆ ಬೆಂಬಲವನ್ನ ವ್ಯಕ್ತಪಡಿಸಿದ್ದಾರೆ.



