ರಾಜಾಮೌಳಿ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು, ಬಾಹುಬಲಿ, ಬಾಹುಬಲಿ 2, ಆರ್. ಆರ್. ಆರ್ ಚಿತ್ರದ ಮೂಲಕ ಆಸ್ಕರ್ ಅಂಗಳದಲ್ಲೂ ಭಾರತದ ಕೀರ್ತಿ ಪತಾಕೆ ಹಾರಿಸಿ. ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ ಭಾರತದ ಪ್ರಭುದ್ಧ ನಿರ್ದೇಶಕರಲ್ಲಿ ಒಬ್ಬರು. ಇದೀಗ ರಾಜಮೌಳಿ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹಾಗದ್ರೆ ಆ ಕಥೆ ಯಾವುದು ಅಂತೀರಾ ಇಲ್ಲಿದೆ ಅದರ ಮಾಹಿತಿ. ಕೇರಳ ರಾಜ್ಯದಲ್ಲಿ ಜನಿಸಿ ಗುಜರಾತ್ ರಾಜ್ಯದಲ್ಲಿ ಕೆಲಸ ಮಾಡುತ್ತಾ, ಇಡೀ ಭಾರತದಾದ್ಯಂತ ಹೊಸ ಕ್ರಾಂತಿಯನ್ನ ಹುಟ್ಟು ಹಾಕಿದ ಸಾಧಕನ ಕಥೆಯನ್ನ ಸಿನಿಮಾ ಮಾಡಲು ರಾಜಮೌಳಿ ಹೊರಟಿದ್ದಾರೆ.

ಭಾರತದ ಸಿನಿಮಾದಲ್ಲಿ ಆರ್. ಆರ್. ಆರ್ ಚಿತ್ರದ ಮೂಲಕ ವಿಶ್ವದೇಲ್ಲೆಡೆ ಪ್ರಸಿದ್ಧರಾಗಿ ಹೊಸ ಭಾಷ್ಯ ಬರೆದ ರಾಜಮೌಳಿ ಪೌರಾಣಿಕ ಕಥೆಯನ್ನ ಆಸಕ್ತದಾಯಕವಾಗಿ ಸಿನಿಮಾವಾಗಿಸುವ ವಿಶೇಷ ವ್ಯಕ್ತಿತ್ವದ ರಾಜಮೌಳಿ ಹೊಸ ಕಥೆಯೊಂದಿಗೆ ಪ್ರಯೋಗ ನೆಡೆಸಲು ಹೊರಟಿದ್ದಾರೆ. ಹೌದು ಭಾರತದಲ್ಲಿ ಶ್ವೇತ ಕ್ರಾಂತಿಗೆ ಕಾರಣರಾಗಿ ಕೋಟ್ಯಂತರ ರೈತರಿಗೆ ನೇರವಾದ ವರ್ಗಿಸ್ ಕುರಿಯನ್ ಜೀವನಾಧಾರಿತ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಸುಳಿವು ನೀಡಿದ್ದಾರೆ. ಇತ್ತೀಚಿಗೆ ರಾಜ ಮೌಳಿ ಸಂಬಂಧಿ ಗುರುವಾ ರೆಡ್ಡಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ ವರ್ಗಿಸ್ ಕುರಿಯನ್ ನಾನು ಆದರ್ಶವಾಗಿ ಸ್ವೀಕರಿಸುವ ಮೂವರು ಸಾಧಕರ ಪೈಕಿ ವರ್ಗಿಸ್ ಕುರಿಯನ್ ಕೂಡ ಒಬ್ಬರು.
ಅವರೊಬ್ಬರು ಮಹಾನ್ ಸಾಧಕರಾಗಿದ್ದು, ಅವರ ಜೀವನ ಕುರಿತು ಒಂದು ಸಿನಿಮಾ ಮಾಡಬೇಕೆಂದು ಯೋಚನೆ ಮಾಡಿದ್ದೇನೆ ಎಂದು ಹೇಳಿದ್ದರು. ವರ್ಗಿಸ್ ಕುರಿಯನ್ ಕೇರಳ ರಾಜ್ಯದಲ್ಲಿ ಜನಿಸಿ ನಂತರ ಗುಜರಾತ್ ಗೆ ತೆರಳಿ ಗುಜರಾತ್ ರಾಜ್ಯವನ್ನ ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡು ಭಾರತದಲ್ಲಿ ಶ್ವೇತ ಕ್ರಾಂತಿ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಭಾರತದಲ್ಲಿ ಜನಪ್ರಿಯ ಅಮುಲ್ ಸ್ಥಾಪನೆಗೆ ಕಾರಣರಾಗಿದ್ದು ಇದೆ ವರ್ಗಿಸ್ ಕುರಿಯನ್. ಹಾಗೇ ಹೈನುಗಾರಿಕೆಯನ್ನ ಕೃಷಿಕರ ಆದಾಯವನ್ನಾಗಿಸಿ ರೈತಾಪಿ ವರ್ಗಕ್ಕೆ ಆಶ್ರಯದಾತರಾಗಿದ್ದರು.
ಶ್ಯಾಮ್ ಬೆನಗಲ್ ನಿರ್ದೇಶಿಸಿರುವ ಮಂಥನ್ ಚಿತ್ರದಲ್ಲಿ ವರ್ಗಿಸ್ ಕುರಿಯನ್ ಜೀವನ ಕುರಿತ ಕಥೆಯಿದ್ದು ಈ ಚಿತ್ರವನ್ನ ಅಮುಲ್ ನ ರೈತರೇ ನಿರ್ಮಾಣ ಮಾಡಿರೋದು ವಿಶೇಷವಾಗಿದೆ. ವರ್ಗಿಸ್ ಕುರಿಯನ್ ಮನವಿ ಬಳಿಕ ರೈತರೆಲ್ಲ 2 ರೂಪಾಯಿ ನೀಡಿದ್ದರು. ಆ ಹಣವನ್ನೇ ಉಪಯೋಗಿಸಿ ಶ್ಯಾಮ್ ಬೆನಗಲ್ ಮಂಥನ್ ಸಿನಿಮಾ ಮಾಡುವ ಮೂಲಕ ಈ ಚಿತ್ರ ವಿಶ್ವದಾದ್ಯಂತ ಸಾಕಷ್ಟು ಜನಪ್ರಿಯತೆಗೆ ಕಾರಣವಾಗಿದ್ದು,ಭಾರತದಲ್ಲದೆ ಆಫ್ರಿಕಾ ದೇಶದಲ್ಲೂ ಪ್ರದರ್ಶನ ಮಾಡಲಾಗಿತ್ತು.
ವರ್ಗಿಸ್ ಕುರಿಯನ್ ಕುರಿತಾದ ಸಿನಿಮಾ ಮಾಡುವ ಮೂಲಕ ಮತ್ತೊಮ್ಮೆ ಭಾರತದಲ್ಲಿ ಶ್ವೇತ ಕ್ರಾಂತಿ ಹುಟ್ಟು ಹಾಕಿ ಅನೇಕ ರೈತರ ಪಾಲಿನ ಆಶಾಕಿರಣವಾದ ಸಾಧಕನ ಬಗ್ಗೆ ಸಿನಿಮಾ ಬರುತ್ತದೆ ಎನ್ನುವುದನ್ನ ತಿಳಿದ ಅನೇಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಜೀವನಾಧಾರಿತ ಚಿತ್ರಗಳು ಸಾಕಷ್ಟು ಸಕ್ಸಸ್ ಪಡೆದುಕೊಳ್ಳುತ್ತಿದ್ದು,ನಂಬಿ ನಾರಾಯಣ್ ಕುರಿತಾದ ಚಿತ್ರ, ಕರ್ನಾಟಕದಲ್ಲಿ ವಿಜಯ್ ಸಂಕೇಶ್ವರ್ ಜೀವನಧಾರಿತ ಚಿತ್ರಗಳು ತೆರೆಕಾಣುವ ಮುಖಾಂತರ ಯಶಸ್ಸನ್ನ ಕಂಡಿತ್ತು.
ಇದೀಗ ಹೊಸ ಪ್ರಯೋಗವೊಂದಕ್ಕೆ ರಾಜ ಮೌಳಿ ಸಜ್ಜುಗೊಂಡಿದ್ದು, ಸದ್ಯದಲ್ಲೇ ಸಿನಿಮಾ ಬಗೆಗಿನ ಇನ್ನಷ್ಟು ಅಪ್ ಡೇಟ್ ಸಿಗಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಕೆಲ ಸಾಧಕರ ಕಥೆಯನ್ನ ಸಿನಿಮಾ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲೂ ಇಂತಹ ಪ್ರಯತ್ನವಾಗಬೇಕಿದೆ.ಒಟ್ಟಾರೆ ಇಂತಹ ವಿಭಿನ್ನ ಪ್ರಯತ್ನಗಳು ಭಾರತ ಚಿತ್ರರಂಗದಲ್ಲಿ ಆಗಲಿ ಎನ್ನುವುದೇ ನಮ್ಮ ಆಶಯ.