ಬಿಗ್ ಬಾಸ್ ಶೋ ಅಂದ್ರೆ ಎಲ್ಲರಿಗೂ ಒಂದು ರೀತಿ ಆಸಕ್ತಿ. ಕಲಾವಿದರು ಸಹ ಈ ಶೋಗೆ ಹೋಗೋಕೆ ಕಾತುರರಾಗಿ ಕಾಯುತ್ತಿರುತ್ತಾರೆ. ಕಲಾವಿದರು ಬಿಗ್ ಬಾಸ್ ಗೆ ಬರೋದು ಒಂದು ರೀತಿ ಅವರ ಕೆರಿಯರ್ ಗೆ ಬೂಸ್ಟ್ ಸಿಕ್ಕ ಹಾಗೆ ಎಂದು ಹೇಳಿದರೂ ತಪ್ಪಲ್ಲ. ಕಿರುತೆರೆ ಅಥವಾ ಬೆಳ್ಳಿತೆರೆ ಮೂಲಕ ಸಿಗದೇ ಇರುವ ಜನಪ್ರಿಯತೆ ಬಿಗ್ ಬಾಸ್ ಶೋ ಇಂದ ಸಿಗುತ್ತದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಾರೆ. ಸಿನಿಮಾಗಳಿಗೆ ಸಹ ಬ್ರೇಕ್ ಕೊಟ್ಟು ಸಹ ಈ ಶೋಗೆ ಹೋಗುವವರು ಇದ್ದಾರೆ. ಅದೇ ರೀತಿ ಹಂಸ ಅವರು ಕೂಡ ಹೋಗಿದ್ದು. ಹೋದ ಕೆಲವೇ ವಾರಕ್ಕೆ ಹಂಸ ಅವರು ನಾಮಿನೇಟ್ ಆಗಿ ಹೊರಬಂದರು.
ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡು ಕಡೆಗಳಲ್ಲಿ ಹಂಸ ಅವರು ಗುರುತಿಸಿಕೊಂಡವರು. ಹಲವು ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಹಂಸ ಅವರು ನಟಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದರು. ಇವರದ್ದು ನೆಗಟಿವ್ ರೋಲ್ ಆಗಿತ್ತು, ರಾಜಿ ಪಾತ್ರದ ಮೂಲಕ ಹೆಚ್ಚಿನ ಜನರಿಗೆ ಇವರು ಇಷ್ಟವೂ ಆಗಿದ್ದರು. ಆದರೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಬಂದಾಗ ಸೇರಿಯಲ್ ತಂಡಕ್ಕೆ ಸುಳ್ಳು ಹೇಳಿ, ಬಿಗ್ ಬಾಸ್ ಮನೆಗೆ ಹೋಗಿದ್ದರಂತೆ ಹಂಸ. ಈ ವಿಚಾರವನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಿರ್ದೇಶಕರು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಪುಟ್ಟಕ್ಕನ ಮಕ್ಕಳು ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳಲ್ಲಿ ಒಂದು, ಈ ಧಾರಾವಾಹಿಯ ಟಿಆರ್ಪಿಯಲ್ಲಿ ಕೂಡ ಮುಂದೆ ಇರುತ್ತದೆ. ಆರೂರು ಜಗದೀಶ್ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಾರೆ. ಇನ್ನು ಮುಖ್ಯ ಪಾತ್ರದಲ್ಲಿ ಹಿರಿಯನಟಿ ಉಮಾಶ್ರೀ ಅವರು ನಟಿಸುತ್ತಿದ್ದಾರೆ ಎನ್ನುವುದು ಗೊತ್ತೇ ಇದೆ. ಇತ್ತೀಚೆಗೆ ಧಾರಾವಾಹಿಯಲ್ಲಿ ಉಮಾಶ್ರೀ ಅವರ ಮಗಳ ಪಾತ್ರ ಕೊನೆಯಾದ ನಂತರ ವೀಕ್ಷಕರಿಗೆ ಬೇಸರ ಆಗಿದೆ. ಆದರೆ ಟಿಆರ್ಪಿಯಲ್ಲಿ ಮಾತ್ರ ಧಾರಾವಾಹಿ ಹಿಂದೆ ಬಿದ್ದಿಲ್ಲ. ಈ ಧಾರಾವಾಹಿ ಇಂದ ಹಂಸ ಅವರು ಹೊರಬಂದರು.

ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರಗಳ ಕಾಲ ಇದ್ದರು ಹಂಸ. ಬಿಗ್ ಬಾಸ್ ಮನೆಯಲ್ಲಿ ಇವರು ಹೆಚ್ಚಾಗಿ ಫೇಮಸ್ ಆಗಿದ್ದು, ಲಾಯರ್ ಜಗದೀಶ್ ಅವರ ಜೊತೆಗಿನ ಸ್ನೇಹದ ಕಾರಣ. ಇವರಿಬ್ಬರ ಕೆಮಿಸ್ಟ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಜನರು ಯಂಗ್ ಜೋಡಿಗಳಿಗಿಂತ ಇವರ ಜೋಡಿಯನ್ನೇ ಇಷ್ಟಪಟ್ಟಿದ್ದರು. ಹಂಸ ಅವರು ಬೆಣ್ಣೆ ಶಾಂತಮ್ಮ ಎಂದೇ ಫೇಮಸ್ ಸಹ ಆಗಿದ್ದರು. ಆದರೆ ಕೆಲವು ತಪ್ಪುಗಳನ್ನು ಮಾಡಿಕೊಂಡ ಕಾರಣ, ಕ್ಯಾಪ್ಟನ್ ಆಗಿದ್ದಾಗ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದ ಕಾರಣ ಬಹಳ ಬೇಗ ಎಲಿಮಿನೇಟ್ ಆಗಿ ಹೊರಬಂದರು. ಆದರೆ ಇವರು ಹೊರಬಂದ ಮೇಲೆ ಹಲವು ವಿಚಾರಗಳು ಹೊರಬರುತ್ತಿದೆ.
ಹಂಸ ಅವರು ಧಾರಾವಾಹಿ ನಡೆಯುವಾಗಲೇ, ಮಧ್ಯವೇ ಹೊರಬಂದು ಬಿಗ್ ಬಾಸ್ ಮನೆಗೆ ಬಂದರು. ಆದರೆ ಧಾರಾವಾಹಿ ತಂಡಕ್ಕೆ ಸುಳ್ಳು ಹೇಳಿ ಬಂದಿದ್ದರು. 40 ದಿನಗಳ ಕಾಲ ವಿದೇಶದಲ್ಲಿ ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿದ್ದರಂತೆ. ಈ ರೀತಿ ಹೇಳಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ, ಈ ವಿಚಾರವನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರು ಸಂದರ್ಶನದಲ್ಲಿ ಹೇಳಿದ್ದು, ಇದರಿಂದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಥರ ಸುಳ್ಳು ಹೇಳಿ ಬಿಗ್ ಬಾಸ್ ಮನೆಗೆ ಹೋಗಬೇಕಾ ಎಂದು ನಗುವುದಕ್ಕೂ ಶುರು ಮಾಡಿದ್ದಾರೆ.