ಪುನೀತ್ ರಾಜ್ ಕುಮಾರ್ ಅವರು ಇದ್ದಷ್ಟು ದಿವಸ ಕೂಡ ಎಲ್ಲರಿಗೂ ಸಹಾಯ ಮಾಡಿಕೊಂಡು, ಎಲ್ಲರೊಡನೆ ಒಳ್ಳೆ ರೀತಿಯಲ್ಲಿ ಇದ್ದವರು. ಎಂದಿಗೂ ಒಬ್ಬರ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದವರಲ್ಲ. ಗಾಸಿಪ್ ಗಳಲ್ಲಿ ಪಾಲ್ಗೊಂಡವರಲ್ಲ. ಎಲ್ಲರನ್ನು ಪ್ರೀತಿಸಿ ಎಂದೇ ಹೇಳಿದ ವ್ಯಕ್ತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ನಾವೆಲ್ಲರೂ ಒಂದೇ ಎಂದು ಹೇಳಿಕೊಂಡು ಬಂದವರು. ಅದೇ ರೀತಿ ನಡೆದುಕೊಂಡು ಬಂದವರು. ಎಲ್ಲರನ್ನು ಪ್ರೀತಿಸುವ ವ್ಯಕ್ತಿ ಅಪ್ಪು. ಇಂದು ಅಪ್ಪು ಅವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದೇ ಇರಬಹುದು. ಆದರೆ ಅಪ್ಪು ಅವರ ಸಿನಿಮಾ, ಅವರ ಆದರ್ಶ ಹಾಗೂ ಅವರು ಕಲಿಸಿಕೊಟ್ಟ ಪಾಠಗಳು ನಮ್ಮ ಜೊತೆಗಿದೆ. ಅಪ್ಪು ಅವರ ಹಾಗೆ ಅವರ ಜೊತೆಗೆ ಇರುವವರು ಕೂಡ ಒಳ್ಳೇ ಹಂತಕ್ಕೆ ಬೆಳೆಯುತ್ತಿದ್ದಾರೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ಪುನೀತ್ ರಾಜ್ ಕುಮಾರ್ ಅವರ ಪೆರ್ಸನಲ್ ಬಾಡಿ ಗಾರ್ಡ್ ಚಲಪತಿ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕೆಲವು ವರ್ಷಗಳಿಂದ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸದಾ ಇರುತ್ತಿದ್ದ ಬಾಡಿ ಗಾರ್ಡ್ ಚಲಪತಿ ಅವರು. ಅಪ್ಪು ಅವರು ಎಲ್ಲೇ ಹೋದರು ಜೊತೆಗೆ ಇವರೂ ಕೂಡ ಇರುತ್ತಿದ್ದರು. ಅಪ್ಪು ಅವರನ್ನು ಹುಷಾರಾಗಿ ಕಾಯುತ್ತಿದ್ದ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ಪುನೀತ್ ಅವರು ಹೋದ ನಂತರ ಕೆಲ ದಿನಗಳ ಕಾಲ ಅಶ್ವಿನಿ ಅವರೊಡನೆ ಕೆಲಸ ಮಾಡಿದ್ದ ಚಲಪತಿ ಅವರು ನಂತರ ಕೆಲಸ ಬಿಟ್ಟು ಬಂದಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಇದ್ದ ಅಭಿಮಾನ, ಗೌರವ ಮಾತ್ರ ಎಂದಿಗೂ ಕಡಿಮೆ ಆಗಿರಲಿಲ್ಲ. ಅಪ್ಪು ಅವರ ಹುಟ್ಟುಹಬ್ಬಕ್ಕೆ ಮತ್ತು ಅವರು ಅಗಲಿದ ದಿನದಂದು ಸಮಾಧಿ ಬಳಿ ಬಂದು, ಪೂಜೆ ಸಲ್ಲಿಸುತ್ತಾರೆ. ಹಲವು ಬಾರಿ ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಇದೀಗ ಇವರ ಮಗಳು ಒಳ್ಳೆಯ ಸಾಧನೆ ಮಾಡಿದ್ದಾಳೆ.
ಹೌದು, ಚಲಪತಿ ಅವರ ಇಡೀ ಕುಟುಂಬ ಪುನೀತ್ ರಾಜ್ ಕುಮಾರ್ ಹಾಗೂ ಅವರ ಫ್ಯಾಮಿಲಿಗೆ ಸದಾ ಋಣಿಯಾಗಿದ್ದಾರೆ. ಈ ವಿಚಾರವನ್ನು ಖುದ್ದು ಚಲಪತಿ ಅವರೇ ಹಲವು ಸಾರಿ ಹೇಳಿದ್ದಾರೆ. ಇದೀಗ ಚಲಪತಿ ಅವರ ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು, ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾಳೆ. ಈ ಒಂದು ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮಗಳ ಮಾರ್ಕ್ಸ್ ಶೀಟ್ ಫೋಟೋ ಶೇರ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ ಚಲಪತಿ. ಹಾಗೆಯೇ ಮಾಧ್ಯಮದವರ ಜೊತೆಗೆ ಕೂಡ ಮಾತನಾಡಿ, ಅಪ್ಪು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಮುಂದೆ ಮಗಳನ್ನು ಚೆನ್ನಾಗಿ ಓದಿಸುವ ಹಂಬಲ ವ್ಯಕ್ತಪಡಿಸಿದ್ದಾರೆ. ಮಗಳನ್ನು ಒಳ್ಳೆಯ ಕಾಲೇಜಿಗೆ ಸೇರಿಸಲಿದ್ದಾರೆ.

ಹೌದು, ಚಲಪತಿ ಅವರ ಮಗಳ ಸ್ಕೋರ್ ತುಂಬಾ ಚೆನ್ನಾಗಿದೆ. ಚಲಪತಿ ಅವರ ಮಗಳ ಹೆಸರು ಅಮೂಲ್ಯ, ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 98, ಇಂಗ್ಲಿಷ್ ನಲ್ಲಿ 90, ಎಕನಾಮಿಕ್ಸ್ ನಲ್ಲಿ 97, ಬ್ಯುಸಿನೆಸ್ ಸ್ಟಡಿಸ್ ನಲ್ಲಿ 90, ಅಕೌಂಟೆನ್ಸಿಯಲ್ಲಿ 96, ಸ್ಟಾಟಿಸ್ಟಿಕ್ಸ್ ನಲ್ಲಿ 95 ಮಾರ್ಕ್ಸ್ ತೆಗೆದಿದ್ದಾರೆ. ಇದು ನಿಜಕ್ಕೂ ಬಹಳ ಒಳ್ಳೆಯ ಸ್ಕೋರ್ ಆಗಿದ್ದು, ಎಲ್ಲರಿಂದ ಇವರ ಮಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಲಪತಿ ಅವರ ಮಗಳು ಇದೇ ರೀತಿ ಮುಂದೆ ಚೆನ್ನಾಗಿ ಓದಿ, ತಂದೆ ತಾಯಿಯ ಹೆಸರನ್ನು ಕಾಪಾಡಲಿ ಎಂದು ಜನರು ಸಹ ವಿಶ್ ಮಾಡುತ್ತಿದ್ದಾರೆ. ಇನ್ನು ಚಲಪತಿ ಅವರ ಫ್ಯಾಮಿಲಿ ಮಾಧ್ಯಮದವರ ಜೊತೆ ಕೂಡ ಮಾತನಾಡಿದ್ದಾರೆ..ಅಪ್ಪು ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಮಗಳು ಇಷ್ಟು ಚೆನ್ನಾಗಿ ಓದಿ ಮಾರ್ಕ್ಸ್ ತೆಗೆದಿರುವುದಕ್ಕೆ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದ ಕಾರಣ ಎಂದಿದ್ದಾರೆ ಚಲಪತಿ ಅವರು. ಅಪ್ಪು ಅವರು ಇದ್ದಾಗ ಚಲಪತಿ ಅವರ ಕುಟುಂಬದ ಜವಾಬ್ದಾರಿಯನ್ನು ಅಪ್ಪು ಅವರೇ ತೆಗೆದುಕೊಂಡಿದ್ದರಂತೆ. ಚಲಪತಿ ಅವರ ಮಗಳನ್ನು ಅಪ್ಪು ಅವರೇ ಓದಿಸುತ್ತಿದ್ದರಂತೆ. ಅಪ್ಪು ಅವರು ಮಾಡಿರುವ ಆ ಎಲ್ಲಾ ಸಹಾಯಕ್ಕೂ ಓದಿನ ಮೂಲಕ ತಮ್ಮ ಮಗಳು ಧನ್ಯವಾದ ತಿಳಿಸುತ್ತಿದ್ದಾಳೆ ಎಂದು ಚಲಪತಿ ಅವರು ಮಾಧ್ಯಮಗಳ ಎದುರು ತಿಳಿಸಿದ್ದಾರೆ. ಅಪ್ಪು ಅಂದ್ರೇನೇ ಹಾಗೆ ಅಲ್ವಾ, ಎಲ್ಲರನ್ನು ತಮ್ಮವರು ಅಂದುಕೊಂಡಿದ್ದ ವ್ಯಕ್ತಿತ್ವ ಅವರು. ಇಂದು ಅಪ್ಪು ಅವರು ಇದ್ದಿದ್ರೆ ಬಹಳ ಸಂತೋಷ ಪಡ್ತಾ ಇದ್ರು.
ಇನ್ನು ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದ ಎಲ್ಲರ ಮೇಲು ಇದೆ ಎನ್ನುವುದು ಸಂತೋಷದ ವಿಷಯ ಆಗಿದೆ. ಇನ್ನು ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕಳೆದ ತಿಂಗಳು ಅವರ ಹುಟ್ಟುಹಬ್ಬ ಇತ್ತು, ಬೇಸರದಿಂದಲೇ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ. ಆದರೆ ಅಪ್ಪು ಅವರ ಸಿನಿಮಾ, ಅದರಲ್ಲೂ ಅವರ ಮೊದಲ ಸಿನಿಮಾ ಅಪ್ಪು ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಸಂತೋಷ ತಂದಿತ್ತು. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರು. ಇನ್ನು ಅಪ್ಪು ಅವರ ಹುಟ್ಟುಹಬ್ಬದ ದಿವಸ ಅಶ್ವಿನಿ ಮೇಡಂ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಗಳನ್ನು ನೀಡಿದ್ದರು. ಅಪ್ಪು ಅವರ ಬಯೋಗ್ರಫಿ ಒಂದು ಬರಲಿದೆ ಎನ್ನುವುದು ಸಂತೋಷದ ವಿಷಯ ಆಗಿತ್ತು. ಅದರ ಜೊತೆಗೆ ಒಂದು ಆಪ್ ಸಹ ಬರಲಿದೆ.
ಇದು ಅಭಿಮಾನಿಗಳಿಗಾಗಿ ತಮ್ಮ ಮೆಚ್ಚಿನ ನಾಯಕನ ಕುರಿತು ಬರುತ್ತಿರುವ ಆಪ್ ಆಗಿದ್ದು, ಇಂಥದ್ದೊಂದು ಆಪ್ ಬರುತ್ತಿರುವುದು ಇದೇ ಮೊದಲು ಎನ್ನುವ ಮಾತು ಕೇಳಿಬಂದಿದೆ. ಈ ಆಪ್ ಇಂದ ಅಪ್ಪು ಅವರು ಅಭಿಮಾನಿಗಳಿಗೆ ಇನ್ನು ಹೆಚ್ಚು ಹತ್ತಿರ ಆಗಲಿದ್ದಾರೆ. ಇನ್ನು ಅಪ್ಪು ಅವರ ಬಯೋಗ್ರಫಿ ಇಂದ ಅಭಿಮಾನಿಗಳಿಗೆ ಅಪ್ಪು ಅವರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವುದಕ್ಕೆ ಸಾಧ್ಯ ಆಗಲಿದೆ. ಶೀಘ್ರದಲ್ಲೇ ಈ ಎರಡು ಕೂಡ ಕಾರ್ಯರೂಪಕ್ಕೆ ಬರಲಿದ್ದು, ಇದಕ್ಕಾಗಿ ಅಪ್ಪು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ಮುಂದಿನ ವರ್ಷ ಅಪ್ಪು ಅವರ ಹುಟ್ಟುಹಬ್ಬಕ್ಕೆ ಯಾವ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಕಾದು ನೋಡಬೇಕಿದೆ.