ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳಲ್ಲಿ ಭಾಗ್ಯಲಕ್ಷ್ಮೀ ಕೂಡ ಒಂದು.. ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿ ಇದು. ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಾಯಕಿಯಾಗಿ ಹಾಗೂ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದ ಸುಷ್ಮಾ ರಾವ್ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದರು. ಸುಷ್ಮಾ ರಾವ್ ಅವರು ಇದುವರೆಗೂ ಸ್ಟ್ರಾಂಗ್ ಆದಂಥ ಪಾತ್ರಗಳಲ್ಲಿ ನಟಿಸಿದರು, ಆದರೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ಪಾತ್ರ ಅದಕ್ಕೆ ವಿರುದ್ಧವಾದದ್ದು, ಜನರಿಂದ ಅವರ ಪಾತ್ರಕ್ಕೆ ಬಹಳ ಮೆಚ್ಚುಗೆ ಸಿಕ್ಕಿದೆ. ಎಲ್ಲರೂ ಪ್ರೀತಿಯಿಂದ ಇವರನ್ನ ಭಾಗ್ಯಕ್ಕ ಅಂತಲೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಜನಪ್ರಿಯತೆ ಪಡೆದುಕೊಂಡಿದೆ.

ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಹಾಗೂ ಗಂಡ ತಾಂಡವ್ ಪಾತ್ರ ಮಾತ್ರವಲ್ಲ, ಅತ್ತೆ ಕುಸುಮ, ಮಕ್ಕಳಾದ ತನ್ಮಯ್, ತನ್ವಿ ಈ ಪಾತ್ರಗಳು ಕೂಡ ಜನರ ಮೆಚ್ಚುಗೆ ಪಡೆದುಕೊಂಡಿದೆ. ಇದರಲ್ಲಿ ಭಾಗ್ಯ ಮಗಳು ತನ್ವಿ ಪಾತ್ರ ಒಂದು ರೀತಿ ಹೆಚ್ಚಾಗಿ ಗೊಂದಲದಲ್ಲಿ ಇರುವ ಪಾತ್ರ. ಮೊದಲಿಗೆ ತನ್ವಿಗೆ ಅಮ್ಮನನ್ನು ಕಂಡರೆ ಇಷ್ಟವೇ ಆಗುತ್ತಿರಲಿಲ್ಲ. ಅಪ್ಪ ಅಮ್ಮನಿಗೆ ಅವಮಾನ ಮಾಡೋ ಹಾಗೆ ತಾನು ಕೂಡ ಮಾಡುತ್ತಿದ್ದಳು. ಬಹಳ ಸಮಯದ ನಂತರ ಅಮ್ಮ ಅಂದ್ರೆ ಏನು ಅಂತ ತನ್ವಿಗೆ ಅರ್ಥ ಆಯ್ತು. ಮಗಳ ಮಾತಿಗಾಗಿ ಮತ್ತು ತಾಂಡವ್ ಇಂದ ಆದ ಅವಮಾನಕ್ಕೆ ಭಾಗ್ಯ 10ನೇ ತರಗತಿ ಪರೀಕ್ಷೆಯನ್ನು ಕೂಡ ಬರೆದು ಪಾಸ್ ಮಾಡಿದಳು. ನಂತರ ಮನೆಯಲ್ಲಾದ ಕೆಲವು ಘಟನೆಗಳಿಂದ ತನ್ವಿಗೆ ಅಮ್ಮನ ಬೆಲೆ ಅರ್ಥವಾಯಿತು.
ಅಮ್ಮನ ಮೇಲೆ ಪ್ರೀತಿ ಇದ್ದರು ಸಹ ಕೆಲವೊಮ್ಮೆ ಅಮ್ಮ ಇಷ್ಟ, ಇನ್ನು ಕೆಲವು ಸಂದರ್ಭಗಳಲ್ಲಿ ಅಪ್ಪ ಅಂದ್ರೆ ಇಷ್ಟ.. ಹೀಗೆ ಪುಟ್ಟ ಹುಡುಗಿ ತನ್ವಿಯ ಪಾತ್ರ ಮುಂದುವರೆಯುತ್ತಿದೆ. ಈ ತನ್ವಿ ಪಾತ್ರದ ಮೂಲಕ ಹೆಸರು ಮಾಡಿರುವುದರ ಜೊತೆಗೆ ಈಗ ಬೇರೆ ವಿಚಾರಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದು ಪಿಯುಸಿ ರಿಸಲ್ಟ್ ವಿಚಾರಕ್ಕೆ.. ಈಗಷ್ಟೇ ಪಿಯುಸಿ ರಿಸಲ್ಟ್ ಬಂದಿದೆ. ಅದರಲ್ಲಿ ತನ್ವಿ 91% ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾಳೆ. ಇದರಲ್ಲೇನಿದೆ ವಿಶೇಷತೆ, ಈಗ ಎಲ್ಲಾ ಮಕ್ಕಳು ಕೂಡ 90% ಗಿಂತ ಹೆಚ್ಚು ಮಾರ್ಕ್ಸ್ ಪಡೆಯುತ್ತಾರೆ ಅಂತ ನಿಮಗೆ ಅನ್ನಿಸಬಹುದು. ಆದರೆ ಶೂಟಿಂಗ್ ಹೋಗ್ತಾ, ಕೆಲಸ ಮಾಡ್ತಾ, ಓದಿ ಇಷ್ಟು ಮಾರ್ಕ್ಸ್ ಪಡೆಯೋದು ಸಾಮಾನ್ಯ ವಿಷಯ ಅಂತೂ ಅಲ್ಲ ಅಲ್ವ.. ಪಿಯುಸಿ ಪರೀಕ್ಷೆ ವೇಳೆ ಹೇಗಿತ್ತು, ಇಷ್ಟು ಮಾರ್ಕ್ಸ್ ತೆಗೆಯೋಕೆ ಹೇಗೆ ಸಾಧ್ಯ ಆಯ್ತು ಅಂತ ತನ್ವಿ ಮಾತನಾಡಿದ್ದಾರೆ.

ಧಾರಾವಾಹಿಯಲ್ಲಿ ಈ ಪುಟ್ಟ ಹುಡುಗಿಯ ಹೆಸರು ತನ್ವಿ, ಆದರೆ ರಿಯಲ್ ಲೈಫ್ ನಲ್ಲಿ ಅಮೃತ ವರ್ಷಿಣಿ ಗೌಡ ಇವರ ಹೆಸರು. ರಿಸಲ್ಟ್ ಬಂದ ಬಳಿಕ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ತನ್ವಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾಳೆ. ಶೂಟಿಂಗ್ ನಲ್ಲಿ ಇದ್ದಾಗ ಬುಕ್ ತೆಗೆದುಕೊಂಡು ಓದುತ್ತಾ ಕೂತಿದ್ರುನು, ಯಾವಾಗ್ಲೂ ಓದೋಕೆ ಆಗ್ತಾ ಇರಲಿಲ್ಲವಂತೆ. ಅಮೃತ ಅವರಿಗೆ 24 ಗಂಟೆಗಳ ಕಾಲ ಓದ್ತಾನೆ ಇರೋದು ಇಷ್ಟವಿಲ್ಲ. ಕೆಲವು ಗಂಟೆಗಳ ಕಾಲ ಚೆನ್ನಾಗಿ ಓದಿ ಅರ್ಥ ಮಾಡಿಕೊಳ್ಳಬೇಕು ಅನ್ನೋದು ಅವರ ಕಾನ್ಸೆಪ್ಟ್ ಆಗಿದೆ. ಪಿಯುಸಿ ಪರೀಕ್ಷೆಯಲ್ಲಿ ಕೂಡ ಅದೇ ರೀತಿ ಮಾಡಿದ್ದಂತೆ ತನ್ವಿ ಅವರು. ಪರೀಕ್ಷೆ ಟೈಮ್ ಅಲ್ಲಿ ಅಮೃತಾ ಅವರ ತಾಯಿ ಬಯ್ಯುತ್ತಾ ಇದ್ದರಂತೆ. ಯಾವಾಗಲು ಓದು ಓದು ಅಂತ ಟಾರ್ಚರ್ ಮಾಡ್ತಾ ಇದ್ರಂತೆ.
ಇದರ ಬಗ್ಗೆ ಮಾತನಾಡಿರುವ ಅಮೃತಾ, ಎಲ್ಲರ ಅಮ್ಮನ ಥರ ನನ್ನ ಅಮ್ಮ ಕೂಡ ಯಾವಾಗ್ಲೂ ಓದು ಓದು ಅಂತ ಟಾರ್ಚರ್ ಮಾಡ್ತಾ ಇದ್ರು. ಒಳ್ಳೇ ಮಾರ್ಕ್ಸ್ ತೆಗಿಬೇಕು, 90% ಆದ್ರು ಬರಬೇಕು ಅಂತ ಹೇಳ್ತಾ ಇದ್ರು. ಅಮ್ಮ ಹೇಳೋದು ಕೇಳಿ ನನಗೆ ಸ್ವಲ್ಪ ಟೆನ್ಷನ್ ಆಗೋದು. ಆದರೆ ರಿಸಲ್ಟ್ ಬಂದಮೇಲೆ, ಅಮೃತ ಅವರ ಅಮ್ಮನಿಗೆ ತುಂಬಾ ಸಂತೋಷ ಆಗಿದೆಯಂತೆ. 90% ತೆಗಿಬೇಕು ಅಂದುಕೊಂಡಿದ್ದ ಮಗಳು 91% ತೆಗೆದಾಗ ಯಾವ ತಾಯಿಗೆ ತಾನೇ ಸಂತೋಷ ಆಗೋದಿಲ್ಲ ಹೇಳಿ.. ಅಮೃತ ಅವರ ರಿಯಲ್ ಲೈಫ್ ತಾಯಿಗೆ ಕೂಡ ಮಗಳ ಈ ಸ್ಕೋರ್ ನೋಡಿ ತುಂಬಾ ಸಂತೋಷವಾಗಿದೆ. ಇಷ್ಟು ಸ್ಕೋರ್ ಮಾಡಿರುವ ಬಗ್ಗೆ ಮಗಳ ಬಗ್ಗೆ ಅವರಿಗೆ ಹೆಮ್ಮೆ ಸಹ ಇದೆ. ಅವರು ಸಹ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ..

ಇನ್ನು ಅಮೃತಾ ಓದಿದ್ದು ಹೇಗೆ ಎಂದು ಕೂಡ ತಿಳಿಸಿದ್ದಾರೆ. ಕಾಲೇಜಿನಲ್ಲಿ ಶಿಕ್ಷಕರು ಮತ್ತು ಫ್ರೆಂಡ್ಸ್ ಎಲ್ಲರೂ ತುಂಬಾ ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಅಮೃತಾ. ಟೀಚರ್ಸ್ ಗಳು ಪಾಠ ಚೆನ್ನಾಗಿ ಅರ್ಥ ಆಗುವ ಹಾಗೆ ಹೇಳಿಕೊಡುತ್ತಾ ಇದ್ದರಂತೆ. ಇನ್ನು ಫ್ರೆಂಡ್ಸ್ ಎಲ್ಲರೂ ನೋಟ್ಸ್ ಗಳನ್ನ ವಾಟ್ಸಾಪ್ ನಲ್ಲಿ ಕಳಿಸಿಕೊಡುತ್ತಿದ್ದರಂತೆ. ಅದೆಲ್ಲವೂ ಅಮೃತಾ ಅವರಿಗೆ ಓದುವುದಕ್ಕೆ ತುಂಬಾ ಹೆಲ್ಪ್ ಮಾಡಿದೆಯಂತೆ. ಎಲ್ಲರ ಹೆಲ್ಪ್ ಇಂದ, ಜೊತೆಗೆ ಓದೋ ಕಡೆಗೆ ಹರಿಸಿದ ಗಮನದಿಂದ ಇಷ್ಟು ಒಳ್ಳೆಯ ಸ್ಕೋರ್ ಮಾಡೋಕೆ ಸಾಧ್ಯ ಆಯಿತು ಎಂದಿದ್ದಾರೆ ಅಮೃತಾ. ಧಾರಾವಾಹಿಯ ನಟನೆ ಜೊತೆಗೆ ಎಕ್ಸಾಂ ನಲ್ಲಿ ಸಹ ಒಳ್ಳೇ ಸ್ಕೋರ್ ಮಾಡಿ, ಮುಂದೆ ಒಳ್ಳೆಯ ರೀತಿಯಲ್ಲಿ ಓದಬೇಕು, ಒಳ್ಳೇ ಕೆಲಸ ಪಡೆಯಬೇಕು ಅನ್ನೋ ಕನಸು ಅಮೃತ ವರ್ಷಿಣಿ ಅವರಿಗೆ ಇದೆ.
ಇನ್ನು ಇವರು ಸ್ಕೋರ್ ಮಾಡಿರುವುದು ಎಷ್ಟು ಎಂದು ನೋಡುವುದಾದರೆ.. ಕನ್ನಡದಲ್ಲಿ 100ಕ್ಕೆ 97, ಇಂಗ್ಲಿಷ್ ನಲ್ಲಿ 81, ಎಕನಾಮಿಕ್ಸ್ ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್ ನಲ್ಲಿ 95 ಮಾರ್ಕ್ಸ್ ಪಡೆದಿದ್ದಾರೆ. ಒಟ್ಟು 600 ಅಂಕಕ್ಕೆ 565 ಮಾರ್ಕ್ಸ್ ಪಡೆದು, 91% ಗಳಿಸಿ, ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ. ಧಾರಾವಾಹಿಯಲ್ಲಿ ಈಗಷ್ಟೇ 10ನೇ ತರಗತಿ ಎಕ್ಸಾಂ ಬರೆದು, ಪಿಯುಸಿ ಸೇರಿದ್ದಾಳೆ ತನ್ವಿ. ಆದರೆ ರಿಯಲ್ ಲೈಫ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಡೆದು, ಇಷ್ಟು ಒಳ್ಳೆಯ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ. ತನ್ವಿಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಂದ ಪ್ರಶಂಸೆ ಸಿಗುತ್ತಿದೆ.