ಕಳೆದ ಐದಾರು ತಿಂಗಳುಗಳಿಂದ ಎಲ್ಲಾ ಕಡೆ ಪವಿತ್ರಾ ಗೌಡ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇದೆ. ರೇಣುಕಾಸ್ವಾಮಿ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಪವಿತ್ರಾ ಗೌಡ ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಸಿಕ್ಕಿ ಹೊರಬಂದಿದ್ದಾರೆ. ಈಕೆ ಒಳಗೆ ಹೋಗಿ ಪಶ್ಚಾತ್ತಾಪ ಪಟ್ಟ ಹಾಗಂತು ಕಾಣಲೇ ಇಲ್ಲ. ಚೆನ್ನಾಗಿ ಮೇಕಪ್ ಮಾಡಿಕೊಂಡು ಹೊರಗಡೆ ಬರುವುದನ್ನು ನೋಡಿ ಜನರು ಸಹ ಶಾಕ್ ಆಗಿದ್ದರು. ಹೊರಗಡೆ ಬಂದ ನಂತರ ಪವಿತ್ರಾ ಗೌಡ ಎಲ್ಲೂ ಕೂಡ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ಜನರ ಎದುರು ಬಂದೆ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ. ಬಹಳ ದಿನಗಳ ನಂತರ ಬಂದಿರುವ ಪೋಸ್ಟ್ ಇದು.

ಪವಿತ್ರಾ ಗೌಡ ಶೇರ್ ಮಾಡಿರುವುದು ಮಗಳು ಖುಷಿ ಗೌಡ ಪೋಸ್ಟ್ ಮಾಡಿರುವ ವಿಡಿಯೋ ಆಗಿದೆ. ನಿನ್ನೆಯಷ್ಟೇ ಪವಿತ್ರಾ ಗೌಡ ಬರ್ತ್ ಡೇ ನಡೆದಿದೆ. ಇಷ್ಟು ವರ್ಷಗಳ ಕಾಲ ಪವಿತ್ರಾ ಗೌಡ ಬರ್ತ್ ಡೇ ಜೋರಾಗಿ ನಡೆಯುತ್ತಿತ್ತು. ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅಷ್ಟೆಲ್ಲಾ ಸೆಲೆಬ್ರೇಷನ್ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಬರ್ತ್ ಡೇ ಸೆಲೆಬ್ರೇಷನ್ ಫೋಟೋಗಳನ್ನು ಯಾರು ಸಹ ಶೇರ್ ಮಾಡಿಕೊಂಡಿಲ್ಲ. ಆದರೆ ಪವಿತ್ರಾ ಗೌಡ ಮಗಳು ತಾಯಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು, ಅದನ್ನು ಪವಿತ್ರಾ ಗೌಡ ಶೇರ್ ಮಾಡಿಕೊಂಡಿದ್ದಾರೆ..
ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿರುವ ಖುಷಿ ಗೌಡ, ಕಳೆದ ವರ್ಷ ಬಹಳ ಕಷ್ಟಕರವಾಗಿದ್ದು, ಈ ಕಷ್ಟಗಳನ್ನೆಲ್ಲ ನೀನು ಎದುರಿಸಿ ಬಂದಿದ್ದಿಯಾ, ಈ ವರ್ಷ ಎಲ್ಲವೂ ಚೆನ್ನಾಗಿರಲಿ ಎಂದು ವಿಶ್ ಮಾಡಿದ್ದಾರೆ. ಹಾಗೆಯೇ ಅಮ್ಮನಿಗೆ ಪ್ರಾಮಿಸ್ ಮಾಡಿದ್ದು, ನೀನು ಹೆಮ್ಮೆ ಪಡುವ ಹಾಗೆ ನಾನು ಬದುಕುತ್ತೇನೆ ಎಂದು ಹೇಳಿದ್ದಾರೆ ಖುಷಿ ಗೌಡ. ಮಗಳ ಪ್ರೀತಿಯ ವಿಶ್ ಅನ್ನು ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ಲವ್ ಯು ಮೋರ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಜನರು ಯಾವುದೇ ರೀತಿಯಲ್ಲಿ ರಿಯಾಕ್ಟ್ ಮಾಡಿಲ್ಲ, ತಾಯಿ ಏನೇ ಮಾಡಿದ್ದರು ಮಕ್ಕಳಿಗೆ ಯಾವತ್ತೂ ಅಮ್ಮಾನೇ ಸ್ಪೂರ್ತಿ ಆಗಿರುತ್ತಾರೆ. ಹಾಗಾಗಿ ಈ ವಿಡಿಯೋ ಜನರಿಗೆ ತುಂಬಾ ಇಷ್ಟವಾಗಿದೆ.

ಇನ್ನು ಪವಿತ್ರಾ ಗೌಡ ಕಡೆಯಿಂದ ಆದ ತಪ್ಪಿಗೆ ಒಂದು ಇಡೀ ಕುಟುಂಬ ಕಷ್ಟಪಡುತ್ತಿರುವುದು ನಿಜ. ಪವಿತ್ರಾ ಗೌಡ ಹೊರಗಡೆ ಬರುವ ವಿಡಿಯೋ ನೋಡಿದರೆ ಅವರಲ್ಲಿ ಆ ಗಿಲ್ಟ್ ಇದೆ ಎಂದು ಸಹ ಅನ್ನಿಸಲಿಲ್ಲ. ಮೇಕಪ್ ಮಾಡಿಕೊಂಡು ಒಂದು ರೆಸಾರ್ಟ್ ಇಂದ ಹೊರಗಡೆ ಬರುವ ಹಾಗೆ ಬಂದಿದ್ದರು. ಹೊರಗಡೆ ಬಂದ ಕೆಲವೇ ದಿನಕ್ಕೆ ಇದೀಗ ಅವರ ಹುಟ್ಟುಹಬ್ಬ ಸಹ ಬಂದಿದೆ. ಇಷ್ಟು ವರ್ಷ ಹುಟ್ಟುಹಬ್ಬವನ್ನು ದರ್ಶನ್ ಅವರ ಜೊತೆಗೆ ಸೆಲೆಬ್ರೇಟ್ ಮಾಡುತ್ತಿದ್ದರೋ ಏನೋ, ಆದರೆ ಈ ವರ್ಷ ದರ್ಶನ್ ಅವರು ಬೇರೆ ಕಡೆ ಇದ್ದಾರೆ. ಹಾಗೆಯೇ ದರ್ಶನ್ ಅವರ ಆರೋಗ್ಯದಲ್ಲಿ ಸಹ ಸಮಸ್ಯೆ ಇದೆ, ಜೊತೆಗೆ ದರ್ಶನ್ ಅವರು ಕುಟುಂಬದ ಜೊತೆಗೆ ಇರಬೇಕು ಎಂದು ನಿರ್ಧಾರ ಸಹ ಮಾಡಿರುವ ಹಾಗಿದೆ.
ಹೌದು, ದರ್ಶನ್ ಅವರು ಹೊರಗಡೆ ಬಂದ ನಂತರ ಒಂದಷ್ಟು ದಿವಸ, ಮೈಸೂರಿನಲ್ಲಿ ಇದ್ದರು. ಆದರೆ ಮೈಸೂರಿನಲ್ಲಿ ಇರಬಹುದಾದಷ್ಟು ಸಮಯ ಈಗಾಗಲೇ ಮುಗಿದಿದ್ದು, ಇವರ ಕೇಸ್ ನಾಳೆ ಇದೆ. ನಾಳೆ ದರ್ಶನ್ ಅವರು ಮತ್ತು ಪವಿತ್ರಾ ಅವರು ಇಬ್ಬರು ಸಹ ಕೋರ್ಟ್ ಗೆ ಹಾಜರಾಗಬೇಕಿದೆ. ನಾಳೆ ಇನ್ನಷ್ಟು ವಿಚಾರಗಳಿಗೆ ತೀರ್ಪು ಸಿಗಲಿದೆ. ಒಟ್ಟಿನಲ್ಲಿ ಕಳೆದ ವರ್ಷದ 6 ತಿಂಗಳುಗಳ ಕಾಲ ದರ್ಶನ್ ಅವರ ಪಾಲಿಗಂತು ಬಹಳ ಚಾಲೆಂಜಿಂಗ್ ಆಗಿತ್ತು, ಈ ವರ್ಷ ಅವರು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡು, ದರ್ಶನ್ ಅವರ ಸಿನಿಮಾ ಈ ವರ್ಷ ತೆರೆಗೆ ಬರಲಿ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.